ಸೇಡಂನ ಆಡಕಿ ಸರ್ಕಾರಿ ಶಾಲೆ: ಹಸಿರ ಹೊದಿಕೆಯಿಂದ ಆಕರ್ಷಣೆ

ಸೇಡಂನ ಆಡಕಿ ಸರ್ಕಾರಿ ಶಾಲೆ: ಹಸಿರ ಹೊದಿಕೆಯಿಂದ ಆಕರ್ಷಣೆ

ಸೇಡಂನ ಆಡಕಿ ಸರ್ಕಾರಿ ಶಾಲೆ: ಹಸಿರ ಹೊದಿಕೆಯಿಂದ ಆಕರ್ಷಣೆ

ಸೇಡಂ: ತಾಲ್ಲೂಕಿನ ಆಡಕಿ ಗ್ರಾಮದ ಸರ್ಕಾರಿ ಶಾಲೆಯ ಆವರಣ ಹಸಿರ ಸೊಬಗಿನ ಹೊದಿಕೆ ಹೊದ್ದು ಮೈದಳೆದು ಜನರನ್ನು ಆಕರ್ಷಿಸುತ್ತಿದೆ. ಪರಿಸರದಲ್ಲಿ ಚಿಲಿಪಿಲಿ ಹಕ್ಕಿಗಳ ನಿನಾದ, ಕೋಗಿಲೆ ಕಂಠದ ಸ್ವರದ ಝೇಂಕಾರ, ಚಿಟ್ಟೆಗಳ ಹಾರಾಟ, ಮೈಗೆ ಮುದ ನೀಡುವ ಆಹ್ಲಾದಕರ ವಾತಾವರಣದಲ್ಲಿ ಜ್ಞಾನ ದೇಗುಲ ಕಂಗೊಳಿಸುತ್ತಿದೆ.

ನೂರಾರು ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಶಿಕ್ಷಣ ಕಲಿಕೆ ಮುಂದುವರಿಸುತ್ತಿದ್ದಾರೆ. ದಶಕಗಳ ಹಿಂದೆ ಕಲ್ಲು–ಮಣ್ಣು ಬಂಡೆಗಳನ್ನೊಳಗೊಂಡ ಸ್ಥಳವಿತ್ತು. ಆಗ ಯಾರೂ ಆ ಕಡೆ ಸುಳಿಯುತ್ತಿರಲಿಲ್ಲ. ಆದರೆ ಆ ಸ್ಥಳದಲ್ಲೀಗ ಶೈಕ್ಷಣಿಕ ವಾತಾವರಣ ಸಮೃದ್ಧವಾಗಿ ಕಂಗೊಳಿಸುತ್ತಿದೆ. ಇದಕ್ಕೆಲ್ಲಾ ಕಾರಣವಾಗಿದ್ದು, ಶಾಲೆಯ ಮುಖ್ಯಶಿಕ್ಷಕ ಕಿಷ್ಟಪ್ಪ ಮುನ್ನೂರ ಹಾಗೂ ಸರ್ವ ಸಿಬ್ಬಂದಿ ಬಳಗ ಎನ್ನುತ್ತಾರೆ ಗ್ರಾಮಸ್ಥರು.

1991ರಲ್ಲಿ ಕೇವಲ 17 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಸರ್ಕಾರಿ ಪ್ರೌಢಶಾಲೆಯಲ್ಲೀಗ 215 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರೌಢಶಾಲಾ ತರಗತಿ ನಡೆಯುತ್ತಿದ್ದವು. 1999ರಲ್ಲಿ 3 ಕೋಣೆಗಳೊಂದಿಗೆ ಅಂದಿನ ಉಪಸಭಾಪತಿ ಚಂದ್ರಶೇಖರರೆಡ್ಡಿ ದೇಶಮುಖ ಮದನಾ ಅವರಿಂದ ಉದ್ಘಾಟಿಸಲ್ಪಟ್ಟಿತ್ತು. ಈಗ 13 ಕೋಣೆಗಳಿಗೆ ವಿಸ್ತರಣೆಗೊಂಡಿದೆ. ಶಾಲೆಯ ಶೈಕ್ಷಣಿಕ ಪ್ರಗತಿಗೆ ಶಿಕ್ಷಕರಾದ ಚಂದ್ರಕಲಾ, ಶಿವಾನಂದ, ಸುಜಾತಾ, ಪುಷ್ಪಲತಾ, ರಾಜಶ್ರೀ, ಬಾಲಕೃಷ್ಣ ಸೇರಿದಂತೆ ಇನ್ನಿತರು ಶಿಕ್ಷಕರು, ಸಿಬ್ಬಂದಿಯ ಶ್ರಮಿಸಿದ್ದಾರೆ ಎನ್ನುತ್ತಾರೆ ಕಿಷ್ಟಪ್ಪ ಮುನ್ನೂರ.

‘ಶಾಲೆ ಕೇವಲ ಭೌತಿಕವಾಗಿ ಮಾತ್ರ ಪ್ರಗತಿ ಸಾಧಿಸದೇ, ಗುಣಾತ್ಮಕ ಶಿಕ್ಷಣದಲ್ಲೂ ಮುಂಚೂಣಿಯಲ್ಲಿದೆ. 4 ಬಾರಿ ಶೇ 100 ಫಲಿತಾಂಶ ಪಡೆದಿದೆ. 2017ರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ‘ಹಸಿರು ಶಾಲೆ’ ಪ್ರಶಸ್ತಿ ಪಡೆದಿದೆ. ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ವೈದ್ಯ, ಶಿಕ್ಷಕ, ಪತ್ರಕರ್ತ, ಪೊಲೀಸ್, ಎಂಜಿನಿಯರ್, ಜೆಇ ಸೇರಿದಂತೆ ರಾಜಕಾರಣದಲ್ಲಿ ತಮ್ಮದೆ ಆದ ಸ್ಥಾನದಲ್ಲಿದ್ದಾರೆ. ಶಾಲೆಯ ಪ್ರಗತಿಗೆ ಹಳೆಯ ವಿದ್ಯಾರ್ಥಿಗಳು ಸಹ ತನು–ಮನದಿಂದ ಕೆಲಸ ಮಾಡಿದ್ದಾರೆ ಎನ್ನುವುದೇ ಅಲ್ಲಿನ ಶಿಕ್ಷಕರ ಅಭಿಮತ.

‘ಶಾಲೆಗೆ ಜೀವಕಳೆ ತಂದ ಶಿಕ್ಷಕ’

ಪ್ರೌಢಶಾಲೆಯಲ್ಲಿ ದಶಕಗಳ ಹಿಂದೆ ಒಂದು ಸುಸಜ್ಜಿತ ಕಟ್ಟಡ, ಗಿಡವಿರಲಿಲ್ಲ. ಕುಡಿವ ನೀರು ಸೇರಿದಂತೆ ಮೂಲಸೌಕರ್ಯಗಳ ಸಮಸ್ಯೆಯಿತ್ತು. ಆದರೆ ಅಲ್ಲಿಯ ಶಿಕ್ಷಕ ಕಿಷ್ಟಪ್ಪ ಮುನ್ನೂರ ಅವರ ನಿರಂತರ ಪರಿಶ್ರಮದಿಂದ ಶಾಲೆಗೆ ಜೀವಕಳೆ ಬಂದಿದೆ. ಕಲ್ಲು ಬಂಡೆಗಳನ್ನು ತೆರುವುಗೊಳಿಸಿ, ವಿದ್ಯಾರ್ಥಿಗಳಿಗೆ ಸುಸಜ್ಜಿತ ಆಟದ ಮೈದಾನವನ್ನಾಗಿ ಪರಿವರ್ತಿಸುವಲ್ಲಿ ಶ್ರಮಿಸಿದ್ದಾರೆ. ಮೈದಾನ, ಕಟ್ಟಡ, ಪ್ರಯೋಗಾಲಯ, ರಂಗಮಂದಿರ ಸೇರಿದಂತೆ ಹಲವು ಕೆಲಸಗಳಾಗಿವೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಿದ್ದರೆ, ಶಿಕ್ಷಣ ಪ್ರೇಮಿಗಳಿಂದ, ಪಂಚಾಯಿತಿಯಿಂದ ನೆರವು ಪಡೆದು ಶೈಕ್ಷಣಿಕ ವಾತಾವರಣ ನಿರ್ಮಿಸುವಲ್ಲಿ ಕಿಷ್ಟಪ್ಪ ಮುನ್ನೂರ ಪರಿಶ್ರಮ ಹಿರಿದಾಗಿದೆ. ಅವರ ಕಾರ್ಯಕ್ಕೆ ಸಿಬ್ಬಂದಿಗಳು ಸಹಕರಿಸಿದ್ದಾರೆ ಎನ್ನುತ್ತಾರೆ ಗ್ರಾಮಸ್ಥರು.

ಮಕ್ಕಳ ಶಿಕ್ಷಣ ಕಲಿಕೆಗೆ ಪೂರಕವಾಗಲೆಂಬ ಉದ್ದೇಶದಿಂದ ಭೂಮಿ ನೀಡಿದ್ದು, ಅಲ್ಲಿಯ ಶಿಕ್ಷಕರ ಶ್ರಮದಿಂದ ಶಾಲೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣಗೊಂಡಿದೆ. ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುವುದು ಸಂತಸ

ಚಂದ್ರಶೇಖರರೆಡ್ಡಿ ದೇಶಮುಖ ಮದನಾ, ಮಾಜಿ ಉಪಸಭಾಪತಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-34-1360707335

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ