ಹತ್ತಿಯಂತೆ ಮೃದುವಾಗಿರುವ ಇಡ್ಲಿ ಮಾಡಬೇಕಾ? ಅಕ್ಕಿ ಉದ್ದಿನ ಬೇಳೆ ಜೊತೆಗೆ ಈ ಸಿಕ್ರೇಟ್‌ ಸಾಮಗ್ರಿ ಬಳಸಿ

ಹತ್ತಿಯಂತೆ ಮೃದುವಾಗಿರುವ ಇಡ್ಲಿ ಮಾಡಬೇಕಾ? ಅಕ್ಕಿ ಉದ್ದಿನ ಬೇಳೆ ಜೊತೆಗೆ ಈ ಸಿಕ್ರೇಟ್‌ ಸಾಮಗ್ರಿ ಬಳಸಿ

ಹತ್ತಿಯಂತೆ ಮೃದುವಾಗಿರುವ ಇಡ್ಲಿ ಮಾಡಬೇಕಾ? ಅಕ್ಕಿ ಉದ್ದಿನ ಬೇಳೆ ಜೊತೆಗೆ ಈ ಸಿಕ್ರೇಟ್‌ ಸಾಮಗ್ರಿ ಬಳಸಿ

ರೆಸ್ಟೋರೆಂಟ್‌ಗಳಲ್ಲಿ ನಾವು ತಿನ್ನುವ ಇಡ್ಲಿ ಹತ್ತಿಯಂತೆ ಮೃದುವಾಗಿರುತ್ತದೆ. ಹೊಟೇಲ್‌ ಇಡ್ಲಿಯನ್ನು ತಿಂದು ಬಂದು ಮನೆಯಲ್ಲಿ ಕೂಡಾ ಇಡ್ಲಿ ಮಾಡೋಣ ಎಂದರೆ ಆ ಸಾಫ್ಟ್‌ನೆಸ್‌ ಬರೋದೇ ಇಲ್ಲ. ಅಲ್ಲಿ ಏನಾದರೊಂದು ಎಡವಟ್ಟು ಆಗುವುದು ಗ್ಯಾರಂಟಿ. ಇಡ್ಲಿ ಮೃದು ಆಗಿಲ್ಲ ಎಂದಾದರೆ ತಿನ್ನುವುದು ಕೂಡಾ ಕಷ್ಟ. ಮಕ್ಕಳಂತೂ ಇಷ್ಟಪಡುವುದೇ ಇಲ್ಲ. ಹಾಗಿದ್ದರೆ ಸ್ಪಾಂಜ್‌ನಂತೆ ಮೃದುವಾಗಿರುವ ಇಡ್ಲಿ ಮನೆಯಲ್ಲಿಯೇ ಮಾಡಬೇಕು ಎಂದಾದರೆ ಏನು ಮಾಡಬೇಕು? ನಾವು ಹೇಳುವ ರೀತಿಯಲ್ಲಿ ಇಡ್ಲಿ ತಯಾರು ಮಾಡಿದರೆ ನೀವು ಕೂಡಾ ಪ್ರತಿ ಬಾರಿ ಮೆತ್ತನೆಯ ಇಡ್ಲಿಯನ್ನು ಮನೆಯಲ್ಲಿಯೇ ಮಾಡಿ ಮನೆ ಮಂದಿಗೆ ಬಡಿಸಬಹುದು.

ಇಡ್ಲಿ ದಕ್ಷಿಣ ಭಾರತೀಯ ಪಾಕಪದ್ಧತಿಯ ಅವಿಭಾಜ್ಯ ಅಂಗ. ಇತ್ತೀಚಿನ ದಿನಗಳಲ್ಲಿ ಇದು ದೇಶಾದ್ಯಂತ ಆರೋಗ್ಯಕರ ಉಪಹಾರ ಮತ್ತು ಲಘು ಊಟವಾಗಿ ಜನಪ್ರಿಯವಾಗ್ತಾ ಇದೆ. ಇಡ್ಲಿ ಬಹಳ ಆರೋಗ್ಯಕರ ತಿನಿಸು. ಯಾಕೆಂದರೆ ಇದರಲ್ಲಿ ಎಣ್ಣೆ ಬಳಕೆ ಇರುವುದಿಲ್ಲ. ಅಲ್ಲದೆ ಇಡ್ಲಿಯನ್ನು ಹಬೆಯಲ್ಲಿ ಬೇಯಿಸುವ ಮೂಲಕ ತಯಾರಿಸಲಾಗುತ್ತದೆ. ಎಣ್ಣೆ ಬಳಸದೆ ತಯಾರು ಮಾಡುವ ತಿಂಡಿ ಇದಾಗಿರುವುದರಿಂದ ಜೀರ್ಣಕ್ರಿಯೆಗೂ ಅತ್ಯಂತ ಸುಲಭ. ಜ್ವರ ಬಂದಾಗ, ಹೊಟ್ಟೆ ಸರಿಯಿಲ್ಲದ ಸಮಯದಲ್ಲಿ, ದೂರ ಪ್ರಯಾಣ ಮಾಡುವ ವೇಳೆ ಹೆಚ್ಚಾಗಿ ಇಡ್ಲಿಯನ್ನೇ ತಿನ್ನುವಂತೆ ಸೂಚಿಸಲಾಗ್ತದೆ. ಇದು ಒಂದು ರೀತಿಯಲ್ಲಿ ಪರಿಪೂರ್ಣ ಖಾದ್ಯ.

ಇಡ್ಲಿ ಮಾಡುವುದು ಬಲು ಸುಲಭ

ಇದರ ಅತ್ಯಂತ ವಿಶೇಷವಾದ ವಿಷಯವೆಂದರೆ ಇದರ ಸಂಪೂರ್ಣ ತಯಾರಿಕಾ ಪ್ರಕ್ರಿಯೆಗೆ ಸಲು 10-11 ಗಂಟೆಗಳು ಬೇಕಾಗುತ್ತದೆ.ಆದರೆ ವ್ಯಯಿಸುವ ಶ್ರಮ ಬಹಳ ಕಡಿಮೆ. ಬೇಯಿಸಲು ಗ್ಯಾಸ್‌ ಮೇಲೆ ಇಟ್ಟರೆ 10 ನಿಮಿಷಗಳಲ್ಲಿ ರೆಡಿಯಾಗುತ್ತದೆ. ಅಷ್ಟೇ ಅಲ್ಲ, ಅಡುಗೆ ಮಾಡಲು ಗೊತ್ತೇ ಇಲ್ಲ ಎನ್ನುವವರು ಕೂಡಾ ಇದನ್ನು ಸುಲಭವಾಗಿ ತಯಾರಿಸಬಹುದು.

ಮೆತ್ತನೆಯ ಇಡ್ಲಿಯ ಸಿಕ್ರೇಟ್‌

ಆದರೆ, ಮನೆಯಲ್ಲಿ ಇಡ್ಲಿಗಳನ್ನು ತಯಾರಿಸುವಾಗ ಸಾಮಾನ್ಯವಾಗಿ ಎದುರಾಗುವ ಸಮಸ್ಯೆ ಎಂದರೆ ಅವು ರೆಸ್ಟೋರೆಂಟ್‌ಗಳಲ್ಲಿ ಮಾಡುವಷ್ಟು ಮೃದುವಾಗಿ ಬರೋದಿಲ್ಲ. ಆದರೆ, ಇಲ್ಲೊಂದು ಸಿಕ್ರೇಟ್‌ ಇದೆ. ಸಾಮಾನ್ಯವಾಗಿ ಇಡ್ಲಿ ಎಂದರೆ ಅಕ್ಕಿ ಮತ್ತು ಉದ್ದಿನಬೇಳೆ ನೆನಹಾಕಿ ರುಬ್ಬಿದರೆ ಸಾಕು ಎನ್ನುವ ಕಲ್ಪನೆ ಇದೆ. ಆದರೆ ಈ ಎರಡು ಸಾಮಗ್ರಿಗಳ ಜತೆಗೆ ಒಂದು ಸಿಕ್ರೇಟ್‌ ಅನ್ನು ಬೆರೆಸಿದಾಗ ಮಾತ್ರ ಅದು ಹೂವಿನಂತೆ, ಹತ್ತಿಯಂತೆ, ಸ್ಪಾಂಜಿನಂತೆ ಮೆತ್ತಗಾಗುವುದು. ಹೌದು, ಅಕ್ಕಿ ಮತ್ತು ಉದ್ದಿನ ಬೇಳೆ ಜೊತೆಗೆ ಒಂದು ಹಿಡಿ ಅವಲಕ್ಕಿ ಸೇರಿಸಿದಾಗ ಮಾತ್ರ ಇಡ್ಲಿ ಮೆತ್ತಗಾಗುವುದು.

ಮೃದುವಾದ ಇಡ್ಲಿಗಳನ್ನು ತಯಾರಿಸುವುದು ಹೇಗೆ ?

ಅಕ್ಕಿ - 3 ಕಪ್,
ಉದ್ದಿನ ಬೇಳೆ - 1 ಕಪ್,
ತೆಳು ಅವಲಕ್ಕಿ - 1/2 ಕಪ್
ಉಪ್ಪು,
ನೀರು,
ಎಣ್ಣೆ

ಇಡ್ಲಿ ತಯಾರಿಸಲು, ಮೊದಲು ಅಕ್ಕಿ, ಉದ್ದಿನ ಬೇಳೆ ಮತ್ತು ಅವಲಕ್ಕಿಯನ್ನು ಪ್ರತ್ಯೇಕವಾಗಿ 4-6 ಗಂಟೆಗಳ ಕಾಲ ನೆನೆಸಿಡಿ. ಈಗ ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಿಕೊಳ್ಳಿ. ನಂತರ ಅಕ್ಕಿ ಮತ್ತು ಅವಲಕ್ಕಿಯನ್ನು ಮೃದುವಾಗಿ ರುಬ್ಬಿಕೊಳ್ಳಿ.

ಈ ಮೂರನ್ನೂ ಒಂದು ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಿ. ನಂತರ, ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 8-10 ಗಂಟೆಗಳ ಕಾಲ ಹುದುಗಲು ಬಿಡಿ. ನಂತರ ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಹಚ್ಚಿ, ತಯಾರಾದ ಇಡ್ಲಿ ಹಿಟ್ಟನ್ನು ಸುರಿಯಿರಿ.ಇಡ್ಲಿ ಕುಕ್ಕರ್‌ ಅಥವಾ ಪಾತ್ರೆಯಲ್ಲಿ ಬೇಯಲು ಇಡಿ. 5 ನಿಮಿಷಗಳಲ್ಲಿ ಮೃದುವಾದ ಇಡ್ಲಿಗಳು ಸಿದ್ಧವಾಗುತ್ತವೆ. ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಸಾಂಬಾರ್‌ನೊಂದಿಗೆ ಬಡಿಸಬಹುದು.

idli life life style fast food

idli life life style fast food

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ