ಮೇಕೆದಾಟು ಯೋಜನೆಯ ಅಡೆತಡೆ ನಿವಾರಿಸಲು ಸೆ.7ರಂದು ದೆಹಲಿಗೆ ನಿಯೋಗ
ಬೆಂಗಳೂರು: ಮೇಕೆದಾಟು ಯೋಜನೆಯ ಅಡೆ ತಡೆ ನಿವಾರಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ನಿಯೋಗ ಸೆ. 7ರಂದು ದೆಹಲಿಗೆ ತೆರಳಲಿದ್ದು, ಪರಿಭಾವಿತ ಅರಣ್ಯವನ್ನು ಪರಿಹಾರ ಭೂಮಿಯಾಗಿ ಹಸ್ತಾಂತರಿಸಲು ಒಪ್ಪಿಗೆ ಪಡೆಯುವ ನಿರೀಕ್ಷೆ ಇದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ವಿಧಾನಸೌಧದಲ್ಲಿ ಜಿಲ್ಲಾಧಿಕಾರಿ ಗಳೊಂದಿಗೆ ನಡೆಸಿದ ವಿಡಿಯೊ ಸಂವಾದದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಒಮ್ಮೆ ಒಪ್ಪಿಗೆ ದೊರೆತರೆ ಯೋಜನೆಗಾಗಿ ಮುಳುಗಡೆಯಾಗಲಿರುವ ಭೂಮಿಗೆ ಪರ್ಯಾಯ ಭೂಮಿಯನ್ನು ತ್ವರಿತವಾಗಿ ಹಸ್ತಾಂತರಿಸಲಾಗುವುದು. ಹಣಕಾಸಿನ ಅಗತ್ಯವಿದ್ದರೆ ನೀರಾವರಿ ನಿಗಮಗಳನ್ನು ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ’ ಎಂದರು.
ವಿಸ್ತೃತ ಯೋಜನಾ ವರದಿ (ಡಿಪಿಆರ್) ತಾಂತ್ರಿಕ ಅನುಮೋದನೆಪಡೆಯುವ ಪ್ರಕ್ರಿಯೆ ಚುರುಕು ಗೊಂಡಿದೆ. ಯೋಜನೆಗಾಗಿ ಮುಳುಗಡೆ ಯಾಗಲಿರುವ 5,096 ಹೆಕ್ಟೇರ್ ಅರಣ್ಯಭೂಮಿಗೆ ಪರ್ಯಾಯವಾಗಿ ರಾಜ್ಯ ಸರ್ಕಾರದಿಂದ ಭೂಮಿ ನೀಡಬೇಕಿದೆ. ಇದಕ್ಕಾಗಿ, ಕಂದಾಯ ಇಲಾಖೆಯು ಈಗಾಗಲೇ 20 ಸಾವಿರ ಹೆಕ್ಟೇರ್ ಗುರುತಿಸಿದೆ. ಆದರೆ, ಅರಣ್ಯ ಬೆಳೆಸಲುಅಗತ್ಯವಿರುವ 5 ಸಾವಿರ ಹೆಕ್ಟೇರ್ ಭೂಮಿಯನ್ನು ತ್ವರಿತವಾಗಿ ಒದಗಿಸ ಬೇಕಿದೆ. ಸೂಕ್ತ ಪರ್ಯಾಯ ಜಮೀನು ಹುಡುಕಿ ವರದಿ ಸಲ್ಲಿಸುವಂತೆ ಆದೇಶಿಸ ಲಾಗಿದೆ. 1:2 ಅನುಪಾತದಲ್ಲಿ ಪರ್ಯಾಯ ಭೂಮಿ ನೀಡಲು ಚಾಮರಾಜನಗರ, ಮಂಡ್ಯ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳಲ್ಲಿ ಅವಕಾಶಗಳಿವೆ. ಇಲಾಖೆ ಸಮ್ಮತಿಸಿದರೆ ಮಂಡ್ಯ ಜಿಲ್ಲೆಯೊಂದರಲ್ಲೇ ಲಭ್ಯವಿರುವ 30 ಸಾವಿರ ಹೆಕ್ಟೇರ್ ಒದಗಿಸಬಹುದು ಎಂದು ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-51-586549715