ಗದಗ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮದ್ಯ ಸಾಗಣೆ, ಮಾರಾಟ ನಿಷೇಧ

ಗದಗ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮದ್ಯ ಸಾಗಣೆ, ಮಾರಾಟ ನಿಷೇಧ

ಗದಗ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಮದ್ಯ ಸಾಗಣೆ, ಮಾರಾಟ ನಿಷೇಧ

ಗದಗ: ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆ ಮದ್ಯ ಸಾಗಣೆ ಹಾಗೂ ಮಾರಾಟ ನಿಷೇಧಿಸಲಾಗಿದೆ. ಶಾಂತಿ–ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಆಯಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕ್ರಮ ವಹಿಸಲಾಗಿದೆ.

ಜಿಲ್ಲೆಯಾದ್ಯಂತ, ಸೆ.18ರಂದು (5ನೇ ದಿನ) ಬೆಳಿಗ್ಗೆ 6 ಗಂಟೆಯಿಂದ 19ರ ಬೆಳಿಗ್ಗೆ 6 ಗಂಟೆಯವರೆಗೆ 20ರಂದು (7ನೇ ದಿನ) ಬೆ.6ರಿಂದ 21ರ ಬೆ.6 ಗಂಟೆ, 22ರಂದು (9ನೇ ದಿನ) ಬೆ.6ರಿಂದ 23ರ ಬೆ.6 ಗಂಟೆ, 24ರಂದು (11ನೇ ದಿನ) ಬೆ.6ಯಿಂದ 25ರಂದು ಬೆ.6 ಗಂಟೆವರೆಗೆ ನಿಷೇಧಿಸಲಾಗಿದೆ.

ಮುಳಗುಂದ/ ಲಕ್ಷ್ಮೇಶ್ವರ/ ನರೇಗಲ್ ಠಾಣಾ ವ್ಯಾಪ್ತಿಯಲ್ಲಿ 26ರಂದು (13ನೇ ದಿನ) ಬೆ.6ರಿಂದ 27ರ ಬೆ.6 ಗಂಟೆ, ಲಕ್ಷ್ಮೇಶ್ವರ ಠಾಣಾ ವ್ಯಾಪ್ತಿಯಲ್ಲಿ 28ರಂದು (15ನೇ ದಿನ) ಬೆ.6ರಿಂದ 29ರ ಬೆ.6 ಗಂಟೆ, ಲಕ್ಷ್ಮೇಶ್ವರ ತಾಲ್ಲೂಕು ಶಿಗ್ಲಿ ವ್ಯಾಪ್ತಿಯಲ್ಲಿ 30ರಂದು (17ನೇ ದಿನ) ಬೆ.6ರಿಂದ ಅಕ್ಟೋಬರ್ 1ರ ಬೆ.6 ಗಂಟೆ, ಲಕ್ಷ್ಮೇಶ್ವರ ಠಾಣಾ ವ್ಯಾಪ್ತಿಯಲ್ಲಿ ಅ.2 ರಂದು (19ನೇ ದಿನ) ಬೆ.6ರಿಂದ ಅ.3ರಂದು ಬೆ.6 ಗಂಟೆ, ಗದಗ–ಬೆಟಗೇರಿ ನಗರಸಭೆ ವ್ಯಾಪ್ತಿ ಮತ್ತು ಗಜೇಂದ್ರಗಡ ಠಾಣಾ ವ್ಯಾಪ್ತಿಯಲ್ಲಿ ಅ.4ರಂದು (21ನೇ ದಿನ) ಬೆ.6ರಿಂದ 5ರಂದು ಬೆ.6ಗಂಟೆವರೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ