ಶಿರಾ ತಾಲ್ಲೂಕಿನಲ್ಲಿ ಗುರುಭವನ ನಿರ್ಮಾಣದ ಕನಸು ನನಸಾಗುವುದು ಯಾವಾಗ?

ಶಿರಾ ತಾಲ್ಲೂಕಿನಲ್ಲಿ ಗುರುಭವನ ನಿರ್ಮಾಣದ ಕನಸು ನನಸಾಗುವುದು ಯಾವಾಗ?

ಶಿರಾ ತಾಲ್ಲೂಕಿನಲ್ಲಿ ಗುರುಭವನ ನಿರ್ಮಾಣದ ಕನಸು ನನಸಾಗುವುದು ಯಾವಾಗ?

ಶಿರಾ: ತಾಲ್ಲೂಕಿನ ಶಿಕ್ಷಕರ ಬಹುದಿನದ ಕನಸಾಗಿರುವ ಗುರು ಭವನ ನಿರ್ಮಾಣದ ಕನಸು ನನಸಾಗುವುದು ಯಾವಾಗ? ಜಾಗದ ಸಮಸ್ಯೆಯ ಗೊಂದಲದಿಂದ ಗುರುಭವನ ಎಲ್ಲಿ ನಿರ್ಮಾಣವಾಗಲಿದೆ ಎನ್ನುವ ಶಿಕ್ಷಕರ ಪ್ರಶ್ನೆಗೆ ಇದುವರೆಗೂ ಉತ್ತರ ದೊರಕಿಲ್ಲ.

ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಶಿಕ್ಷಕರಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಗುರುಭವನ ಇನ್ನೂ ಮರೀಚಿಕೆಯಾಗಿದೆ. ಗುರು ಭವನದ ಕನಸು ಕಂಡು ದೇಣಿಗೆ ನೀಡಿದ್ದ ಹಲವಾರು ಶಿಕ್ಷಕರು ಈಗ ನಿಧನರಾಗಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುಭವನ ನಿರ್ಮಾಣಕ್ಕಾಗಿ 1998ರಲ್ಲಿ ಶಂಕುಸ್ಥಾಪನೆ ನಡೆದಿತ್ತು. ಅಂದು ಕಾರ್ಯನಿರ್ವಹಿಸುತ್ತಿದ್ದ 951 ಮಂದಿ ಪ್ರಾಥಮಿಕ ಶಾಲಾ ಶಿಕ್ಷಕರ ವೇತನದಿಂದ ತಲಾ ₹1 ಸಾವಿರ ವಂತಿಕೆಯಾಗಿ ಒಟ್ಟು ₹9.51 ಲಕ್ಷ ಸಂಗ್ರಹಿಸಲಾಗಿತ್ತು

ಗುರು ಭವನ ನಿರ್ಮಾಣಕ್ಕಾಗಿ ಕಲ್ಲುಕೋಟೆಯಲ್ಲಿ 31 ಗುಂಟೆ ಜಾಗ ನೀಡಿದ್ದರೆ, ಜಾಗ ಗುರ್ತಿಸಿ ಕಟ್ಟಡ ನಿರ್ಮಾಣ ಮಾಡಬೇಕಾದವರು ನಿಗದಿತ ಸ್ಥಳ ಗುರುತಿಸುವಲ್ಲಿ ವಿಫಲರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗದಲ್ಲಿ ಗುರುಭವನ ನಿರ್ಮಾಣ ಮಾಡಲು ಹೊರಟಿದ್ದು ಗೊಂದಲಕ್ಕೆ ಕಾರಣವಾಯಿತು.

ಕಾಮಗಾರಿ ಆರಂಭವಾಗಿ ತಳಪಾಯ ಆಗುವವರೆಗೂ ಯಾವುದೇ ಅಡೆತಡೆ ಇರಲಿಲ್ಲ. ಆದರೆ ನಾಗರೀಕ ವೇದಿಕೆಯವರು ಇಲ್ಲಿ ಗುರುಭವನ ನಿರ್ಮಿಸಿದರೆ ಮಕ್ಕಳ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿಯಾಗುವುದು ಮತ್ತು ಇಲಾಖೆಯಿಂದ ಅನುಮತಿ ಪಡೆಯದೆ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂದು 2007ರಲ್ಲಿ ನ್ಯಾಯಾಲಯದ ಮೊರೆ ಹೋದ ಪರಿಣಾಮ ನ್ಯಾಯಾಲಯ ಸೂಕ್ತ ಅನುಮತಿ ಪಡೆದು ನಿಗದಿತ ಸ್ಥಳದಲ್ಲಿ ಗುರುಭವನ ನಿರ್ಮಿಸುವಂತೆ ಆದೇಶ ನೀಡಿತು.

ಗುರುಭವನ ನಿರ್ಮಾಣಕ್ಕೆ ಮಂಜೂರಾದ ಜಾಗವನ್ನು ಹುಡುಕುವ ಕೆಲಸವನ್ನು ಮಾಡಿದ ಶಿಕ್ಷಕರ ಸಂಘದ ಪದಾಧಿಕಾರಿಗಳು ವಿವೇಕಾನಂದ ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಜಾಗ ಗುರ್ತಿಸಿ ಅಲ್ಲಿ ಕಟ್ಟಡ ನಿರ್ಮಾಣಕ್ಕೆ ಮುಂದಾದರು. 2023ರ ಸೆ.5ರಂದು ಶಂಕುಸ್ಥಾಪನೆ ನಡೆಯಿತು.

ಕ್ರೀಡಾಭಿಮಾನಿಗಳ‌ ವಿರೋಧ: ಗುರುಭವನ ನಿರ್ಮಾಣವಾದರೆ ಕ್ರೀಡಾಂಗಣ ಕಿರಿದಾಗುವುದು ಕ್ರೀಡಾ ಚಟುವಟಿಕೆಗಳಿಗೆ ಇದರಿಂದ ತೊಂದರೆಯಾಗುವುದು. ಅದ್ದರಿಂದ ಇಲ್ಲಿ ಗುರುಭವನ ನಿರ್ಮಾಣಕ್ಕೆ ಕ್ರೀಡಾಭಿಮಾನಿಗಳಿಂದ ವಿರೋಧ ವ್ಯಕ್ತವಾಯಿತು.

ಹಳೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಈಜುಕೊಳಕ್ಕೆ ಮಂಜೂರಾಗಿರುವ ಸ್ಥಳದಲ್ಲಿ ಗುರುಭವನ ನಿರ್ಮಾಣ ಮಾಡಿ ಎಂದು ಜಾಗ ತೋರಿಸುತ್ತಿದ್ದು ಇದಕ್ಕೆ ಶಿಕ್ಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಗುರುಭವನ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿ ಪ್ರಾರಂಭವಾಗಬೇಕಿತ್ತು ಈ ಹಂತದಲ್ಲಿ ಬೇರೆ ಕಡೆ ಸ್ಥಳ ನೀಡುತ್ತೇವೆ ಎಂದು ಹೇಳುವುದು ಎಷ್ಟು ಸರಿ. ಎರಡು ವರ್ಷದ ಹಿಂದೆ ಶಂಕುಸ್ಥಾಪನೆ ಮಾಡಲು ಹೊರಟಾಗಲೇ ಬೇಡ ಎಂದು ಹೇಳಬೇಕಿತ್ತು. ಸರ್ಕಾರದಿಂದ ಅನುಮೋದನೆ ಪಡೆದು, ನಗರಸಭೆಯಿಂದ ಇ– ಖಾತೆ ಮಾಡಿಸಿಕೊಳ್ಳಲಾಗಿದೆ.

ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ನಗರಸಭೆಯಿಂದ ಕಟ್ಟಡ ನಿರ್ಮಾಣಕ್ಕೆ‌ ಶುಲ್ಕ ಭರಿಸಿ ಅನುಮತಿ ಪಡೆಯಲಾಗಿದೆ. ಕಟ್ಟಡ ನಿರ್ಮಾಣದ ಸ್ಥಳದಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿದ್ದು ಕೊಳವೆಬಾವಿ ಸಹ ಕೊರೆಸಲಾಗಿದೆ. ಈಗಾಗಲೇ ಸುಮಾರು ₹25 ಲಕ್ಷ ಖರ್ಚು ಮಾಡಿದ್ದು ಈಗ ಇಲ್ಲಿ ಬೇಡ ಎಂದರೆ ಹೇಗೆ? ಹೊಸ‌ ಜಾಗ ನೀಡಿದರೆ ಅಲ್ಲಿ ಮತ್ತೆ ಮೊದಲಿನಿಂದ ಎಲ್ಲ ಅನುಮತಿ ಪಡೆಯಲು ಎರಡು ವರ್ಷವಾಗುವುದು. ನಮಗೆ ಇಲ್ಲಿ ಗುರುಭವನ ನಿರ್ಮಿಸಲು ಅವಕಾಶ ನೀಡದಿದ್ದರೆ ನಾವು ಗುರುಭವನವನ್ನೇ ಕೇಳುವುದಿಲ್ಲ. ಅವರಿಗೆ ಇಷ್ಟ ಬಂದ ಕಡೆ ನಿರ್ಮಾಣ ಮಾಡಲಿ ಎಂದು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-17-980804036

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ