
'Toxic' ಟೀಕೆ ಬಳಿಕ ಯಶ್ ಫ್ಯಾನ್ಸ್‌ಗೆ ರಿಷಿಕಾ ಸಿಂಗ್ ತಿರುಗೇಟು: 'ನಿಮಗೆ ಉಗಿಬೇಕು' ಎಂದ ನಟಿ; ಫ್ಯಾನ್ಸ್ ಹೇಳಿದ್ದೇನು?
ಬೆಂಗಳೂರು: ನಟ ಯಶ್ ಅವರ 'ಟಾಕ್ಸಿಕ್' ಸಿನಿಮಾ ಕುರಿತ ವ್ಯಾಪಕವಾಗಿ ಟೀಕಿಸುತ್ತಿದ್ದಂತೆ ನಟಿ ರಿಷಿಕಾ ಸಿಂಗ್ ಮತ್ತು ಯಶ್ ಫ್ಯಾನ್ಸ್ ನಡುವಿನ ಸಮರ ತಾರಕಕ್ಕೇರಿದೆ. 'ಡೋಂಟ್ ಟಾಕ್ ಲೈಕ್ ಯುವರ್ ಬಾಸ್' ಇಂಥವರನ್ನು ಸಪೋರ್ಟ್ ಮಾಡ್ತಿರಲ್ಲವಾ ನಿಮಗೆ ಉಗಿಬೇಕು' ಎಂದು ರಿಷಿಕಾ ಅವರು ಮಾತನಾಡಿದ್ದಾರೆ. ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಟ ಯಶ್ ಅವರ 'ಟಾಕ್ಸಿಕ್' ಸಿನಿಮಾ ಟ್ರೈಲರ್ ಕುರಿತು ನಟಿ ರಿಷಿಕಾ ಸಿಂಗ್ ಅವರು, ಯಶ್ ಹೆಂಡತಿ ಮಕ್ಕಳನ್ನು ಉಲ್ಲೇಖಿಸಿ ಟೀಕಿಸಿದ್ದರು. ಇದರ ಬೆನ್ನಲ್ಲೆ ಯಶ್ ಫ್ಯಾನ್ಸ್ ರಿಷಿಕಾ ಅವರ ವಿರುದ್ಧ ಮುಗಿಬಿದ್ದಿದ್ದಾರೆ. ಇದೀಗ ಇನ್‌ಸ್ಟಾಗ್ರಾಮ್ ಲೈವ್ ಬಂದು ರಿಷಿಕಾ ಸಿಂಗ್ ಯಶ್ ಫ್ಯಾನ್ಸ್ ಕುರಿತು ಪ್ರತಿಕ್ರಿಯಿಸಿದ್ದಾರೆ. ಈ ಹಿಂದಿನ ಟಾಕ್ಸಿಕ್ ಟ್ರೈಲರ್ ಟೀಕಿಸಿದ ಬಳಿಕ ಬಂದ ಕಾಮೆಂಟ್‌ಗಳನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
'ಲೈವ್ ಬಂದ ತಕ್ಷಣೆ ಬೊಗಳಬೇಡಿ, ಹೀಗೆ ಮಾತಾಡಿದ್ರಿ ಕಾರ್ಪೋರೇಷನ್ ಅವರನ್ನು ಕರೆಸಬೇಕಾಗುತ್ತದೆ. ಡೋಂಟ್ ಟಾಕ್ ಲೈಕ್ ಯುವರ್ ಬಾಸ್. ಎಲ್ಲದರ ಬಗ್ಗೆ ಮಾತನಾಡೋಕೆ ಲೈವ್‌ಗೆ ಬಂದಿದ್ದೇನೆ ಎಂದು ಸುಮಾರು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಲೈವ್‌ನಲ್ಲಿದ್ದೀವಿ ಅಂದ್ರೆ ಅಮೀಕ್ಕಂಡು ಆರಾಮಾಗಿ ಕೂತುಕೊಳ್ಳಿ. ನಮ್ಮ ಮುಂದೆ ನಮಗೆ ಅವಾಜ್ ಹಾಕ್ತಿರಾ ನೀವ್ ಎಷ್ಟು 'ಟಾಕ್ಸಿಕ್' ಆಗಿರಬೇಡ ಎಂದು ಮಹಿಳಾ ಫ್ಯಾನ್ಸ್‌ಗೂ ಹೇಳಿದ್ದಾರೆ. ನಿಮ್ಮ ಬಗ್ಗೆನೂ ಮಾತಾಡ್ತಿನಿ, ನಿಮ್ಮ 'ಟಾಕ್ಸಿಕ್' ಫ್ಯಾನ್ಸ್ ಬಗ್ಗೆನು ಮಾತಾಡ್ತಿನಿ. ಸ್ವಲ್ಪ ಸಮಾಧಾನ ಇರಲಿ' ಎಂದಿರುವ ವಿಡಿಯೋ ಹರಿದಾಡುತ್ತಿದೆ.
ನಟಿಯರನ್ನು ಸರಿಯಾಗಿ ತೋರಿಸಿಲ್ಲ, ಮೇಲ್ ಇಗೋ ಸಿನಿಮಾನಾ?
ಟಾಕ್ಸಿನ್‌ನಲ್ಲಿ ಐದಾರು ಜನ ನಾಯಕಿಯರು ಇದ್ದಾರೆ. ಮೇಲ್ ಇಗೋಗೆ ಅಂತಾನೇ ಈ ರೀತಿಯ ಸಿನಿಮಾ ಮಾಡಿದ್ದೀರಾ?. ಹೆಣ್ಣುಮಕ್ಕಳಿಗೆ ಮರಿಯಾದೆ ಇಲ್ಲವಾ...? ಐವರಲ್ಲಿ ಒಬ್ಬ ನಟಿಯನ್ನಾದ್ರೂ ಸಿನಿಮಾದಲ್ಲಿ ಹೊಗಳಿ, ಉತ್ತಮವಾಗಿ ತೋರಿಸಿಲ್ಲ. ಸಿನಿಮಾದಲ್ಲಿ ಎಲ್ಲ ನಟಿಯರೂ ಅಳುತ್ತಿದ್ದಾರೆ. ಬ್ಯೂಟಿಫುಲ್ ಕಿಯಾರೆಗೆ ನಿನ್ ರೇಟ್ ಎಷ್ಟು ಎಂದು ಕೇಳಲಾಗುತ್ತದೆ. ಇದಕ್ಕೆನಾ ಬಾಲಿವುಡ್‌ನಿಂದ ಕರೆದುಕೊಂಡು ಬಂದಿದ್ದು, ಈ ರೀತಿ ಮಾಡೋಕಾ? ಯಶ್ ನನ್ನು ಸಪೋರ್ಟ್ ಮಾಡಿಕೊಂಡು ಬರೋ ನಿಮಗೆಲ್ಲ ಕ್ಯಾಕರಿಸಿ ಉಗಿಬೇಕು ಎಂದು ಯಶ್ ಫ್ಯಾನ್ಸ್‌ಗೆ ರಿಷಿಕಾ ಹೇಳಿದ್ದಾರೆ. ಕನ್ನಡ ನಂಬಿಕೊಂಡು ಬಾಲಿವುಡ್‌ನಿಂದ ಬಂದಿದ್ದಾರೆ. ಅವರನ್ನು ಈ ರೀತಿಯಾ ತೋರಿಸೋದು ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ನಮ್ ಜತೆ ಯಶ್ ಹ್ಯಾಂಗ್‌ಔಟ್ ಮಾಡ್ತಿದ್ರು: ರಿಷಿಕಾ
ಯಶ್ ಫ್ಯಾನ್ಸ್ ಟ್ರೋಲ್ ಪ್ರತಿಕ್ರಿಯ ಮುಂದುವರಿಸಿದ ರಿಷಿಕಾ ಅವರು, 'ನಮ್ಮ ತಂದೆ ಸಿನಿಮಾ ಮಾಡಿರುವಷ್ಟು, ಸಿನಿಮಾ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವಷ್ಟು... ಅವೇಲ್ಲಾ ಹೇಳಬೇಕಿಲ್ಲ. ಯಶ್ ಹುಟ್ಟುವ ಮೊದಲೇ "ಅಂತ" ಮತ್ತು "ಬಂಧನ" ಸಿನಿಮಾ ಮಾಡಲಾಗಿತ್ತು.. ಅದರದ್ದೇಲ್ಲಾ ಸೌಂಡ್ ಇಂದಿಗೂ ಗುಂಜತಿದೆ. ನಮ್ಮ ರಕ್ತದಲ್ಲೇ ಸಿನಿಮಾ ಇದೆ. ನಾವು ಹುಟ್ಟಿದ್ದೆ ಸಿನಿಮಾ ಇಂಡಸ್ಟ್ರೀಯಲ್ಲಿ' ಎಂದು ರಿಷಿಕಾ ವಿವರಿಸಿದ್ದಾರೆ.
'ನಿಮ್ಮ ಯಶ್ ಚಾನ್ಸ್ ಕೆಳ್ಕೊಂಡು ಓಡಾಡುತ್ತಿದ್ದರು, ಆವಾಗನಿಂದ ಅವರು ನನಗೆ ಗೊತ್ತು. ನಮ್ಮ ಜೊತೆ ಹ್ಯಾಂಗ್‌ಔಟ್ ಮಾಡುತ್ತಿದ್ದರು, ಬೇಕಾದ್ರೆ ಹೋಗಿ ಕೇಳಿ.. ನಾನು ಯಶ್ ಶತ್ರು ಅಲ್ಲ, ಕೆಜಿಎಫ್ 1 ನನಗೂ ಇಷ್ಟವಾಗಿತ್ತು. ಆದರೆ 'ಟಾಕ್ಸಿಕ್' ಸಿನಿಮಾ ಇಷ್ಟವಾಗಿಲ್ಲ' ಎಂದು ರಿಷಿಕಾ ಹೇಳಿದ್ದಾರೆ.
ರಿಷಿಕಾ ವಿಡಿಯೋಗೆ ನೆಟ್ಟಿಗರು/ಫ್ಯಾನ್ಸ್ ಹೇಳಿದ್ದೇನು?
ವಿಡಿಯೋ ನೋಡಿದ ರಿಷಿಕಾ ವಿರುದ್ಧ ನೆಟ್ಟಿಗರು/ಕೆಲವು ಯಶ್ ಫ್ಯಾನ್ಸ ತರಾಟೆಗೆ ತೆಗೆದುಕೊಂಡಿದ್ದಾರೆ, ಟ್ರೋಲ್ ಮಾಡಿದ್ದಾರೆ. 'ಇವರಿಗೆ ಫೇಮಸ್ ಆಗೋಕೆ ಯಶ್ ಬೇಕು. ನೀನು ಯಶ್ ಬಗ್ಗೆ ಮಾತನಾಡಬಹುದು ಅಷ್ಟೇ, ಆದರೆ ಏನು ಮಾಡಿಕೊಳ್ಳೋಕೆ ಆಗಲ್ಲ!' ಎಂದು ಒಬ್ಬರು ಹೇಳಿದ್ದಾರೆ.
ಮತ್ತೊಬ್ಬರು 'ಕಾಲ್ ಎಳೆಯೋಕೆ ಅಂತಾನೆ controversy ಮಾಡೋರಿಗೆ ಬೇಡ ಅನ್ನೋಕ್ ಆಗುತ್ತೇನ್ಲಾ, ಮಾಡ್ಲಿ ಬಿಡ್ಲಾ, ಕಾಲ್ ಎಳೆಯೋರು ಯಾವತ್ತಿದ್ರು ಕಾಲ್ ಕೆಳಗ್ ಇರ್ತಾರೆ ಪ್ರೀತಿ ಅಭಿಮಾನ ಇಟ್ಟಿರೋರು ಹೃದಯದಲ್ಲಿ ಇರ್ತಾರೆ' ಎಂದು ಯಶ್ ಸಿನಿಮಾ ಡೈಲಾಗ್ ಹೊಡೆದು ರಿಷಿಕಾ ಅವರಿಗೆ ತಿರುಗೇಟು ನೀಡಿದ್ದಾರೆ.
View this post on Instagram
A post shared by RISHEEKAA SSINGH (@risheekaassingh)
'ಯಶ್ ಚಾನ್ಸ್ ಕೇಳ್ಕೊಂಡು ಓಡಾಡ್ತಿದ್ರು ಅದು ಆ ಕಾಲ, ಕಷ್ಟ ಪಟ್ಟು ಬೆಳೆದ್ರು. ಈಗ ನೀವೇ ಚಾನ್ಸ್ ಕೇಳ್ಕೊಂಡು ಓಡಾಡಬೇಕಿದೆ ಇದೆ ಟೈಮ್.... ಬಂಧನ ಫಿಲಂ ಗೆದ್ದಿದ್ದು ವಿಷ್ಣು ಸರ್ ಆಕ್ಟಿಂಗ್ ನಿಂದ, ಡೈರೆಕ್ಟರ್, ಪ್ರೊಡ್ಯೂಸರ್ ಇಂದಲ್ಲ' ಎಂದು ಮತ್ತೊಬ್ಬರ ಕಾಮೆಂಟ್ ಮೂಲಕ ಯಶ್ ಪರ ಮಾತನಾಡಿದ್ದಾರೆ. ಹೀಗೆ ಅನೇಕ ಕಾಮೆಂಟ್‌ಗಳಲ್ಲಿ ಟಾಕ್ಸಿಕ್, ಯಶ್ ಪರ ಮಾತನಾಡಿದ್ದಾರೆ.