ಕೊರಟಗೆರೆ | ₹40 ಕೋಟಿ ವೆಚ್ಚದಲ್ಲಿ ಹೈ–ಟೆಕ್ ಆಸ್ಪತ್ರೆ: ಭರದಿಂದ ಸಾಗಿದ ಕಾಮಗಾರಿ

ಕೊರಟಗೆರೆ |  ₹40 ಕೋಟಿ ವೆಚ್ಚದಲ್ಲಿ ಹೈ–ಟೆಕ್ ಆಸ್ಪತ್ರೆ: ಭರದಿಂದ ಸಾಗಿದ ಕಾಮಗಾರಿ

ಕೊರಟಗೆರೆ | ₹40 ಕೋಟಿ ವೆಚ್ಚದಲ್ಲಿ ಹೈ–ಟೆಕ್ ಆಸ್ಪತ್ರೆ: ಭರದಿಂದ ಸಾಗಿದ ಕಾಮಗಾರಿ

ಕೊರಟಗೆರೆ: ಪಟ್ಟಣದ ಹೊರವಲಯದಲ್ಲಿ ₹40 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 100 ಹಾಸಿಗೆಗಳ ಹೈ–ಟೆಕ್ ಆಸ್ಪತ್ರೆ ಕಾಮಗಾರಿ ಭರದಿಂದ ಸಾಗಿದೆ.

ಪಟ್ಟಣದ ಬೈಪಾಸ್‌ ಸಮೀಪ 4.05 ಎಕರೆ ಜಾಗದಲ್ಲಿ ಎರಡು ಅಂತಸ್ತಿನ ಸುಸಜ್ಜಿತ ಆಸ್ಪತ್ರೆ ಕಟ್ಟಡ ಹಾಗೂ ಆಸ್ಪತ್ರೆ ಸಿಬ್ಬಂದಿಗೆ ವಸತಿ ಗೃಹ ನಿರ್ಮಿಸಲಾಗುತ್ತಿದೆ. ಜಿಲ್ಲಾ ಹಂತದಲ್ಲಿ ದೊರೆಯುವ ಹಲವು ಆರೋಗ್ಯ ಸೇವೆಗಳನ್ನು ತಾಲ್ಲೂಕು ಮಟ್ಟದಲ್ಲಿಯೇ ಒದಗಿಸುವ ಉದ್ದೇಶದಿಂದ ಆಸ್ಪತ್ರೆಯನ್ನು ಆಧುನಿಕ ಮಾದರಿಯಲ್ಲಿ ರೂಪಿಸಲಾಗುತ್ತಿದೆ.

ಪಟ್ಟಣದ ತಾಲ್ಲೂಕು ಆಸ್ಪತ್ರೆ ಕಟ್ಟಡ ಹಳೆಯದಾಗಿದ್ದು, ಜಾಗದ ಕೊರತೆ ಎದುರಾಗಿದೆ. ಚಿಕಿತ್ಸೆಗೆ ಬರುವ ರೋಗಿಗಳು, ವೈದ್ಯರು ಮತ್ತು ಸಿಬ್ಬಂದಿಗೆ ಹಲವು ಸಮಸ್ಯೆಗಳು ಎದುರಾಗುತ್ತಿದ್ದವು. ಹೊಸ ಆಸ್ಪತ್ರೆ ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿತ್ತು. 2025ರ ರಾಜ್ಯ ಬಜೆಟ್‌ನಲ್ಲಿ ಕೊರಟಗೆರೆ ಸೇರಿದಂತೆ ಕೆಲವು ತಾಲ್ಲೂಕು ಮಟ್ಟದ ಆಸ್ಪತ್ರೆಗಳ ನವೀಕರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಘೋಷಿಸಿತ್ತು.

ಸ್ಥಳೀಯವಾಗಿಯೇ ಚಿಕಿತ್ಸೆ: ಹೊಸ ಆಸ್ಪತ್ರೆ ಪೂರ್ಣಗೊಂಡ ಬಳಿಕ ತಾಲ್ಲೂಕಿನ ಜನರು ಚಿಕಿತ್ಸೆಗಾಗಿ ಜಿಲ್ಲಾ ಕೇಂದ್ರ ಅಥವಾ ದೊಡ್ಡ ನಗರಗಳಿಗೆ ಅಲೆಯಬೇಕಾದ ಪರಿಸ್ಥಿತಿ ಕಡಿಮೆಯಾಗಲಿದೆ. ತುರ್ತು ಚಿಕಿತ್ಸೆ, ವಿವಿಧ ತಪಾಸಣೆ, ಶಸ್ತ್ರಚಿಕಿತ್ಸೆ ಸೇರಿದಂತೆ ಹೆಚ್ಚಿನ ಆರೋಗ್ಯ ಸೇವೆಗಳು ಸ್ಥಳೀಯವಾಗಿಯೇ ಲಭ್ಯವಾಗುವ ನಿರೀಕ್ಷೆಯಿದೆ.

ನೂತನ ಆಸ್ಪತ್ರೆ ಕಾರ್ಯಾರಂಭವಾದ ಬಳಿಕ ಈಗಿರುವ ಆಸ್ಪತ್ರೆಯನ್ನು ತಾಯಿ–ಮಕ್ಕಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಉದ್ದೇಶವೂ ಇದೆ. ಇದರಿಂದ ತಾಯಿ ಮತ್ತು ಶಿಶುಗಳ ಆರೋಗ್ಯ ಸೇವೆಗೆ ಪ್ರತ್ಯೇಕ ಮೂಲಸೌಕರ್ಯ ದೊರೆಯಲಿದೆ.

ತಾಲ್ಲೂಕಿನ ಹೊಳವನಹಳ್ಳಿ, ಚಿಕ್ಕಸಾಗ್ಗೆರೆ, ಬುಕ್ಕಾಪಟ್ಟಣ ಹಾಗೂ ಅಕ್ಕಿರಾಂಪುರ ಭಾಗಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ತೋವಿನಕೆರೆಯಲ್ಲಿ ಹೈ–ಟೆಕ್ ಆಸ್ಪತ್ರೆ ಉದ್ಘಾಟನೆಗೆ ಸಿದ್ಧವಾಗುತ್ತಿದೆ.

ಕಟ್ಟಡ ಕಾಮಗಾರಿ ವೇಗವಾಗಿ ಪೂರ್ಣಗೊಳ್ಳುವುದರ ಜೊತೆಗೆ ಅಗತ್ಯ ವೈದ್ಯಕೀಯ ಉಪಕರಣ, ತಜ್ಞ ವೈದ್ಯರು, ಶುಶ್ರೂಷಕರು ಹಾಗೂ ಅಗತ್ಯ ಸಿಬ್ಬಂದಿ ಲಭ್ಯವಾಗುವಂತೆ ನೋಡಿಕೊಂಡರೆ ಸಮಗ್ರ ಆರೋಗ್ಯ ಸೇವೆ ಸಿಗಲಿದೆ ಎನ್ನುವುದು ಸಾರ್ವಜನಿಕರ ಆಶಯ.

ನರ್ಸಿಂಗ್ ಕಾಲೇಜಿಗೆ ಚಿಂತನೆ

ತಾಲ್ಲೂಕಿನ ಜನರಿಗೆ ಸ್ಥಳೀಯವಾಗಿಯೇ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕು ಎಂಬ ಉದ್ದೇಶದಿಂದ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡ ಬಳಿಕ ಜನರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ನಮ್ಮ ಆದ್ಯತೆ ಮುಂದುವರಿಯಲಿದೆ. ಈಗಿರುವ ಆಸ್ಪತ್ರೆ ಬಳಿ ನರ್ಸಿಂಗ್ ಕಾಲೇಜು ಮಾಡುವ ಉದ್ದೇಶ ಇದೆ.

ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ