
BBK13: ನಿರ್ದೇಶಕ ಓಂ ಪ್ರಕಾಶ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು
ಬಿಗ್‌ಬಾಸ್ ಕನ್ನಡ ಸೀಸನ್ 13ರ ಸ್ಪರ್ಧಿ, ಶೋನ ವಿಮಾನದ ಸೆಟ್‌ನಲ್ಲಿದ್ದ ನಿರ್ದೇಶಕ ಓಂ ಪ್ರಕಾಶ್ ಅರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ಓಂ ಪ್ರಕಾಶ್ ಅವರಿಗೆ ತೀವ್ರವಾದ ಕಾಲು ನೋವು ಕಾಣಿಸಿಕೊಂಡಿರುವುದರಿಂದ, ಮನೆಯಿಂದ ಹೊರಬಂದಿದ್ದಾರೆ ಎಂದು ತಿಳಿದುಬಂದಿದೆ. ಚಿಕಿತ್ಸೆ ಬಳಿಕ ಮತ್ತೆ ಬಿಗ್‌ಬಾಸ್ ಮನೆಗೆ ಮರಳುವ ಸಾಧ್ಯತೆ ಇದೆ.
ಸೀಸನ್ 4ರಲ್ಲೂ ಅನಾರೋಗ್ಯದಿಂದ ಅವರು ಮಧ್ಯದಲ್ಲೇ ಮನೆಯಿಂದ ಹೊರಬಂದಿದ್ದರು.
ಕಾರ್ಯಕ್ರಮ ಆರಂಭವಾದಾಗಿನಿಂದ ಟಾಸ್ಕ್ ಗೆದ್ದ ಕೆಲ ಸದಸ್ಯರು ಬಿಗ್‌ಬಾಸ್ ಮನೆಯೊಳಗೆ ಹೋಗಿದ್ದರೆ, ಇನ್ನೂ ಕೆಲವರು ವಿಮಾನದಲ್ಲಿಯೇ ಇದ್ದರು. ಹೀಗೆ ವಿಮಾನದಲ್ಲೇ ಇದ್ದು ಬಿಗ್‌ಬಾಸ್ ಮನೆಯನ್ನೇ ಪ್ರವೇಶಿಸದೆ ಪ್ರಥಮಾ ಅವರು ಮೊದಲ ವಾರದಲ್ಲೇ ಎಲಿಮಿನೇಟ್ ಆಗಿದ್ದಾರೆ.
Tags
Entertainment