ಗದಗದಲ್ಲಿ ಹೆಸರುಕಾಳು ಬೆಲೆ ಹೆಚ್ಚಳ, ಆವಕ ಶೇ 70ರಷ್ಟು ಕುಸಿತ

ಗದಗದಲ್ಲಿ ಹೆಸರುಕಾಳು ಬೆಲೆ ಹೆಚ್ಚಳ, ಆವಕ ಶೇ 70ರಷ್ಟು ಕುಸಿತ

ಗದಗದಲ್ಲಿ ಹೆಸರುಕಾಳು ಬೆಲೆ ಹೆಚ್ಚಳ, ಆವಕ ಶೇ 70ರಷ್ಟು ಕುಸಿತ

ಗದಗ: ಜಿಲ್ಲೆಯ ಪ್ರಮುಖ ಬೆಳೆ ಹೆಸರುಕಾಳಿಗೆ ಈ ಬಾರಿ ಉತ್ತಮ ದರವಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ ₹10 ಸಾವಿರಕ್ಕೆ ಮಾರಾಟವಾಗುತ್ತಿದೆ. ಮಳೆ ಕೊರತೆಯಿಂದ ಹೆಚ್ಚಿನ ಇಳುವರಿ ಸಿಗದೆ, ಶೇ 70ರಷ್ಟು ಆವಕ ಕುಸಿದಿದೆ.

‘ಕಳೆದ ವರ್ಷ ಕ್ವಿಂಟಲ್‌ಗೆ ₹8 ಸಾವಿರದವರೆಗೆ ದರವಿತ್ತು. ಕೈಯಲ್ಲಿ ಬಿಡಿಸಿದ ಹೆಸರುಕಾಳಿಗೆ ಹೆಚ್ಚಿನ ದರವಿದೆ. ಯಂತ್ರದ ಮೂಲಕ ಕಟಾವು ಮಾಡಿದರೆ ಕಡಿಮೆ ದರವಿದೆ. ಅಖಂಡ ಧಾರವಾಡ ಭಾಗದ ಹೆಸರುಕಾಳು ರುಚಿಕರ. ಇದಕ್ಕೆ ಬೇಡಿಕೆ ಇರುವ ಕಾರಣ ಹೊರ ರಾಜ್ಯಗಳು ಅಲ್ಲದೇ ಪಾಕಿಸ್ತಾನದ ಗಡಿವರೆಗೆ ರವಾನೆ ಆಗುತ್ತದೆ’ ಎಂದು ವ್ಯಾಪಾರಿಗಳು ತಿಳಿಸಿದರು.

‘ಹೆಸರುಕಾಳಿಗೆ ಆರಂಭದಲ್ಲಿ ಕ್ವಿಂಟಲ್‌ಗೆ ₹12 ಸಾವಿರ ದರವಿತ್ತು. ಬಿತ್ತನೆ, ಇಳುವರಿ ಕಡಿಮೆ ಆಗಿರುವು ದರಿಂದ ಸ್ಥಳೀಯವಾಗಿ ಆವಕ ಕುಸಿಯಿತು. ಜಿಲ್ಲೆಯ ರೋಣ, ಲಕ್ಷ್ಮೇಶ್ವರ ಸೇರಿ ಬಾಗಲಕೋಟೆ, ರಾಮದುರ್ಗದಿಂದಲೂ ಇಲ್ಲಿಗೆ ಹೆಸರುಕಾಳು ತಂದು ಮಾರುತ್ತಾರೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಸೇರಿ ಉತ್ತರ ಭಾರತದಲ್ಲಿ ಉತ್ತಮ ಬೇಡಿಕೆಯಿದೆ’ ಎಂದು ಗದಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾರ್ಯದರ್ಶಿ ಸುವರ್ಣಾ ವಾಲಿಕಾರ ತಿಳಿಸಿದರು.

‘ಈ ಮೊದಲೆಲ್ಲ ಆಗಸ್ಟ್‌ ತಿಂಗಳಲ್ಲಿ ಆವಕ ಆರಂಭಗೊಂಡು, ಡಿಸೆಂಬರ್‌ ಅಂತ್ಯದವರೆಗೆ ಇರುತಿತ್ತು. ಈ ವರ್ಷವೂ ಆಗಸ್ಟ್‌ನಲ್ಲಿ ಆವಕ ಆರಂಭವಾಗಿದ್ದು, ಗಣೇಶ ಚತುರ್ಥಿ ವೇಳೆಗೆ ಮುಗಿಯುತ್ತದೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಸ್ಥಳೀಯ ವ್ಯಾಪಾರಿಗಳು ಪಾಲ್ಗೊಳ್ಳುತ್ತಾರೆ. ವಿದೇಶ ಗಳಿಗೆ ರಫ್ತಾಗುವ ಪ್ರಮಾಣ ಕಡಿಮೆ ಆಗಲಿದೆ’ ಎಂದು ಗದಗ ಎಪಿಎಂಸಿಯ ಪಿ.ಎನ್.ಮೂಲಿಮನಿ ಟ್ರೇಡರ್ಸ್‌ನ ರಾಜು ಮೂಲಿಮನಿ ತಿಳಿಸಿದರು.

‘ಕಳೆದ ವರ್ಷ ಎಕರೆಗೆ 6 ರಿಂದ 7 ಕ್ವಿಂಟಲ್ ಹೆಸರುಕಾಳು ಸಿಕ್ಕಿತ್ತು. ಈ ವರ್ಷ ಎಕರೆಗೆ 3 ಕ್ವಿಂಟಲ್‌ ಮಾತ್ರ ಸಿಕ್ಕಿದೆ. ಗ್ರೇಡಿಂಗ್ ಆಧರಿಸಿ ಎಪಿಎಂಸಿಯಲ್ಲಿ ಕ್ವಿಂಟಲ್‌ಗೆ ₹8,100 ದರ ಸಿಕ್ಕಿತು. ಕೈಯಲ್ಲಿ ಕಾಳು ಬಿಡಿಸಿದ್ದರಿಂದ ಕಾರ್ಮಿಕರ ಕೂಲಿಗೆ ಹೆಚ್ಚು ಖರ್ಚಾಯಿತು’ ಎಂದು ಕೋಟುಮಚಗಿ ರೈತ ಬಸವರಾಜ ಗೋದಿ ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ