ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್, ಎಸ್ಕಲೇಟರ್ ಇಲ್ಲದೆ ಪರದಾಟ

ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್, ಎಸ್ಕಲೇಟರ್ ಇಲ್ಲದೆ ಪರದಾಟ

ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ ಲಿಫ್ಟ್, ಎಸ್ಕಲೇಟರ್ ಇಲ್ಲದೆ ಪರದಾಟ

ಬಂಗಾರಪೇಟೆ: ನಗರದ ರೈಲ್ವೆ ನಿಲ್ದಾಣದ ನವೀಕರಣ ಸಂದರ್ಭದಲ್ಲಿ ಪಾದಚಾರಿ ಮೇಲ್ಸೇತುವೆಯನ್ನು ಹೊಸದಾಗಿ ನಿರ್ಮಿಸಿದ್ದರೂ ಬಹುತೇಕರಿಗೆ ಸಮಸ್ಯೆ ಆಗುತ್ತಿದೆ.

ನೂತನ ಮೇಲ್ಸೇತುವೆಗೆ ಹೊಂದಿಕೊಂಡಂತೆ ಲಿಫ್ಟ್‌ ಅಥವಾ ಎಸ್ಕಲೇಟರ್‌ ಸೌಲಭ್ಯ ಕಲ್ಪಿಸದಿರುವುದು ವೃದ್ಧರು, ಅಂಗವಿಕಲರು, ಮಕ್ಕಳೊಂದಿಗೆ ಪ್ರಯಾಣಿಸಬೇಕಾದ ಮಹಿಳೆಯರಿಗೆ ಶಾಪವಾಗಿ ಪರಿಣಮಿಸಿದೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಅಮೃತ್ ಭಾರತ್ ನಿಲ್ದಾಣ’ ಯೋಜನೆಯಡಿ ಬಂಗಾರಪೇಟೆ ಜಂಕ್ಷನ್ ರೈಲು ನಿಲ್ದಾಣದ ನವೀಕರಣ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿದೆ.

ದಕ್ಷಿಣ ಭಾರತದ ಪ್ರಮುಖ ರೈಲ್ವೆ ಜಂಕ್ಷನ್‌ಗಳಲ್ಲಿ ಒಂದಾಗಿರುವ ಬಂಗಾರಪೇಟೆ ಮೂಲಕ ನಿತ್ಯವೂ ನೂರಾರು ರೈಲು ಸಂಚರಿಸುತ್ತವೆ. ಚೆನ್ನೈ, ಬೆಂಗಳೂರು, ತಿರುಪತಿ ಹಾಗೂ ಕೋಲಾರ ಭಾಗಕ್ಕೆ ಪ್ರಯಾಣಿಸುವ ಸಹಸ್ರಾರು ಪ್ರಯಾಣಿಕರು ಈ ನಿಲ್ದಾಣವನ್ನೇ ಅವಲಂಬಿಸಿದ್ದಾರೆ.

‘ಅಮೃತ್ ಭಾರತ್’ ಯೋಜನೆಯಡಿ ನಿಲ್ದಾಣಕ್ಕೆ ಆಧುನಿಕ ಸ್ಪರ್ಶ ನೀಡುವ ಭಾಗವಾಗಿ, ವಿಶಾಲವಾದ ಹಾಗೂ ಸುಸಜ್ಜಿತವಾದ ನೂತನ ಪಾದಚಾರಿ ಮೇಲ್ಸೇತುವೆಯ ಜೊತೆಗೆ ಸುಸಜ್ಜಿತ ಟಿಕೆಟ್ ಕೌಂಟರ್, ಅಡ್ವಾನ್ಸ್ ಬುಕಿಂಗ್ ಕೌಂಟರ್ ಹಾಗೂ ನೂತನ ಶೌಚಾಲಯ ಸಂಕೀರ್ಣ ನಿರ್ಮಿಸಲಾಗಿದೆ.

ಇದರಿಂದ ನಿಲ್ದಾಣದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಆಗಿದ್ದರೂ, ಪ್ರಮುಖ ಪಾದಚಾರಿ ಮೇಲ್ಸೇತುವೆಗೆ ಎಸ್ಕಲೇಟರ್ ಅಥವಾ ಲಿಫ್ಟ್ ಸೌಲಭ್ಯ ಕಲ್ಪಿಸದಿರುವುದು ಬಹುತೇಕರಲ್ಲಿ ಅಸಮಾಧಾನ ಸೃಷ್ಟಿಸಿದೆ.

ಹೊಸ ಮೇಲ್ಸೇತುವೆ ನಿರ್ಮಾಣವಾಗುತ್ತಿದ್ದಾಗ, ಇದು ವೃದ್ಧರು ಹಾಗೂ ಗರ್ಭಿಣಿಯರಿಗೆ ಎತ್ತರದ ಮೆಟ್ಟಿಲುಗಳನ್ನು ಹತ್ತುವ ಕಿರಿಕಿರಿಯಿಂದ ಮುಕ್ತಿ ನೀಡಲಿದೆ ಎಂದು ಭಾವಿಸಿದ್ದೆವು. ಆದರೆ, ಎತ್ತರದ ಮೇಲ್ಸೇತುವೆಯನ್ನು ಭಾರವಾದ ಲಗೇಜ್‌ಗಳೊಂದಿಗೆ ಹತ್ತುವುದು ಯುವಕರಿಗೇ ಸವಾಲಾಗಿದ್ದು, ಇನ್ನೂ ಹಿರಿಯರು, ಅನಾರೋಗ್ಯ ಪೀಡಿತರ ಸ್ಥಿತಿ ಹೇಳತೀರದಾಗಿದೆ ಎನ್ನುತ್ತಾರೆ ಸ್ಥಳೀಯ ಗೃಹಿಣಿ ಸುಮಾ.

ಒಂದು ಪ್ಲಾಟ್‌ಫಾರ್ಮ್‌ನಿಂದ ಇನ್ನೊಂದು ಪ್ಲಾಟ್‌ಫಾರ್ಮ್‌ಗೆ ಹೋಗಲು ಎತ್ತರದ ಮೆಟ್ಟಿಲುಗಳನ್ನು ಹತ್ತುವುದೇ ದೊಡ್ಡ ಶಿಕ್ಷೆಆಗಿದೆ. ಪ್ಲಾಟ್‌ಫಾರ್ಮ್‌ಗಳ ನಡುವೆ ಚಲಿಸಲು ಬೇರೆ ಪರ್ಯಾಯ ಹಾದಿಗಳಿಲ್ಲದೆ, ಹಲವು ಪ್ರಯಾಣಿಕರು ಹಳಿಗಳನ್ನು ದಾಟುವ ಅಪಾಯಕಾರಿ ಸಾಹಸಕ್ಕೂ ಕೈಹಾಕುತ್ತಿದ್ದಾರೆ. ಇದರಿಂದಾಗಿ ಅಪಘಾತ ಭೀತಿಯೂ ಹೆಚ್ಚಿದೆ. ರೈಲ್ವೆ ಸಚಿವಾಲಯವು ಇನ್ನಾದರೂ ಎಚ್ಚೆತ್ತುಕೊಂಡು ಎಸ್ಕಲೇಟರ್ ಹಾಗೂ ಲಿಫ್ಟ್ ಸೌಲಭ್ಯವನ್ನು ಆದಷ್ಟು ಶೀಘ್ರದಲ್ಲೆ ಕಲ್ಪಿಸಬೇಕು ಎಂದು ಜಂಕ್ಷನ್‌ನಿಂದ ನಿತ್ಯವೂ ಪ್ರಯಾಣಿಸುವ ಆನಂದ್‌ ಕೆಸರನಹಳ್ಳಿ ಆಗ್ರಹಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ