14 ವರ್ಷಗಳ ನಂತರ ಬಂದ ಶುಭಯೋಗ: ಈ ನಾಲ್ಕು ರಾಶಿಯವರಿಗೆ ಒಲಿಯುವಳು ಅದೃಷ್ಟ ಲಕ್ಷ್ಮೀ

14 ವರ್ಷಗಳ ನಂತರ ಬಂದ ಶುಭಯೋಗ: ಈ ನಾಲ್ಕು ರಾಶಿಯವರಿಗೆ ಒಲಿಯುವಳು ಅದೃಷ್ಟ ಲಕ್ಷ್ಮೀ

14 ವರ್ಷಗಳ ನಂತರ ಬಂದ ಶುಭಯೋಗ: ಈ ನಾಲ್ಕು ರಾಶಿಯವರಿಗೆ ಒಲಿಯುವಳು ಅದೃಷ್ಟ ಲಕ್ಷ್ಮೀ

ಜ್ಯೋತಿಷ್ಯದ ಪ್ರಕಾರ 14 ವರ್ಷಗಳ ನಂತರ, ಕರ್ಕಾಟಕ ರಾಶಿಯಲ್ಲಿ ಗುರು ಮತ್ತು ಮಂಗಳ ಗ್ರಹಗಳು (Jupiter Mars Conjunction) ಒಟ್ಟಿಗೆ ಸೇರುತ್ತಿವೆ. ಈ ಎರಡು ಗ್ರಹಗಳ ಸಂಯೋಗದಿಂದ ಕೆಲವು ರಾಶಿಯವರಿಗೆ ಉತ್ತಮ ಆರ್ಥಿಕ ಲಾಭವಾಗುವುದು. ಹಾಕಿಕೊಂಡಿರುವ ಎಲ್ಲಾ ಯೋಜನೆಗಳು ಯಶಸ್ವಿಯಾಗುವ ಸಾಧ್ಯತೆಗಳಿವೆ.

ವೈದಿಕ ಜ್ಯೋತಿಷ್ಯದ ಪ್ರಕಾರ, ಒಂಭತ್ತು ಗ್ರಹಗಳಲ್ಲಿ ಮಂಗಳವನ್ನು ಧೈರ್ಯ, ಶಕ್ತಿ ಮತ್ತು ಉತ್ಸಾಹದ ಸಂಕೇತ ಎಂದು ಹೇಳಲಾಗ್ತದೆ. ಗುರು ಬುದ್ಧಿವಂತಿಕೆ,ಅದೃಷ್ಟ ಮತ್ತು ಮಾರ್ಗದರ್ಶನದ ಅಧಿಪತಿ. ಈ ವರ್ಷ ಸೆಪ್ಟೆಂಬರ್ 18 ಶುಕ್ರವಾರ ಅಂದರೆ ಇವತ್ತು ಸಂಜೆ 5.03 ಕ್ಕೆ ಮಂಗಳ ಗ್ರಹವು ಕರ್ಕ ರಾಶಿಯನ್ನು ಪ್ರವೇಶಿಸುತ್ತದೆ. ಗುರು ಈಗಾಗಲೇ ಇದೇ ರಾಶಿಯಲ್ಲಿ ಸಂಚಾರ ಮಾಡ್ತಾ ಇದ್ದಾನೆ. ಈ ಎರಡು ಗ್ರಹಗಳ ನಡುವೆ ಸ್ನೇಹ ಸಂಬಂಧ ಇರುತ್ತದೆ ಎನ್ನುವುದು ಜ್ಯೋತಿಷ್ಯ ಲೆಕ್ಕಾಚಾರ. ಚಂದ್ರನ ಅಧಿಪತ್ಯದ ಕರ್ಕ ರಾಶಿಯಲ್ಲಿ ಗುರು ಮತ್ತು ಮಂಗಳನ ಸಂಯೋಜನೆಯು ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟದ ಹೊನಲು ಹರಿಸಲಿದೆ. ಉದ್ಯಮಿಗಳು ಹೊಸ ಹೊಸ ಅವಕಾಶಗಳು ಸಿಗುವುದು. ಬಾಕಿ ಇರುವ ಕೆಲಸಗಳು ಸರಾಗವಾಗಿ ಮುಂದುವರಿಯುವುದು.

ಗುರು ಮತ್ತು ಮಂಗಳನ ಸಂಯೋಗದಿಂದ ಅದೃಷ್ಟ ಪಡೆಯುವ ರಾಶಿಗಳು

ಕರ್ಕಾಟಕ ರಾಶಿಯವರಿಗೆ ಗುರು ಮತ್ತು ಮಂಗಳ ಗ್ರಹದ ಸಂಯೋಗದಿಂದಾಗಿ ಉತ್ತಮ ಫಲಿತಾಂಶಗಳು ಸಿಗುವುದು. ಉದ್ಯಮಿಗಳೂ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಪಡೆಯುವರು. ನೀವು ಮಾಡುವ ಹೂಡಿಕೆಗಳು ಉತ್ತಮ ಲಾಭವನ್ನು ತಂದುಕೊಡುವುದು. ತುಂಬಾ ಸಮಯದಿಂದ ಪೂರ್ಣವಾಗದೆ ನಿಂತು ಹೋಗಿರುವ ಕೆಲಸಗಳು ದಡ ಸೇರುವುದು. ಪ್ರಮುಖ ಯೋಜನೆಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನೀವು ಕೈಗೊಳ್ಳುವ ಪ್ರಯಾಣವು ಉತ್ತಮ ಫಲಿತಾಂಶಗಳನ್ನು ನೀಡುವುದು. ನಾಯಕತ್ವದ ಕೌಶಲ್ಯಗಳು ಬೆಳೆಯುವುದು. ಪ್ರಭಾವಿ ಜನರೊಂದಿಗೆ ಸಂಪರ್ಕ ಬೆಳೆಸಿಕೊಳ್ಳುವಿರಿ. ಇದು ಮುಂದಿನ ದಿನಗಳಲ್ಲಿ ನಿಮಗೆ ಪ್ರಯೋಜನಕಾರಿಯಾಗಿರಲಿದೆ.

ಗುರು ಮತ್ತು ಮಂಗಳ ಗ್ರಹದ ಪ್ರಭಾವದಿಂದ ಕನ್ಯಾ ರಾಶಿಯವರಿಗೆ ಯಶಸ್ಸಿಗೆ ಬೇಕಾದಷ್ಟು ಅವಕಾಶಗಳು ಸಿಗುವುದು. ಮಕ್ಕಳಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ನಿಮ್ಮ ಆದ್ಯತೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಿರಿ. ಪ್ರಮುಖ ಕಾರ್ಯಗಳ ಬಗ್ಗೆ ಸಂಪೂರ್ಣ ಗಮನ ಹರಿಸುವಿರಿ. ಉದ್ಯೋಗಿಗಳು ತಮ್ಮ ಮೇಲಧಿಕಾರಿಗಳಿಂದ ಪ್ರಶಂಸೆ ಪಡೆಯಬಹುದು. ಕುಟುಂಬ ಜೀವನದಲ್ಲಿ ಸಂತೋಷದ ವಾತಾವರಣವಿರುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯುವ ಸಾಧ್ಯತೆಯಿದೆ.

ತುಲಾ ರಾಶಿಯವರ ಶುಭ ದಿನಗಳು ಇವತ್ತಿನಿಂದ ಆರಂಭವಾಗುವುದು. ಕೈ ಹಾಕುವ ಎಲ್ಲಾ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಇಲ್ಲಿವರೆಗೆ ಅನುಭವಿಸಿದ ಕಷ್ಟಗಳಿಗೆ ವಿರಾಮ ಬೀಳುವುದು. ಹೊಸ ಕೆಲಸ ಆರಂಭಿಸುವುದಕ್ಕೆ ಸಮಯ ಸೂಕ್ತವಾಗಿದೆ. ನಿಮ್ಮ ಶಕ್ತಿ ಮತ್ತು ಸಾಮರ್ಥ್ಯ ಹೆಚ್ಚಾಗುವ ಸಾಧ್ಯತೆಯಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಉತ್ತಮ ಲಾಭವಾಗುವುದು. ಕುಟುಂಬ ಜೀವನದಲ್ಲಿ ಸಂತೋಷ ಇರುವುದು. ಕಚೇರಿಯಲ್ಲಿನ ವಾತಾವರಣವು ಉದ್ಯೋಗಿಗಳಿಗೆ ಅನುಕೂಲಕರವಾಗಿರುವುದು.

ಮೀನ ರಾಶಿಯವರಿಗೆ ಇಂದಿನಿಂದ ವಿಶೇಷ ಲಾಭವಾಗುವ ಸಾಧ್ಯತೆ ಇದೆ. ನೀವು ಮಾಡಿರುವ ಹೂಡಿಕೆಗಳು ಉತ್ತಮ ಲಾಭವನ್ನು ನೀಡಬಹುದು. ಆರ್ಥಿಕ ಪರಿಸ್ಥಿತಿ ಸದೃಢವಾಗುವುದು. ಮಾನಸಿಕ ಒತ್ತಡ ಕಡಿಮೆಯಾಗುವುದು. ಇದರಿಂದ ನೀವು ಹೆಚ್ಚು ಸಕಾರಾತ್ಮಕ ಮತ್ತು ಆತ್ಮವಿಶ್ವಾಸದಿಂದ ಇರುವಿರಿ. ಈ ಅವಧಿಯಲ್ಲಿ ಕೆಲವು ಹೊಸ ಜನರ ಪರಿಚಯವಾಗುವುದು. ಭವಿಷ್ಯದಲ್ಲಿ ಅನೇಕ ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಗಳಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸುವುದು. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆಯಿದೆ.

jupiter mars zodiac ರಾಶಿ ಭವಿಷ್ಯ

jupiter mars zodiac ರಾಶಿ ಭವಿಷ್ಯ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ