ಶಿಡ್ಲಘಟ್ಟ ತಾಲೂಕಿನಲ್ಲಿ ಸೆ.12 ರಂದು ಪ್ರಜಾ ಸೇವಾ ಆಂದೋಲನ

ಶಿಡ್ಲಘಟ್ಟ ತಾಲೂಕಿನಲ್ಲಿ ಸೆ.12 ರಂದು ಪ್ರಜಾ ಸೇವಾ ಆಂದೋಲನ

ಶಿಡ್ಲಘಟ್ಟ ತಾಲೂಕಿನಲ್ಲಿ ಸೆ.12 ರಂದು ಪ್ರಜಾ ಸೇವಾ ಆಂದೋಲನ

ಶಿಡ್ಲಘಟ್ಟ: ಬಶೆಟ್ಟಿಹಳ್ಳಿ ಹೋಬಳಿಯ ಕೆಪಿಎಸ್ ಶಾಲೆಯಲ್ಲಿ ಸೆ.12ರಂದು ತಾಲ್ಲೂಕು ಮಟ್ಟದ ಪ್ರಜಾ ಸೇವಾ ಆಂದೋಲನ ನಡೆಯಲಿದೆ ಎಂದು ತಹಶೀಲ್ದಾರ್ ಗಗನ ಸಿಂಧು ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಗ್ರಾಮೀಣ ಜನರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳೀಯವಾಗಿಯೇ ಅಧಿಕಾರಿಗಳ ಸಮ್ಮುಖದಲ್ಲಿ ಅಹವಾಲು ಸಲ್ಲಿಸಿ ಪರಿಹಾರ ಪಡೆಯಲು ಈ ಆಂದೋಲನ’ ಎಂದರು.

‘ಅರ್ಜಿಗಳನ್ನು ಐ.ಪಿ.ಜಿ.ಆರ್.ಎಸ್ ಪೋರ್ಟಲ್‌ನಲ್ಲಿ ದಾಖಲಿಸಿ ಸಂಬಂಧಿತ ಇಲಾಖೆಗೆ ರವಾನಿಸಲಾಗುವುದು. ಹಾಗಾಗಿ ಸಮಸ್ಯೆ, ಸ್ಥಳ, ಬೇಡಿಕೆಯನ್ನು ಅರ್ಜಿಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಹಿಂದಿನ ಬಾರಿ ಕೆಲವು ಅರ್ಜಿಗಳಲ್ಲಿ ಮಾಹಿತಿ ಅಪೂರ್ಣವಿತ್ತು. ಆದ್ದರಿಂದ ಅಗತ್ಯ ದಾಖಲೆ ಹಾಗೂ ಸಂಪೂರ್ಣ ವಿವರಗಳೊಂದಿಗೆ ಮನವಿ ಸಲ್ಲಿಸಬೇಕು’ ಎಂದರು.

30 ದಿನದೊಳಗೆ ವಿಲೇವಾರಿ: ‘ಅರ್ಜಿಗಳನ್ನು ಗರಿಷ್ಠ 30 ದಿನಗಳೊಳಗೆ ವಿಲೇವಾರಿ ಮಾಡಲಾಗುವುದು. ತುರ್ತು ಸಮಸ್ಯೆಗಳಿಗೆ ವೇದಿಕೆಯಲ್ಲಿಯೇ ಪರಿಹಾರ ಕಲ್ಪಿಸಲಾಗುವುದು. ಬಾಕಿ ಅರ್ಜಿ ವಿಲೇವಾರಿಗೆ ಪ್ರತಿ ಬುಧವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು’ ಎಂದರು.

ಸಾದಲಿಯಲ್ಲಿ 175 ಅರ್ಜಿ: ‘ಸಾದಲಿ ಹೋಬಳಿಯಲ್ಲಿ ನಡೆದ ಮೊದಲ ಹಂತದ ಆಂದೋಲನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಒಟ್ಟು 175 ಅರ್ಜಿ ಸ್ವೀಕೃತವಾಗಿದ್ದು, 80ರಿಂದ 90 ಅರ್ಜಿಗಳು ಕಂದಾಯ ಇಲಾಖೆಗೆ ಸಂಬಂಧಿಸಿವೆ. ದಾರಿ ಒತ್ತುವರಿ, ಸಾಗುವಳಿ ಚೀಟಿ, ಖಾತೆ ಬದಲಾವಣೆ, ಫಾರಂ 53 ಹಾಗೂ 57 ಸೇರಿದಂತೆ ವಿವಿಧ ವಿಷಯಗಳ ಅರ್ಜಿಗಳು ಬಂದಿವೆ. ನಿಯಮಾನುಸಾರ ಪರಿಶೀಲಿಸಿ ವಿಲೇವಾರಿ ಮಾಡುವ ಪ್ರಕ್ರಿಯೆ ಮುಂದುವರಿದಿದೆ’ ಎಂದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ