
Karnataka Rains:ಕರ್ನಾಟಕದಲ್ಲಿ ತಗ್ಗಿದ ಮಳೆ ಪ್ರಮಾಣ, ಯಾವ ಜಿಲ್ಲೆಯಲ್ಲಿ ಎಷ್ಟು
ಬೆಂಗಳೂರು: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.
ಕಳೆದ 24 ಗಂಟೆಯ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ನೀಲಕುಂದದಲ್ಲಿ 164 ಮಿ.ಮೀ ಅತ್ಯಧಿಕ ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಕರಿಮನೆಯಲ್ಲಿ 151.2 ಮಿ.ಮೀ, ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಪರವಾಡದಲ್ಲಿ 134.5 ಮಿ.ಮೀ ಮಳೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಬಿಳಿನೆಲೆಯಲ್ಲಿ 126 ಮಿ.ಮೀ, ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಮಾಲದಲ್ಲಿ 112 ಮಿ.ಮೀ, ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಬೇಗಾರಿನಲ್ಲಿ 104.5 ಮಿ,ಮೀ ಮಳೆಯಾಗಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ನಿಡಸಾಲೆಯಲ್ಲಿ 71.5 ಮಿ.ಮೀ, ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ನಾಗವಾರದಲ್ಲಿ 67 ಮಿ.ಮೀ, ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ತಾಲ್ಲೂಕಿನ ಗಜರಕೋಟದಲ್ಲಿ 65.5 ಮಿ.ಮೀ, ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಹಿರೇಕನಗಿಯಲ್ಲಿ 52 ಮಿ.ಮೀ ಮಳೆಯಾಗಿದೆ. ಹಾಸನ ಜಿಲ್ಲೆ ಸಕಲೇಪುರ ತಾಲ್ಲೂಕಿನ ಹೊಗಡಹಳ್ಳದಲ್ಲಿ 46.5 ಮಿ.ಮೀ, ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಚಿಕ್ಕಅಲಗುಂದಿಯಲ್ಲಿ 29.5 ಮಿ.ಮೀ, ಧಾರವಾಡ ಜಿಲ್ಲೆ ಅಳ್ನಾವರದಲ್ಲಿ 30 ಮಿ.ಮೀ ಮಳೆಯಾಗಿದೆ.
ದಾವಣಗೆರೆ ತಾಲ್ಲೂಕಿನ ಬೆಳ್ತೂರಿನಲ್ಲಿ 19.5 ಮಿ.ಮೀ, ಗದಗ ಜಿಲ್ಲೆ ಮುಂಡರಗಿಯಲ್ಲಿ 17.6 ,ಮಿ.ಮೀ, ಬೀದರ್ ಜಿಲ್ಲೆ ಹುಲಸೂರಿನಲ್ಲಿ 16 ಮಿ.ಮೀ, ಬೆಂಗಳೂರು ನಗರ ಜಿಲ್ಲೆ ಆನೆಕಲ್ ತಾಲ್ಲೂಕಿನ ಮಂಟಪದಲ್ಲಿ 15 ಮಿ.ಮೀ, ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲ್ಲೂಕು ಹಂಚೀಪುರದಲ್ಲಿ 14 ಮಿ.ಮೀ, ವಿಜಯಪುರ ಜಿಲ್ಲೆ ಕೊಲ್ಹಾರ ತಾಲ್ಲೂಕಿನ ಹನಮಪುರದಲ್ಲಿ 13.5 ಮಿ.ಮೀ ಮಳೆಯಾಗಿದೆ.
ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಹುಚ್ಚಂಗಿ ದುರ್ಗದಲ್ಲಿ 10.5 ಮಿ,ಮೀ, ಚಿತ್ರದುರ್ಗ ತಾಲ್ಲೂಕಿನ ಲಕ್ಷ್ಮಿಸಾಗರದಲ್ಲಿ 10 ಮಿ.ಮೀ, ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ಕುರೆಕೊಪ್ಪದಲ್ಲಿ 8.5 ಮಿ.ಮೀ, ಕೊಪ್ಪಳ ತಾಲ್ಲೂಕಿನ ಬೋಚನಹಳ್ಳಿಯಲ್ಲಿ 5 ಮಿ.ಮೀ ಮಳೆಯಾಗಿದೆ.
ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕಿನ ರೌಡಲಬಂಡಾದಲ್ಲಿ 7.5 ಮಿ.ಮೀ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಯಾಲ್ಲೂಕಿನ ಮಜರ ಹೊಸಹಳ್ಳಿಯಲ್ಲಿ 7 ಮಿ.ಮೀ, ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಮಲ್ಲನಕುಪ್ಪೆಯಲ್ಲಿ 6 ಮಿ.ಮೀ. ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಮದ್ದೂರಿನಲ್ಲಿ 5 ಮಿ.ಮೀ, ಚಿಕ್ಕಬಳ್ಳಾಪುರ ತಾಲ್ಲೂಕು ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡತೇಕೇನಹಳ್ಳಿಯಲ್ಲಿ 2.5 ಮಿ.ಮೀ, ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಹೆಬ್ಬಾನಿಯಲ್ಲಿ 2 ಮಿ.ಮೀ ಮಳೆಯಾಗಿದೆ.