ಮಂಗಳೂರಿನ ಹಳೆ ಬಂದರಿಗೆ ಸಿಎಂ ಭೇಟಿ; ಮೀನುಗಾರರ ಜೊತೆ ಚರ್ಚೆ

ಮಂಗಳೂರಿನ ಹಳೆ ಬಂದರಿಗೆ ಸಿಎಂ ಭೇಟಿ; ಮೀನುಗಾರರ ಜೊತೆ ಚರ್ಚೆ

ಮಂಗಳೂರಿನ ಹಳೆ ಬಂದರಿಗೆ ಸಿಎಂ ಭೇಟಿ; ಮೀನುಗಾರರ ಜೊತೆ ಚರ್ಚೆ

ಮಂಗಳೂರು: ಎರಡು ದಿನಗಳಿಂದ ಮಂಗಳೂರಿನಲ್ಲೇ ವಾಸ್ತವ್ಯ ಹೂಡಿರುವ ಮುಖ್ಯಮಂತ್ರಿ ‌ಡಿ.ಕೆ. ಶಿವಕುಮಾರ್, ಶನಿವಾರ ಬೆಳಿಗ್ಗೆ ಮಂಗಳೂರಿನ ಹಳೆ ಬಂದರಿಗೆ ಭೇಟಿ ನೀಡಿ, ಮೀನುಗಾರ ಕಾರ್ಮಿಕರು, ಮಹಿಳೆಯರೊಂದಿಗೆ ಚರ್ಚಿಸಿದರು.

ಮೀನುಗಾರರ ಸಮಸ್ಯೆ ಆಲಿಸಿದರು, ಮಹಿಳೆಯರ ಅಳಲು ಕೇಳಿಸಿಕೊಂಡರು.

ಶೌಚಾಲಯದಂತಹ ಮೂಲ ಸೌಕರ್ಯದ ಕೊರತೆ ಇರುವ ಬಗ್ಗೆ ಮಹಿಳೆಯರು ತಮ್ಮ ನೋವು ತೋಡಿಕೊಂಡರು.‌

ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ‌ಸಿಎಂ, 'ನನ್ನ ಭೇಟಿ ಕಾರಣಕ್ಕೆ ಇಲ್ಲಿ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ ಎಂಬ ಸಂಗತಿ ತಿಳಿದುಬಂತು. ಇದರ ಬಗ್ಗೆ ನನಗೆ ಸಮಾಧಾನ ಇಲ್ಲ. ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿರುವ ಸ್ಥಳೀಯ, ಹೊರ ರಾಜ್ಯಗಳ ಕಾರ್ಮಿಕರು ಬಹುಸಂಖ್ಯೆಯಲ್ಲಿ ಇಲ್ಲಿ ಇದ್ದಾರೆ. ಅವರಿಗೆ‌ ಇದೇ ಬದುಕಾಗಿದ್ದು, ಅವರ ದೈನಂದಿನ ಚಟುವಟಿಕೆಗೆ ಅಡ್ಡಿ ಆಗಬಾರದು. ಇದರ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್‌ಗೆ ತಿಳಿಸಿದ್ದೇನೆ. ಅಧಿಕಾರಿಗಳಿಂದಲೇ ಇಂತಹ ಆದೇಶ ಆಗಿದ್ದರೆ ಅಂತಹ ಅಧಿಕಾರಿಯನ್ನು ಅಮಾನತು‌ ಮಾಡಲಾಗುವುದು' ಎಂದರು.

ಮೀನುಗಾರ ಸಂಘಟನೆ ಪ್ರಮುಖರು ಶುಕ್ರವಾರ ಭೇಟಿ ಮಾಡಿ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಅಳಿವೆ ಬಾಗಿಲಿನಲ್ಲಿ ಡ್ರೆಜ್ಜಿಂಗ್ ಮಾಡುವ‌ ಸಂಬಂಧ ತಾಂತ್ರಿಕ ವರದಿ ಪಡೆದು ಮುಂದಿನ‌ ಕ್ರಮ ಕೈಗೊಳ್ಳಲಾಗುವುದು‌. ಹಳೆ ಬಂದರು ಪ್ರದೇಶದಲ್ಲಿ ಪ್ರತ್ಯೇಕ ಆಸ್ಪತ್ರೆ, ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಾಗುವುದು. ಇಲ್ಲಿ ಮಾಫಿಯಾ ಇರುವ ಬಗ್ಗೆಯೂ ಮೀನುಗಾರರು ದೂರಿದ್ದಾರೆ. ಇವುಗಳಿಗೆ ನಾವು ಅವಕಾಶ ಕೊಡುವುದಿಲ್ಲ. ಎಷ್ಟೇ ಪ್ರಭಾವಿ ಇದ್ದರೂ ಕ್ರಮ ಕೈಗೊಳ್ಳುವಂತೆ ಪೊಲೀಸ್ ಕಮಿಷನರ್‌ಗೆ ಸೂಚಿಸಲಾಗಿದೆ ಎಂದು ಹೇಳಿದರು.

ಬೋಟ್ ಹತ್ತಿ ಸಮುದ್ರದಲ್ಲಿ ವಿಹಾರ ಮಾಡಿದ ಮುಖ್ಯಮಂತ್ರಿ, ಅಳಿವೆಬಾಗಿಲಿನಲ್ಲಿ ಇತ್ತೀಚೆಗೆ ಬೋಟ್ ಮುಳುಗಡೆಯಾಗಿದ್ದ ಸ್ಥಳ ವೀಕ್ಷಿಸಿದರು.

ಬಳಿಕ ದಕ್ಕೆಯ ಜೆಟ್ಟಿ ಬಳಿ ಎಂಜಿನಿಯರ್‌ಗಳು ಹಾಗೂ ಬಂದರು ಇಲಾಖೆ ಅಧಿಕಾರಿಗಳಿಂದ ದಕ್ಕೆ ವಿಸ್ತರಣೆ ಮತ್ತು ಜೆಟ್ಟಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು.

ಮೀನು ಮಾರುಕಟ್ಟೆಗೂ ಭೇಟಿ ನೀಡಿದ ಮುಖ್ಯಮಂತ್ರಿ, ಸ್ಥಳೀಯ ಮೀನುಗಾರರು ಹಿಡಿದು ತಂದಿದ್ದ ಬೃಹತ್ ಗಾತ್ರದ ಅಂಜಲ್ ಮೀನು ಕೈಯಲ್ಲಿ ಹಿಡಿದರು. ವ್ಯಾಪಾರಸ್ಥರ ಯೋಗಕ್ಷೇಮ ವಿಚಾರಿಸಿದರು. ಆದರೆ, ತಮ್ಮ ಭೇಟಿಯ ಕಾರಣಕ್ಕೆ ದಕ್ಕೆಯ ದೈನಂದಿನ ಮೀನು ಮಾರಾಟ ಮತ್ತು ವ್ಯಾಪಾರ ಚಟುವಟಿಕೆ ಸ್ಥಗಿತಗೊಳಿಸಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ