
Daily Horoscope: ಇಂದು ರವಿ-ಭದ್ರ ಯೋಗ: 12 ರಾಶಿಯಲ್ಲಿ ಯಾರಿಗೆ ಶುಭ, ಯಾರಿಗೆ ಅಶುಭ? ದಿನ ಭವಿಷ್ಯ
Daily Horoscope August 15: ಆಗಸ್ಟ್ 15ರಂದು ಶನಿವಾರ ಎಲ್ಲ 12 ರಾಶಿಗಳ ಗೋಚಾರ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿ ಕೊಡಲಾಗಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಶನಿವಾರ ಆಗಸ್ಟ್ 15ರ ದಿನ ಭವಿಷ್ಯ: ದ್ವಾದಶ ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲಗಳು ಹೇಗಿದೆ, ಯಾರಿಗೆ ಶುಭ, ಯಾರಿಗೆ ಅಶುಭ ಎಂದು ತಿಳಿಯಿರಿ.
ಸಂತೋಷವನ್ನು ತರುವ ದಿನವಾಗಿರುವುದು. ಆರ್ಥಿಕ ಲಾಭ ಪಡೆಯಲು ಶ್ರಮಿಸಬೇಕಾಗುವುದು. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗುವುದು. ಮಹಿಳೆಯರಿಗೆ ಹೆಚ್ಚು ಫಲಪ್ರದವಾಗಿರುವ ದಿನ.
ಇಂದು ನಿಮ್ಮ ಪಾಲಿನ ಸುವರ್ಣ ದಿನವಾಗಿರುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ದಿನ ಪೂರ್ತಿ ಸಂತೋಷದಿಂದ ಇರುವಿರಿ. ಮೇಲಧಿಕಾರಿಗಳಿಂದ ಸಂಪೂರ್ಣ ಬೆಂಬಲ ಸಿಗುವುದು. ವ್ಯವಹಾರದಲ್ಲಿ ಅನಿರೀಕ್ಷಿತವಾಗಿ ಆರ್ಥಿಕ ಲಾಭವಾಗುವುದು. ಆರೋಗ್ಯದಲ್ ಸುಧಾರಣೆಯಾಗುವುದು.
ಮಿಥುನ ರಾಶಿ (Gemini) :
ನಿಮ್ಮ ಜೀವನದಲ್ಲಿ ಆಳವಾದ ಪರಿಣಾಮ ಬೀರುವ ವ್ಯಕ್ತಿಯನ್ನು ಭೇಟಿಯಾಗುವಿರಿ. ಕಚೇರಿಯಲ್ಲಿ ಉತ್ತಮ ಸಮಯವನ್ನು ಕಳೆಯುವಿರಿ. ಸಹೋದ್ಯೋಗಿಗಳ ಬೆಂಬಲ ಸಿಗುವುದು. ಅಗತ್ಯವಿರುವ ಯಾರಿಗಾದರೂ ಸಹಾಯ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುವುದು.
ಕರ್ಕಾಟಕ ರಾಶಿ (Cancer):
ಇಂದು ನಿಮ್ಮ ಪಾಲಿನ ಉತ್ತಮ ದಿನವಾಗಿರುವುದು. ವ್ಯವಹಾರದಲ್ಲಿ ದೊಡ್ಡ ಮಟ್ಟದ ಆರ್ಥಿಕ ಲಾಭವಾಗುವುದು. ಹೊಸ ಕೆಲಸವನ್ನು ಕೈಗೆತ್ತಿಕೊಳ್ಳಬಹುದು. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಅನಗತ್ಯವಾಗಿ ಯಾರೊಂದಿಗೂ ಮಾತನಾಡಲು ಹೋಗಬೇಡಿ.
ಇಂದು ಒಳ್ಳೆಯ ದಿನವಾಗಿರಲಿದೆ. ಸಾಮಾಜಿಕ ಸ್ಥಾನಮಾನ ಹೆಚ್ಚಾಗುವುದು. ವ್ಯವಹಾರದಲ್ಲಿ ದೊಡ್ಡ ಮಟ್ಟದ ಆರ್ಥಿಕ ಲಾಭ ಗಳಿಸುವಿರಿ.ವೃತ್ತಿಪರ ಸಂಬಂಧಗಳು ಬಲಗೊಳ್ಳುವುದು. ಆದಾಯವನ್ನು ಮೀರಿ ಖರ್ಚು ಮಾಡಬೇಡಿ.
ಇಂದು ನಿಮಗೆ ಉತ್ತಮ ದಿನವಾಗಿರುವುದು. ಬಹಳ ದಿನಗಳಿಂದ ಯೋಚಿಸುತ್ತಿದ್ದ ಕೆಲಸವನ್ನು ಪ್ರಾರಂಭಿಸಬಹುದು. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನವಾಗಿರುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು.
ವ್ಯವಹಾರದಿಂದ ಲಾಭ ಗಳಿಸುವ ದಿನ. ಪ್ರಮುಖ ಕೆಲಸವನ್ನು ಪೂರ್ಣಗೊಳಿಸಲು ಸಹೋದ್ಯೋಗಿಗಳು ಸಹಾಯ ಮಾಡುವರು. ಆರೋಗ್ಯ ಚೆನ್ನಾಗಿರುವುದು. ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯ ಕಳೆಯುವಿರಿ. ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುವುದು.
ವೃಶ್ಚಿಕ ರಾಶಿ (Scorpio) :
ಸಂಜೆಯ ಹೊತ್ತಿಗೆ, ಒಳ್ಳೆಯ ಸುದ್ದಿ ಸಿಗುವುದು. ಮನೆಯಲ್ಲಿ ಸಂತೋಷ ಮನೆ ಮಾಡುವುದು. ಯೋಜಿತ ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣವಾಗುವುದು. ಆರ್ಥಿಕ ಲಾಭ ಪಡೆಯುವಿರಿ. ಸಂಗಾತಿಯಿಂದ ಉಡುಗೊರೆ ಸಿಗುವುದು.
ಧನು ರಾಶಿ (Sagitarius):
ಇಂದಿನ ದಿನ ಹೆಚ್ಚು ಪ್ರಯೋಜನಕಾರಿಯಾಗಿರುವುದು. ಕುಟುಂಬದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡುವಿರಿ. ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ಇಂದು ಅನುಕೂಲಕರ ದಿನವಾಗಿರುವುದು. ಬಹುರಾಷ್ಟ್ರೀಯ ಕಂಪನಿಯಿಂದ ಕೆಲಸದ ಆಫರ್ ಬರುವುದು.
ಮಕರ ರಾಶಿ (Capricorn):
ಇಂದು ನಿಮಗೆ ಒಳ್ಳೆಯ ದಿನವಾಗಿರಲಿದೆ. ಕೈ ಹಾಕಿ ಕೆಲಸದಲ್ಲಿ ಪ್ರಗತಿಯಾಗುವಿರಿ. ಹೊಸ ಕೆಲಸದಿಂದ ಯಶಸ್ಸು ಸಿಗುವುದು. ಹಳೆಯ ಸ್ನೇಹಿತರ ಭೇಟಿಯಿಂದ ಸಂತೋಷ ಹೆಚ್ಚುವುದು. ವಿದ್ಯಾರ್ಥಿಗಳಿಗೆ ಅದೃಷ್ಟದ ದಿನವಾಗಿರುವುದು.
ಕುಂಭ ರಾಶಿ (Aquarius):
ಹೆತ್ತವರ ಸಹಾಯದಿಂದ ಕೆಲಸ ಬೇಗನೆ ಪೂರ್ಣಗೊಳ್ಳುವುದು. ಸಂಬಂಧಗಳಲ್ಲಿನ ಮಾಧುರ್ಯತೆ ಹೆಚ್ಚಾಗುವುದು. ಆರೋಗ್ಯ ಉತ್ತಮವಾಗಿರುವುದು. ಕೆಲಸದ ಮೇಲೆ ಗಮನಹರಿಸುವುದು ಸಾಧ್ಯವಾಗುವುದು. ವಿದ್ಯಾರ್ಥಿಗಳಿಗೆ ಇಂದು ಒಳ್ಳೆಯ ದಿನವಾಗಿರುತ್ತದೆ.
ಇಂದಿನ ದಿನ ಸಾಮಾನ್ಯಕ್ಕಿಂತ ಹೆಚ್ಚು ಫಲಪ್ರದಾಯಕವಾಗಿರುವುದು. ಬಾಲ್ಯದ ಸ್ನೇಹಿತನನ್ನು ಭೇಟಿಯಾಗುವಿರಿ. ಬಾಕಿ ಕೆಲಸಗಳು ಪೂರ್ಣಗೊಳ್ಳುವುದು. ಮನಸ್ಸಿನ ಶಾಂತಿ ಹೆಚ್ಚಾಗುವುದು. ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುವುದು.
(ಬರಹ: ರಂಜಿತಾ ಆರ್.ಕೆ.)