ಮೂರು ಮಕ್ಕಳಿದ್ದ ಶಾಲೆಯಲ್ಲೀಗ 34 ಚಿಣ್ಣರು: ಸರ್ಕಾರಿ ಶಾಲೆ ಉಳಿಸಿದ ಶಿಕ್ಷಕ

ಮೂರು ಮಕ್ಕಳಿದ್ದ ಶಾಲೆಯಲ್ಲೀಗ 34 ಚಿಣ್ಣರು: ಸರ್ಕಾರಿ ಶಾಲೆ ಉಳಿಸಿದ ಶಿಕ್ಷಕ

ಮೂರು ಮಕ್ಕಳಿದ್ದ ಶಾಲೆಯಲ್ಲೀಗ 34 ಚಿಣ್ಣರು: ಸರ್ಕಾರಿ ಶಾಲೆ ಉಳಿಸಿದ ಶಿಕ್ಷಕ

ಪಾಂಡವಪುರ (ಮಂಡ್ಯ): ಸೂರು ಮುರಿದು ಬೀಳುವ ಹಂತದಲ್ಲಿದ್ದ ತಾಲ್ಲೂಕಿನ ಗೌಡಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಇದ್ದದ್ದು ಕೇವಲ ಮೂರು ಮಕ್ಕಳು. ಗಿಡಗಂಟಿ ಬೆಳೆದು, ದನಕರು ಮೇಯುತ್ತಿದ್ದ ಶಿಥಿಲಾವಸ್ಥೆಯಲ್ಲಿದ್ದ ಶಾಲೆಯಲ್ಲಿ ಇಂದು 34 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಮುಚ್ಚಿ ಹೋಗುವ ಹಂತದಲ್ಲಿದ್ದ ಸರ್ಕಾರಿ ಶಾಲೆಯನ್ನು ಉಳಿಸಿಕೊಳ್ಳುವುದಲ್ಲದೇ ಅದನ್ನು ಈ ಮಟ್ಟಕ್ಕೆ ಬೆಳೆಸಿದವರು ಮುಖ್ಯ ಶಿಕ್ಷಕ ಸಿ.ಎಸ್.ವೆಂಕಟೇಶ್. 1ರಿಂದ 5ನೇ ತರಗತಿವರೆಗಿನ ಈ ಶಾಲೆಗೆ ಅವರು ಬಂದಾಗ ಎರಡು ಕೊಠಡಿ ಮತ್ತು ಒಬ್ಬರು ಕಾಯಂ ಶಿಕ್ಷಕರಿದ್ದರು.

ಬಂದವರೇ ಮೊದಲು ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಿದರು. ಒಂಬತ್ತು ಮಕ್ಕಳು ಪ್ರವೇಶ ಪಡೆದರು. ಬಳಿಕ ಈ ಸಂಖ್ಯೆ 13ಕ್ಕೆ ಏರಿತು. ದುಸ್ಥಿತಿಯಲ್ಲಿದ್ದ ಶಾಲೆಯ ಕಟ್ಟಡಕ್ಕೊಂದು ಹೊಸ ರೂಪ ಕೊಡಲು ನಿರ್ಧರಿಸಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೆರವು ಕೋರಿದರು. ತಾಲ್ಲೂಕು ಪಂಚಾಯಿತಿಯಿಂದ ₹4 ಲಕ್ಷ ಅನುದಾನ ಪಡೆದು ಶಾಲಾ ಕಟ್ಟಡ ದುರಸ್ತಿ ಮಾಡಿಸಿದರು.

ನೇತ್ರ ತಜ್ಞೆ ಡಾ.ಮಣಿಕರ್ಣಿಕಾ ನೆರವು ಪಡೆದು ಶಾಲೆಗೆ ಆವರಣ ಗೋಡೆ ನಿರ್ಮಿಸಿದರು. ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಗೌರವ ಧನ ನೀಡಿದರು. ನಿವೃತ್ತ ಉಪನಿರ್ದೇಶಕಿ ಭಾಗ್ಯಮ್ಮ ಅವರಿಂದ ಬೆಂಚ್‌, ಟೇಬಲ್ ದೇಣಿಗೆಯಾಗಿ ಬಂದವು. ದಾನಿಗಳಾದ ಶರದಿಂದುವಿನ ಉಮಾ ರಾಮನಾಥ್ ಹಾಗೂ ಪ್ರೊ.ಉಮೇಶ್ ಅವರು ಶೈಕ್ಷಣಿಕ ಕಲಿಕೆಗೆ ಪೂರಕವಾದ ಕಲಿಕಾ ಸಾಮಗ್ರಿಗಳನ್ನು ಕೊಡುಗೆಯಾಗಿ ಪಡೆದರು. ವಕೀಲ ಅರವಿಂದ ರಾಘವನ್ ನೀಡಿದ ₹4.50ಲಕ್ಷ ಹಣದಲ್ಲಿ ಹಾಳಾಗಿದ್ದ ಕೊಠಡಿ ದುರಸ್ತಿಗೊಳಿಸಿ ಸ್ಮಾರ್ಟ್‌ ಕ್ಲಾಸ್ ಆರಂಭಿಸಿದರು.

ಶಾಲಾ ಕಟ್ಟಡಗಳನ್ನು ದುರಸ್ತಿಗೊಳಿಸಿ, ಪಾಠದ ಜತೆಗೆ ಧ್ಯಾನ, ಯೋಗ, ಪ್ರಾರ್ಥನೆ, ಕ್ರೀಡೆಯಂತಹ ಚಟುವಟಿಕೆ ಆಧಾರಿತ ಕೌಶಲ ಶಿಕ್ಷಣ ನೀಡುತ್ತಿರುವ ವೆಂಕಟೇಶ್ ಅವರಿಗೆ ಗೌಡಗೆರೆ ಗ್ರಾಮದ ಜನರು ಬೆಂಬಲವಾಗಿ ನಿಂತಿದ್ದಾರೆ.

ವೆಂಕಟೇಶ್ ಈ ಹಿಂದೆ ತಾಲ್ಲೂಕಿನ ಹುಲ್ಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿದ್ದಾಗಲೂ ಆ ಶಾಲೆಯನ್ನೂ ಉನ್ನತೀಕರಿಸಿ ಮಕ್ಕಳ ಸಂಖ್ಯೆ ಹೆಚ್ಚಿಸಿದ್ದರು. ಅಲ್ಲದೆ, ಮಕ್ಕಳಿಗೆ ಕೌಶಲ ಶಿಕ್ಷಣಕ್ಕೆ ಬೇಕಾದ ಎಲ್ಲಾ ಸೌಲಭ್ಯ ಒದಗಿಸಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ