ಕನ್ನಡ ಎಲ್ಲರ ಹೃದಯದ ಭಾಷೆಯಾಗಲಿ: ಡಾ.ಸುಧಾ ಕೌಜಗೇರಿ

ಕನ್ನಡ ಎಲ್ಲರ ಹೃದಯದ ಭಾಷೆಯಾಗಲಿ: ಡಾ.ಸುಧಾ ಕೌಜಗೇರಿ

ಕನ್ನಡ ಎಲ್ಲರ ಹೃದಯದ ಭಾಷೆಯಾಗಲಿ: ಡಾ.ಸುಧಾ ಕೌಜಗೇರಿ

ಅಣ್ಣಿಗೇರಿ: ‘ಕನ್ನಡ ಭಾಷೆಯ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಎಲ್ಲರ ಹೃದಯದ ಭಾಷೆಯಾಗಲಿ’ ಸಮ್ಮೇಳನಾಧ್ಯಕ್ಷೆ ಡಾ.ಸುಧಾ ಕೌಜಗೇರಿ ಹೇಳಿದರು.

ಇಲ್ಲಿನ ಶ್ರೀಮತಿ ನಿಂಗಮ್ಮ ಎಸ್ ಹೂಗಾರ ಶಾಲಾ ಆವರಣದಲ್ಲಿ ಶನಿವಾರ ನಡೆದ ತಾಲ್ಲೂಕು 4ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆದಿಕವಿ ಪಂಪ ಮಹಾವೇದಿಕೆಯಲ್ಲಿ ಮಾತನಾಡಿದರು.

‘ಕನ್ನಡ ಭಾಷೆಯನ್ನು ಬಳಸುವ ಬೆಳೆಸುವ ನಿಟ್ಟಿನಲ್ಲಿ ಕಾರ್ಯವಾಗಬೇಕು. ಶಾಲೆ ಕಾಲೇಜುಗಳಲ್ಲಿ ಕನ್ನಡ ಭಾಷೆಯನ್ನು ಅರ್ಥಪೂರ್ಣವಾಗಿ ವಿದ್ಯಾರ್ಥಿಗಳ ಮನ ಮುಟ್ಟುವಂತೆ ಹೇಳುವಲ್ಲಿ ಶಿಕ್ಷಕರು ಕಾರ್ಯ ಪ್ರವೃತ್ತರಾಗಬೇಕು. ಸರ್ಕಾರ ಎಲ್ಲ ಪತ್ರ ವ್ಯವಹಾರಗಳನ್ನು ಕನ್ನಡ ಭಾಷೆಯಲ್ಲಿ ಇರುವಂತೆ ಮಾಡಬೇಕು’ ಎಂದರು.

ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ‘ಕನ್ನಡ ಕೇವಲ ಮಾತನಾಡುವ ಒಂದು ಭಾಷೆಯಲ್ಲ, ಅದು ನಮ್ಮ ಬದುಕು, ಸಂಸ್ಕೃತಿ, ಇತಿಹಾಸ, ಭಾವನೆ ಮತ್ತು ನಮ್ಮ ಅಸ್ಮಿತೆಯಾಗಿದೆ’ ಎಂದರು.

ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ಅಣ್ಣಿಗೇರಿ ಪಟ್ಟಣವು ‘ಪಂಪಪುರ’ ಎಂಬುದಾಗಲಿ. ಆದಿಕವಿ ಪಂಪ ಜನಿಸಿದ ಪಟ್ಟಣದಲ್ಲಿ ಪಂಪನ ಕುರಿತು ‘ಬದುಕು ಬರಹ’ ಎಂಬ ಪರಿಚಯಾತ್ಮಕದ 5 ಸಾವಿರ ಪುಸ್ತಕಗಳನ್ನು ಸಾಹಿತ್ಯ ಪರಿಷತ್ ವತಿಯಿಂದ ಡಾ.ಸುಧಾ ಕೌಜಗೇರಿ ಪ್ರಕಟಿಸಲಿ ಅದಕ್ಕೆ ಹತ್ತು ಸಾವಿರ ಹಣ ನೀಡುತ್ತೇನೆ’ ಎಂದರು.

ಪಟ್ಟಣದಲ್ಲಿ ಪಂಪನ ಕುರಿತು ಪ್ರತಿ ತಿಂಗಳು ಸಾಹಿತ್ಯಕ ಕಾರ್ಯಕ್ರಮ ಜರುಗಲಿ. ನೂತನ ತಾಲ್ಲೂಕು ಕನ್ನಡ ಸಾಹಿತ್ಯ ಭವನ ನಿರ್ಮಾಣವಾಗಲಿ ಎಂದರು.

ಪ್ರೊ ಎಸ್.ಎಸ್.ಹರ್ಲಾಪುರ ಅಧ್ಯಕ್ಷತೆ ವಹಿಸಿದ್ದರು.

ಅಮೃತೇಶ್ವರ ದೇವಸ್ಥಾನದ ಬಯಲಿನಿಂದ ಸಾರೋಟದಲ್ಲಿ ಪಂಪನ ಕಾವ್ಯಗಳ ಮೆರವಣಿಗೆ ನಡೆಯಿತು. ಸಮ್ಮೇಳನದಲ್ಲಿ 5 ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.

ಸಂಕೀರ್ಣ, ಪಂಪನ ಕಾವ್ಯಗಳ ಒಳನೋಟ, ಕವಿಗೋಷ್ಠಿ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರ ಸಂವಾದ ಒಳಗೊಂಡ ನಾಲ್ಕು ಗೋಷ್ಠಿಗಳು ನಡೆದವು. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಆದಿಕವಿ ಪಂಪ ಸ್ಮಾರಕ ಭವನವನ್ನು ಸಾಹಿತ್ಯಿಕ ಚಟುವಟಿಕೆಗಳಿಗೆ ಉಚಿತವಾಗಿ ನೀಡಬೇಕು ಎಂದು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ಕಸಾಪ ಜಿಲ್ಲಾಧ್ಯಕ್ಷ ಲಿಂಗರಾಜ ಅಂಗಡಿ, ಕಸಾಪ ತಾಲ್ಲೂಕು ಅಧ್ಯಕ್ಷ ಅನ್ವರ ಹುಬ್ಬಳ್ಳಿ, ಮೋಹನ ಲಿಂಬಿಕಾಯಿ, ದೇವರಾಜ ದಾಡಿಬಾವಿ, ತಹಶೀಲ್ದಾರ್ ಮಂಜುನಾಥ ದಾಸಪ್ಪನವರ, ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕುಮಾರ ಬೆಕ್ಕೇರಿ, ಹೋಬಳಿ ಘಟಕದ ಅಧ್ಯಕ್ಷ ವಿ.ಡಿ.ಅಂದಾನಿಗೌಡ್ರ ಹಾಗೂ ಪ್ರಮುಖರು ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ