
ಗುಲಬರ್ಗಾ: ಬಿಎಸ್‌ಸಿ ಕೋರ್ಸ್‌ಗಳಲ್ಲಿ 6 ಪತ್ರಿಕೆಗಳು ಮಾಯ
ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಅಧೀನ ಕಾಲೇಜಿಗಳಲ್ಲಿನ ಬಿಎಸ್‌ಸಿ ಕೋರ್ಸ್‌ಗಳ ವಿಷಯಗಳು ಹಾಗೂ ಕ್ರೆಡಿಟ್ ಪಾಯಿಂಟ್‌ಗಳ ಅನುಷ್ಠಾನದಲ್ಲಿ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ)ಯ ಮಾರ್ಗಸೂಚಿಯನ್ನು ವಿಶ್ವವಿದ್ಯಾಲಯವು ಉಲ್ಲಂಘಿಸಿದೆ ಎಂಬ ಆರೋಪಗಳು ಕೇಳಿಬಂದಿವೆ.
2024–25ನೇ ಸಾಲಿನಲ್ಲಿ ಎಸ್‌ಇಪಿ ಮಾರ್ಗಸೂಚಿಯಂತೆ ವಿಷಯಗಳು ಹಾಗೂ ಕ್ರೆಡಿಟ್ ಪಾಯಿಂಟ್‌ಗಳು ನಿರ್ಧರಿಸುವಂತೆ ಸರ್ಕಾರ ವಿಶ್ವವಿದ್ಯಾಲಯಕ್ಕೆ ಆದೇಶ ಮಾಡಿತ್ತು. ಅದರಂತೆ ಬಿಒಎಸ್ ಸಭೆಯಲ್ಲಿ ಕಲಾ ಹಾಗೂ ವಾಣಿಜ್ಯ ವಿಭಾಗದ ವಿಷಯ ಹಾಗೂ ಕ್ರೆಡಿಟ್ ಪಾಯಿಂಟ್‌ಗಳನ್ನು ಹಂಚಿಕೆ ಮಾಡಲಾಗಿದೆ.
ವಿಜ್ಞಾನ ವಿಭಾಗದ ಸಭೆ ಮಾಡದೆ ಮುಂದೂಡಲಾಗಿತ್ತು. ಬಳಿಕ ಸಭೆ ನಡೆಸದೆ, ಯಾವುದನ್ನೂ ಪರಿಷ್ಕರಿಸದೆ 3ನೇ ಸೆಮಿಸ್ಟರ್‌ನಿಂದ 6ನೇ ಸೆಮಿಸ್ಟರ್‌ವರೆಗೆ ಪಠ್ಯಕ್ರಮ ರಚನೆ ಮಾಡಲಾಗಿದೆ. ಹಿಂದಿನ ಸೆಮಿಸ್ಟರ್‌ಗಳಲ್ಲಿ ಮುಕ್ತ ಐಚ್ಛಿಕ ವಿಷಯ ಹಾಗೂ ಇತರ ಪತ್ರಿಕೆಗಳಿಗೆ ಹೆಚ್ಚಿನ ಕ್ರೆಡಿಟ್ ಪಾಯಿಂಟ್‌ಗಳನ್ನು ನಿಗದಿ ಮಾಡಲಾಗಿದೆ.
‘ಕ್ರೆಡಿಟ್ ಪಾಯಿಂಟ್‌ಗಳ ವ್ಯತ್ಯಾಸದಿಂದ ಬಿಎಸ್‌ಸಿ ಕೋರ್ಸ್‌ಗಳಿಗೆ ಪ್ರವೇಶ ಪಡೆದ ಪ್ರಸ್ತುತ ಐದನೇ ಮತ್ತು ಆರನೇ ಸೆಮಿಸ್ಟರ್‌ಗಳಲ್ಲಿ ಒಟ್ಟು ಮೂರು ಐಚ್ಛಿಕ ವಿಷಯಗಳ ಆರು ಪತ್ರಿಕೆಗಳು ಕಡಿಮೆಯಾಗುತ್ತಿವೆ’ ಎನ್ನುತ್ತಿದ್ದಾರೆ ಕಾಲೇಜಿನ ಪ್ರಾಧ್ಯಾಪಕರೊಬ್ಬರು.
ಹಿಂದೆ ಕ್ರೆಡಿಟ್ ಪಾಯಿಂಟ್ ಅನುಷ್ಠಾನದಲ್ಲಿ ಸಮಸ್ಯೆ ಆಗಿರುವುದರಿಂದ ರಾಜ್ಯಾದ್ಯಂತ ಬಹುತೇಕ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಸ್ವಾಯತ್ತ ಕಾಲೇಜುಗಳು 5 ಮತ್ತು 6ನೇ ಸೆಮಿಸ್ಟರ್ ತರಗತಿಗಳ ಪತ್ರಿಕೆಯನ್ನು ಹೆಚ್ಚಿಸಿಕೊಂಡು, ಕ್ರೆಡಿಟ್ ಪಾಯಿಂಟ್‌ಗಳ ಹೊಂದಾಣಿಕೆ ಮಾಡಿಕೊಂಡಿದ್ದಾರೆ.
ಕಾಲೇಜುಗಳ ಆರಂಭಕ್ಕೂ ಮೊದಲೇ ಪಠ್ಯಕ್ರಮ ಸರಿ ಪಡಿಸಬೇಕಾದ ವಿವಿಯು ಜುಲೈ 20ರಂದು ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜು ಪ್ರಾರಂಭವಾಗಿದ್ದರೂ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ.
‘ಎಸ್‌ಇಪಿ ಅನುಷ್ಠಾನದಲ್ಲಿ ಗಂಭೀರತೆ ತೊರದ ಕಾರಣ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದ ಶೈಕ್ಷಣಿಕ ನಷ್ಟ, ಭವಿಷ್ಯದಲ್ಲಿ ತಾಂತ್ರಿಕ ಸಮಸ್ಯೆಯ ಸಂಭವ ಇದೆ. ಮೇಜರ್ ವಿಷಯಗಳ ಪತ್ರಿಕೆ ಕಡಿತಗೊಳಿಸಿದ್ದರಿಂದ ಅತಿಥಿ ಉಪನ್ಯಾಸಕರ ಕಾರ್ಯಭಾರಕ್ಕೆ ಹೊಡೆತ ಬಿಳಲಿದೆ. ಸದ್ಯ ಅತಿಥಿ ಉಪನ್ಯಾಸಕರ ಕೌನ್ಸೆಲಿಂಗ್ ನಡೆಯುತ್ತಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅನೇಕ ಅತಿಥಿ ಉಪನ್ಯಾಸಕರು ಉದ್ಯೋಗ ವಂಚಿತರಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಅತಿಥಿ ಉಪನ್ಯಾಸಕರೊಬ್ಬರು.
‘ವಿಭಾಗದ ಮುಖ್ಯಸ್ಥರು, ಬಿಒಎಸ್ ಗಮನಕ್ಕೆ ತರಲಿ’
‘ವಿಜ್ಞಾನ ವಿಭಾಗದ ವಿಷಯಗಳಲ್ಲಿ ಕ್ರೆಡಿಟ್ ಪಾಯಿಂಟ್ ಸರಿಪಡಿಸುವ ಹಾಗೂ ಹೆಚ್ಚುವರಿ ಪಾಠಗಳನ್ನು ಸೇರ್ಪಡೆ ಮಾಡುವ ಕುರಿತು ಕಾಲೇಜುಗಳ ಮುಖ್ಯಸ್ಥರು ಸಂಬಂಧಿಸಿದ ವಿಭಾಗದ ಮುಖ್ಯಸ್ಥರು ಹಾಗೂ ಪಠ್ಯಕ್ರಮ ಅಧ್ಯಯನ ಮಂಡಳಿ ಮುಂದೆ ಮಂಡಿಸಬೇಕು’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ರಮೇಶ ಲಂಡನಕರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಲೋಪವನ್ನು ಸರಿಪಡಿಸಲು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಹೆಸರು ಹೇಳಲು ಇಚ್ಛಿಸದ ಪ್ರಾಧ್ಯಾಪಕ