165 ಪಿಯು ಕಾಲೇಜು ಕಾಯಕಲ್ಪಕ್ಕೆ ಪ್ರಸ್ತಾವ

165 ಪಿಯು ಕಾಲೇಜು ಕಾಯಕಲ್ಪಕ್ಕೆ ಪ್ರಸ್ತಾವ

165 ಪಿಯು ಕಾಲೇಜು ಕಾಯಕಲ್ಪಕ್ಕೆ ಪ್ರಸ್ತಾವ

ಬಳ್ಳಾರಿ: ರಾಜ್ಯದ ಗಣಿಬಾಧಿತ ನಾಲ್ಕು ಜಿಲ್ಲೆಗಳ ಪದವಿಪೂರ್ವ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಕರ್ನಾಟಕ ಗಣಿ ಪರಿಸರ ಪುನಶ್ಚೇತನ ಸಂಸ್ಥೆ (ಕೆಎಂಇಆರ್‌ಸಿ) ಯೋಜನೆ ಜಾರಿಗೊಳಿಸಲು ಮುಂದಾಗಿದೆ.

ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಯ ಒಟ್ಟು 165 ಪದವಿಪೂರ್ವ ಕಾಲೇಜುಗಳ 38 ಸಾವಿರ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕೃತಕ ಬುದ್ಧಿಮತ್ತೆ (ಎಐ) ಆಧರಿಸಿದ ಶಿಕ್ಷಣ ಸೇರಿ ವಿವಿಧ ವಿಷಯಗಳ ಅಧ್ಯಯನಕ್ಕೆ ನೆರವಾಗಲಿದೆ. ಕಾಲೇಜುಗಳ ಮೂಲಸೌಲಭ್ಯ ಅಭಿವೃದ್ಧಿಗೆ ಆದ್ಯತೆ ಸಿಗಲಿದೆ.

ಕೆಎಂಇಆರ್‌ಸಿಯ 31ನೇ ‘ಗಣಿಗಾರಿಕೆ ಪರಿಣಾಮ ವಲಯಕ್ಕಾಗಿ ಸಮಗ್ರ ಪರಿಸರ ಯೋಜನೆ (ಸಿಇಪಿಎಂಐಝಡ್‌)’ ಸಭೆ ಕಳೆದ ತಿಂಗಳು ನಡೆದಿದ್ದು, ಇದರಲ್ಲಿ ಪದವಿಪೂರ್ವ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿ ಮತ್ತು ಯೋಜನೆ ಕುರಿತು ಚರ್ಚಿಸಲಾಗಿದೆ.

ಕಲಿಕೆಗೆ ಆಧುನಿಕ ಸ್ಪರ್ಶ, ಹೊಸ ಕೋರ್ಸ್‌ಗಳು: ಕಾಲೇಜುಗಳ ವಿಜ್ಞಾನ ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸುವುದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷಾ ಸಂವಹನ ಸಾಮರ್ಥ್ಯಕ್ಕೆ ವಿಶೇಷ ತರಬೇತಿ ನೀಡುವುದು, ಮಧ್ಯಾಹ್ನದ ಬಿಸಿಊಟ ಒದಗಿಸುವ ಉದ್ದೇಶವಿದೆ.

‘ಅಭಿವೃದ್ಧಿ ಅರ್ಥ ಕಟ್ಟಡಗಳಲ್ಲ’

ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಿದ ಹಲವು ಪ್ರಸ್ತಾವನೆಗಳು ಕೆಎಂಇಆರ್‌ಸಿಗೆ ಸಲ್ಲಿಕೆಯಾಗುತ್ತಿವೆ. ಅಭಿವೃದ್ಧಿ ಮತ್ತು ಪುನಶ್ಚೇತನ ಎಂದರೆ ಕಟ್ಟಡಗಳು ಮಾತ್ರವೇ ಅಲ್ಲ. ಅದು ರಚನಾತ್ಮಕವಾಗಿರಬೇಕು. ಆದ್ದರಿಂದಲೇ ಶಿಕ್ಷಣ ಇಲಾಖೆಯ ಪ್ರಸ್ತಾವನೆಗಳಲ್ಲಿ ಕಲಿಕೆ, ತರಬೇತಿ, ಜ್ಞಾನ ವೃದ್ಧಿಯಂಥ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇವೆ. ಈ ಯೋಜನೆಯಲ್ಲಿಯೂ ಮೊದಲು ಕೇವಲ ಮೂಲಸೌಕರ್ಯಕ್ಕೆ ಮಾತ್ರವೇ ಆದ್ಯತೆ ನೀಡಲಾಗಿತ್ತು. ಮಾರ್ಪಾಡಿಗೆ ಸೂಚನೆ ನೀಡಿದ ಬಳಿಕ ಎಐ ತರಬೇತಿ, ಇಂಗ್ಲಿಷ್‌ ಕಲಿಕೆ ಮತ್ತು ಮಧ್ಯಾಹ್ನದ ಬಿಸಿಯೂಟದಂಥ ಕಾರ್ಯಕ್ರಮಗಳನ್ನು ಸೇರಿಸಲಾಗಿದೆ ಎಂದು ಕೆಎಂಇಆರ್‌ಸಿಯ ವ್ಯವಸ್ಥಾಪಕ ನಿರ್ದೇಶಕ ಅಭಿರಾಮ್‌ ಶಂಕರ್ ಪ್ರಜಾವಾಣಿಗೆ ತಿಳಿಸಿದ್ದಾರೆ.

ಗಣಿಗಾರಿಕೆಯಿಂದ ತೀವ್ರವಾಗಿ ಬಾಧಿತ ಜಿಲ್ಲೆಗಳಲ್ಲಿನ (ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ತುಮಕೂರು) ಪರಿಸರ ಮತ್ತು ಜನರ ಬದುಕಿನ ಪುನಶ್ಚೇತನಕ್ಕಾಗಿ ಸುಪ್ರೀಂ ಕೋರ್ಟ್‌ನ ನೇರ ಸೂಚನೆಯೊಂದಿಗೆ ಕೆಎಂಇಆರ್‌ಸಿ ಸ್ಥಾಪಿಸಲಾಗಿದೆ. ನಿಗಮವು ಈವರೆಗೆ ನಾಲ್ಕು ಜಿಲ್ಲೆಗಳಿಗೆ ಸಂಬಂಧಿಸಿದ ₹13 ಸಾವಿರ ಕೋಟಿ ಮೌಲ್ಯದ 585 ಅಭಿವೃದ್ಧಿ, ಪುನಶ್ಚೇತನ ಯೋಜನೆಗಳಿಗೆ ಅನುಮೋದನೆ ನೀಡಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ