
Anantha Chaturdashi: ನಾಳೆ ಸಿಗುವುದು ಈ ರಾಶಿಯವರ ಕಷ್ಟಗಳಿಗೆ ಮುಕ್ತಿ: ಅನಂತ ಚತುರ್ದಶಿಯಿಂದ ಜೀವನದ ದಿಕ್ಕೇ ಬದಲು
Anantha Chathurdashi: ಗಣೇಶ ಚತುರ್ಥಿದಿನ ಗಣಪತಿ ಮೂರ್ತಿ ಪ್ರತಿಷ್ಟಾಪಿಸಲಾಗುತ್ತದೆ. ನಂತರ ಮೊದಲ ದಿನ, ಮೂರನೇ ದಿನ, ಐದನೇ ದಿನ, ಏಳನೇ ದಿನ ಮತ್ತು ಕೊನೆಗೆ ಅನಂತ ಚತುರ್ದಶಿಯ ಪವಿತ್ರ ದಿನದಂದು ಗಣೇಶನನ್ನು ವಿಸರ್ಜಿಸಲಾಗುತ್ತದೆ. ನಾಳೆ ಅಂದರೆ ಸೆಪ್ಟೆಂಬರ್ 25ಕ್ಕೆ ಅನಂತ ಚತುರ್ದಶಿ. ವಿಸರ್ಜನೆಯಾಗದ ಗಣೇಶ ಮೂರ್ತಿಗಳನ್ನು ನಾಳೆ ವಿಸರ್ಜನೆ ಮಾಡಲೇಬೇಕು. ನಂತರ ಗಣೇಶ ಪ್ರತಿಷ್ಟಾಪನೆ ಮುಂದಿನ ವರ್ಷವೇ. ನಾಳೆಯ ದಿನ ಧಾರ್ಮಿಕ ದೃಷ್ಟಿಕೋನದಿಂದ ಮಾತ್ರವಲ್ಲದೆ, ಜ್ಯೋತಿಷ್ಯ ದೃಷ್ಟಿಕೋನದಿಂದಲೂ ವಿಶೇಷ.
ನಾಳೆ ಅನಂತ ಚತುರ್ದಶಿಯಾಗಿರುವುದರಿಂದ, ಇದು ಗಣೇಶೋತ್ಸವದ ಕೊನೆಯ ದಿನ. ಈ ದಿನದಂದು ವಿಷ್ಣುವಿನ ಅನಂತ ರೂಪವನ್ನು ಪೂಜಿಸಲಾಗುತ್ತದೆ. ಇದಲ್ಲದೆ, ಶುಕ್ರವಾರವಾದ್ದರಿಂದ, ಇದು ಲಕ್ಷ್ಮೀಯ ಆಶೀರ್ವಾದವನ್ನು ಪಡೆಯುವ ದಿನವೂ ಆಗಿದೆ. ಅಲ್ಲದೆ ಸರ್ವಾರ್ಥ ಸಿದ್ಧಿ ಯೋಗ, ರವಿ ಯೋಗ, ನೀಚಭಂಗ ಯೋಗ ಮತ್ತು ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತಿದೆ. ಈ ಎಲ್ಲಾ ಶುಭ ಯೋಗಗಳು ಸೇರಿ ಕೆಲವು ರಾಶಿಯವರ ಅದೃಷ್ಟವನ್ನು ಹೆಚ್ಚಿಸುತ್ತದೆ.
ಅನಂತ ಚತುರ್ದಶಿ ಬೆಳಗುವುದು ಈ ರಾಶಿಯವರ ಅದೃಷ್ಟ
ಅನಂತ ಚತುರ್ದಶಿಯೊಂದಿಗೆ ರೂಪುಗೊಂಡ ಗ್ರಹಗಳ ಸ್ಥಾನಗಳು ಮತ್ತು ಶುಭ ಯೋಗಗಳು ಕೆಲವು ರಾಶಿಯವರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುವುದು. ನಾಳೆಯಿಂದ ಈ ರಾಶಿಯವರ ಕಷ್ಟಗಳು ಕೊನೆಯಾಗುವುದು. ಜೀವನದಲ್ಲಿ ಹೊಸ ಚೈತನ್ಯ ಮೂಡುವುದು.
ಅದೃಷ್ಟ ಪಡೆಯುವ ರಾಶಿಗಳು
ವೃಷಭ ರಾಶಿ: ಈ ರಾಶಿಯವರಿಗೆ ವೃತ್ತಿಜೀವನದಲ್ಲಿ ಹೆಚ್ಚಿನ ಮನ್ನಣೆ ಸಿಗುವ ಸಮಯ ಇದು. ಕೆಲಸ ಕಾರ್ಯಗಳಲ್ಲಿ ಬಹಳ ಕಾಲದಿಂದ ಎದುರಾಗಿದ್ದ ಅಡೆತಡೆಗಳು ಒಂದೊಂದಾಗಿಯೇ ನಿವಾರಣೆಯಾಗುವುದು. ಆರ್ಥಿಕ ಸ್ಥಿರತೆ ಹೆಚ್ಚಾಗುವುದು. ಹಣಕಾಸಿನ ಸಮಸ್ಯೆ ನಿವಾರಣೆಯಾಗುವುದು. ಸಾಲದಿಂದ ಮುಕ್ತಿ ಸಿಗುವುದು. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳುವುದು. ಕೆಲಸ ಹೆಚ್ಚಾಗುವುದು. ಆದರೆ ನಿಮಗೆ ವಹಿಸಿರುವ ಕೆಲಸವನ್ನು ಸರಿಯಾಗಿ ನಿಭಾಯಿಸುವಿರಿ. ಜೀವನದ ದಿಕ್ಕೇ ಬದಲಾಗುವುದು.
ಮಿಥುನ ರಾಶಿ: ಗಣೇಶನ ಆಶೀರ್ವಾದದಿಂದ, ಮಿಥುನ ರಾಶಿಯವರ ಆಲೋಚನೆಗಳಲ್ಲಿ ಸೃಜನಶೀಲತೆ ಹೆಚ್ಚಾಗುವುದು. ಹೊಸ ವಿಷಯಗಳಲ್ಲಿ ಆಸಕ್ತಿ ಬೆಳೆಯುವುದು. ನಿಮ್ಮ ಹೊಸ ಕೆಲಸದಿಂದ ಲಾಭವಾಗುವುದು. ವ್ಯವಹಾರದಲ್ಲಿನ ನಷ್ಟ ಸರಿದೂಗುವುದು. ಕಷ್ಟಗಳೆಲ್ಲಾ ಪರಿಹಾರವಾಗುವುದು. ಹಣಕಾಸಿನ ಲಾಭವಾಗುವುದು. ಪೂರ್ವಜರ ಆಸ್ತಿಯಿಂದ ಲಾಭವಾಗುವುದು. ಗಣೇಶನ ಆಶೀರ್ವಾದದ ಜೊತೆಗೆ ನಿಮ್ಮ ಮೇಲೆ ಲಕ್ಷ್ಮೀಯ ಆಶೀರ್ವಾದವೂ ಇರುವುದು.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಗ್ರಹಗತಿಗಳು ಸಕಾರಾತ್ಮಕವಾಗಿವೆ. ಕಡಿಮೆ ಮಾತನಾಡುವುದು ಆದರೆ ಅರ್ಥಪೂರ್ಣವಾಗಿ ಮಾತನಾಡುವುದರಿಂದ ಹೆಚ್ಚಿನ ಪ್ರಯೋಜನವಾಗುವುದು. ಉದ್ಯಮಿಗಳಿಗೆ ದೊಡ್ಡ ಆರ್ಡರ್ ಸಿಗಬಹುದು. ಹಣಕಾಸಿನ ವಿಷಯಗಳಲ್ಲಿಯೂ ಅದೃಷ್ಟ ನಿಮ್ಮ ಜೊತೆಗಿರುವುದು. ಆರ್ಥಿಕ ಲಾಭಗಳು ಹೆಚ್ಚಾಗುವುದು. ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಉದ್ಯೋಗವಿರಲಿ, ವ್ಯವಹಾರವಿರಲಿ ದೊಡ್ಡ ಮಟ್ಟದ ಲಾಭವಾಗುವುದು.
ತುಲಾ ರಾಶಿ: ತುಲಾ ರಾಶಿಯವರ ಸುವರ್ಣಯುಗ ಆರಂಭವಾಗುತ್ತಿದೆ. ವೃತ್ತಿಪರ ಜೀವನದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಬಹುದು. ಉನ್ನತ ವ್ಯಕ್ತಿಗಳೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳುವಿರಿ. ಅವರ ಬೆಂಬಲದಿಂದ ನೀವು ಕೂಡಾ ಉನ್ನತ ಸ್ಥಾನಕ್ಕೆ ಏರುವಿರಿ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು. ಬಾಕಿ ಇರುವ ಹಣ ನಿಮ್ಮ ಕೈ ಸೇರುವುದು. ಈ ಮೂಲಕ ಹಣದ ಕೊರತೆ ನೀಗುವುದು.ಹೊಸ ಕೆಲಸ ಆರಂಭಿಸುವ ಬಗ್ಗೆ ಯೋಚಿಸಬಹುದು. ಯಶಸ್ಸು ಸಿಗುವುದು.
ಕುಂಭ ರಾಶಿ: ಕುಂಭ ರಾಶಿಯವರ ಸೃಜನಶೀಲತೆ ಹೆಚ್ಚಾಗುವುದು. ನಿಮ್ಮ ಮಾತಿಗೆ ವಿಶೇಷ ಮನ್ನಣೆ ಸಿಗುವುದು. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮವಾಗಿರುವುದು. ನಿಮ್ಮ ಕೆಲಸದಿಂದ ಮೇಲಾಧಿಕಾರಿಗಳು ಸಂತೋಷಗೊಳ್ಳುವರು. ಹಠಾತಾಗಿ ಲಾಭವಾಗುವುದು. ಒಳ್ಳೆಯ ಸುದ್ದಿ ಕೇಳಿ ಬರುವುದು. ವಿದ್ಯಾರ್ಥಿಗಳಿಗೆ ಇದು ಅನುಕೂಲಕರ ಸಮಯವಾಗಿರುವುದು.