
Kannada New Serial: ಜೀ ಕನ್ನಡ ವಾಹಿನಿಯ ಪ್ರಮುಖ ಸೀರಿಯಲ್ ಮುಕ್ತಾಯ: ಹೊಸ ಸೀರಿಯಲ್ ಯಾವುದು, ಇಲ್ಲಿದೆ ಅಪ್ಡೇಟ್ಸ್
Kannada New Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಪ್ರಮುಖ ಸೀರಿಯಲ್ ಇದೀಗ ಮುಕ್ತಾಯವಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಮುಖ ಸೀರಿಯಲ್‌ಗಳು ಮುಕ್ತಾಯವಾಗುತ್ತಿದ್ದು, ಹೊಸ ಸೀರಿಯಲ್‌ಗಳು ಬಿಡುಗಡೆ ಆಗುತ್ತಿವೆ. ಇದೀಗ ಪ್ರಮುಖ ಸೀರಿಯಲ್ ಮುಕ್ತಾಯವಾಗಿದೆ. ಸೀರಿಯಲ್ ಮುಕ್ತಾಯವಾಗುವುದರೊಂದಿಗೆ ಕನ್ನಡದ ಪ್ರಮುಖ ನಟ ದಿವಂಗತ ದಿಲೀಪ್ ರಾಜ್ ಅವರ ಸ್ಮರಣಾರ್ಥ ವಿಶೇಷ ಸಂದೇಶವನ್ನು ಸಹ ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ. ಇದರೊಂದಿಗೆ ಹೊಸ ಸೀರಿಯಲ್‌ಗಳ ಸುಳಿವನ್ನೂ ಸಹ ಜೀ ಕನ್ನಡ ವಾಹಿನಿ ಕೊಟ್ಟಿದೆ. ಅದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರಮುಖ ಸೀರಿಯಲ್ ಬ್ರಹ್ಮಗಂಟು ಮುಕ್ತಾಯವಾಗಿದೆ. ಇದರೊಂದಿಗೆ ಹೊಸ ಶೋವೊಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಜೀ ಕನ್ನಡದಲ್ಲಿ ಏಕಕಾಲಕ್ಕೆ 5 ಹೊಸ ಸೀರಿಯಲ್‌ಗಳು ಬಿಡುಗಡೆ ಆಗಲಿವೆ. ಒಂದೊಂದೇ ಪ್ರಮುಖ ಸೀರಿಯಲ್‌ಗಳು ಮುಕ್ತಾಯವಾಗುತ್ತಿವೆ. ಇದೀಗ ಬ್ರಹ್ಮಗಂಟು ಮುಕ್ತಾಯವಾಗಿದೆ. ಬ್ರಹ್ಮಗಂಟು ಸೀರಿಯಲ್‌ನ ಕೊನೆಯ ಸಂಚಿಕೆಗಳಿಗೆ ವೀಕ್ಷಕರು ಸಹ ಫಿದಾ ಆಗಿದ್ದಾರೆ. ಅರ್ಥಪೂರ್ಣವಾಗಿ ಸೀರಿಯಲ್ ಮುಕ್ತಾಯ ಮಾಡಲಾಗಿದೆ. ಬಹುತೇಕ ಸತ್ಯಗಳು ಅನಾವರಣವಾಗಿವೆ. ಆದರೆ ಇನ್ನೂ ಬಹಳಷ್ಟು ವಿಷಯಗಳು ಬಹಿರಂಗವಾಗಲಿಲ್ಲ ಅಂತಲೂ ವೀಕ್ಷಕರು ಹೇಳಿದ್ದಾರೆ.
ಬ್ರಹ್ಮಗಂಟು ಸೀರಿಯಲ್‌ನ ಕ್ಲೈಮ್ಯಾಕ್ಸ್ ಸಂಚಿಕೆಗಳು ಪ್ರಸಾರವಾಗುತ್ತಿವೆ. ಈ ಸೀರಿಯಲ್‌ನಲ್ಲಿ ದಿಯಾ ಪಾಲಕ್ಕಲ್, ಭುವನ್ ಸತ್ಯ, ಪ್ರೀತಿ ಶ್ರೀನಿವಾಸ್, ಕಾವ್ಯ ರಮೇಶ್ ಹಾಗೂ ಶಿವಾಜಿ ರಾವ್ ಜಾಧವ್ ಸೇರಿದಂತೆ ಬಹುತಾರಾಗಣವೇ ಇತ್ತು. ಬ್ರಹ್ಮಗಂಟು ಸೀರಿಯಲ್ ಅನ್ನು ನಟ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಅವರ ನಿರ್ಮಾಣ ಸಂಸ್ಥೆ ಧ್ರುತಿ ಕ್ರಿಯೇಷನ್ಸ್ ನಿರ್ಮಾಣ ಮಾಡಿದೆ. ನಿರ್ದೇಶಕ ತಿಲಕ್ ಅವರು ನಿರ್ದೇಶಿಸಿದ್ದಾರೆ.
ದೀಪಾ ಸತ್ಯ ಚಿರುಗೆ ಗೊತ್ತಾಗಿದ್ದು, ಇದರೊಂದಿಗೆ ಸೌಂದರ್ಯ ಬಣ್ಣವೂ ಸಹ ಬಯಲಾಗಿತ್ತು. ಚಿರು, ಸೌಂದರ್ಯಳನ್ನು ಜೈಲಿಗೆ ಕಳುಹಿಸಲಿದ್ದಾನೆಯೇ ಎನ್ನುವ ಕುತೂಹಲ ವೀಕ್ಷಕರಲ್ಲಿ ಇತ್ತು. ಅಲ್ಲದೆ ಸೀರಿಯಲ್‌ನಲ್ಲಿ ಎಲ್ಲರ ಮುಂದೆಯೂ ಸೌಂದರ್ಯಳ ಬಣ್ಣ ಬಯಲಾಗುವುದರೊಂದಿಗೆ ಮುಕ್ತಾಯದ ಸಂಚಿಕೆಗಳು ಮೂಡಿ ಬಂದಿವೆ.
ದಿಲೀಪ್ ರಾಜ್‌ಗೆ ವಿಶೇಷ ಧನ್ಯವಾದ ಸಲ್ಲಿಸಿದ ತಂಡ
ಇನ್ನು ನಟ ದಿವಂಗತ ದಿಲೀಪ್ ರಾಜ್ ಅವರಿಗೆ ಜೀ ಕನ್ನಡ ವಾಹಿನಿಯು ವಿಶೇಷ ಧನ್ಯವಾದ ತಿಳಿಸಿದೆ. ಜೀ ಕನ್ನಡದ ಹೆಮ್ಮೆಯ ನಿರ್ಮಾಪಕ, ನಿರ್ದೇಶಕ, ದಿಲೀಪ್ ರಾಜ್ ಹಾಗೂ ವಿದ್ಯಾರಾಜ್ ಅವರ ಹೆಮ್ಮೆಯ ಸಂಸ್ಥೆಯಾದ ಧೃತಿ ಕ್ರಿಯೇಷನ್ಸ್‌ಗೆ ಪ್ರೀತಿ ಪೂರ್ವಕ ನಮಸ್ಕಾರಗಳು. ಜೀ ಕನ್ನಡ ವಾಹಿನಿಯಲ್ಲಿ ತಮ್ಮ ನಿರ್ಮಾಣ ಸಂಸ್ಥೆಯಿಂದ ತೆರೆಕಂಡ ಧಾರಾವಾಹಿಗಳು ಕನ್ನಡಿಗರ ಮನೆ, ಮನ ಗೆದ್ದು ಜನಪ್ರಿಯತೆ ಗಳಿಸಿವೆ. ಈ ಎಲ್ಲ ಚಂದದ ಕಥೆಗಳಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಧಾರಾವಾಹಿ ಬ್ರಹ್ಮಗಂಟು ಅದ್ದೂರಿ ಆರಂಭ ಪಡೆದು, ಜನರ ಮನಸ್ಸಿಗೆ ಹತ್ತಿರವಾಗಿ, 500ಕ್ಕೂ ಹೆಚ್ಚು ಸಂಚಿಕೆಗಳ ಗಡಿ ದಾಟಿ ಮೈಲಿಗಲ್ಲು ಮುಟ್ಟಿದ ಬ್ರಹ್ಮಗಂಟು ಇನ್ಮುಂದೆ ನಿಮ್ಮೆಲ್ಲರಿಗೂ ಸಿಹಿನೆನಪು.
ಎರಡು ವರ್ಷಗಳಿಗೂ ಮೀರಿದ ಈ ಸುಂದರ ಪಯಣಕ್ಕೆ ಜೊತೆಯಾದ ಧೃತಿ ಕ್ರಿಯೇಷನ್ಸ್ ಸಂಸ್ಥೆಗೆ ಜೀ ಕುಟುಂಬ ಎಂದೆಂದಿಗೂ ಆಭಾರಿ. ನಮ್ಮೆಲ್ಲರ ಇಂತಹ ಅದ್ವಿತೀಯ ಕನಸುಗಳಿಗೆ ಅವಿರತ ಶ್ರಮಿಸಿ ಬಣ್ಣ ತುಂಬುತ್ತಿದ್ದ ದಿಲೀಪ್ ರಾಜ್ ಸರ್ ಹಾರೈಕೆ, ಆಶೀರ್ವಾದ ನಮ್ಮೊಂದಿಗಿರಲಿ. ಧನ್ಯವಾದಗಳೊಂದಿಗೆ ಜೀ ಕನ್ನಡ ಕುಟುಂಬ ಎಂದು ಹೇಳಲಾಗಿದೆ.
ಜೀ ಕನ್ನಡ ವಾಹಿನಿಯಲ್ಲಿ ಹೊಸ ಸೀರಿಯಲ್‌ಗಳು
ಜೀ ಕನ್ನಡ ವಾಹಿನಿಯಲ್ಲಿ ಏಕಕಾಲಕ್ಕೆ ಐದು ಹೊಸ ಸೀರಿಯಲ್‌ಗಳು ಬಿಡುಗಡೆ ಆಗಲಿವೆ. ಬಾಕ್ಸಿಂಗ್ ಆಧಾರಿತ ಶಿವಶಕ್ತಿ, ಗ್ರಾಮೀಣ ಭಾಗದ ಕಥೆ ಅರಸಿ, ಪ್ರೇಮಕಥೆ ರಾಮ್ ಲೀಲಾ, ಇಂಟ್ರಸ್ಟಿಂಗ್ ಹಾಗೂ ಕವಲು ದಾರಿಯ ಪ್ರೇಮಕಥೆ ಮಿಲನ ಹಾಗೂ ಅಮ್ಮನ ಮಗ ಗೌರಿಪುತ್ರ ಎನ್ನುವ ಐದು ಹೊಸ ಸೀರಿಯಲ್‌ಗಳು ಬಿಡುಗಡೆ ಆಗಲಿವೆ ಎಂದು ಈಚೆಗೆ ಬಿಡುಗಡೆಯಾದ ಪ್ರೋಮೋದಲ್ಲಿ ತೋರಿಸಲಾಗಿದೆ.