ಮುಳಬಾಗಿಲು: ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಬಿಎಲ್ಒ ಬಾರದಿದ್ದರಿಂದ ಆಕ್ರೋಶ

ಮುಳಬಾಗಿಲು: ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಬಿಎಲ್ಒ ಬಾರದಿದ್ದರಿಂದ ಆಕ್ರೋಶ

ಮುಳಬಾಗಿಲು: ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ಬಿಎಲ್ಒ ಬಾರದಿದ್ದರಿಂದ ಆಕ್ರೋಶ

ಮುಳಬಾಗಿಲು: ಮತದಾರರ ಪಟ್ಟಿಯ ಪರಿಷ್ಕರಣೆ ವೇಳೆ ತಿದ್ದುಪಡಿ ಮತ್ತಿತರ ಕಾರಣಗಳಿಗಾಗಿ ನೋಟಿಸ್‌ ಪಡೆದಿದ್ದ ಮತದಾರರು ದಾಖಲೆ ಒದಗಿಸಲು ಕಾದುಕುಳಿತರೂ ಬಿಎಲ್ಒ ಬಾರದಿದ್ದರಿಂದ ಬೇಸತ್ತ ಮತದಾರರು ಶುಕ್ರವಾರ ಆಕ್ರೋಶ ವ್ಯಕ್ತಪ‍ಡಿಸಿದರು.

ನಗರದ 112 ಮತಗಟ್ಟೆ ಸಂಖ್ಯೆಯ ಅಂಬೇಡ್ಕರ್ ಕಾಲೊನಿ, ಹೊಸ ಎಡಿ ಕಾಲೊನಿಯ 60 ಮತದಾರರಿಗೆ ದಾಖಲೆ ಒದಗಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳುವಂತೆ ಆಯೋಗ ನೋಟಿಸ್‌ ನೀಡಿತ್ತು.

ನೋಟಿಸ್‌ ಸ್ವೀಕರಿಸಿದ ಮತದಾರರು ದಾಖಲೆಗಳೊಂದಿಗೆ ಬಿಇಒ ಕಚೇರಿಗೆ ಬಂದಿದ್ದರು. ‌ಬೆಳಗ್ಗೆಯಿಂದ ಕಚೇರಿ ಬಳಿ ಕಾಯುತ್ತಾ ಕುಳಿತಿದ್ದರೂ ಬಿಎಲ್‌ಒ ಹರೀಶ್‌ ನಿಗದಿತ ಸ್ಥಳಕ್ಕೆ ಬರಲಿಲ್ಲ. ಮಧ್ಯಾಹ್ನ ಅಧಿಕಾರಿಯ ಮೊಬೈಲ್‌ ಫೋನ್‌ಗೆ ಕರೆ ಮಾಡಿದರೂ ಸ್ವೀಕರಿಸದಿದ್ದರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಎಸ್ಐಆರ್ ಅಧಿಕಾರಿ ಬಿ.ಕೆ.ಸಂಜಯ್, ವರದರಾಜು ಸ್ಥಳಕ್ಕೆ ಭೇಟಿ ನೀಡಿ, ಮತದಾರರ ಆಕ್ರೋಶ ಶಮನಗೊಳಿಸಲು ಯತ್ನಿಸಿದರು. ಬಿಎಲ್‌ಒ ಹರೀಶ್‌ಗೆ ಫೋನ್ ಮಾಡಿದಾಗ ಆಸ್ಪತ್ರೆಗೆ ದಾಖಲಾಗಿರುವುದಾಗಿ ಹೇಳಿದ್ದರಿಂದ, ಪರ್ಯಾಯ ವ್ಯವಸ್ಥೆ ಮಾಡಿದರು.

ಮತದಾರರನ್ನು ಕಾಯಿಸಿದ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ