Illegal Immigrants: ಅಕ್ರಮ ವಲಸಿಗರ ವಾಸ ವಿಚಾರದಲ್ಲಿ ಈ ತಪ್ಪು ಮಾಡಬೇಡಿ: ಪ್ರಿಯಾಂಕ್ ಖರ್ಗೆ ಎಚ್ಚರಿಕೆ

Illegal Immigrants: ಅಕ್ರಮ ವಲಸಿಗರ ವಾಸ ವಿಚಾರದಲ್ಲಿ ಈ ತಪ್ಪು ಮಾಡಬೇಡಿ: ಪ್ರಿಯಾಂಕ್ ಖರ್ಗೆ ಎಚ್ಚರಿಕೆ

Illegal Immigrants: ಅಕ್ರಮ ವಲಸಿಗರ ವಾಸ ವಿಚಾರದಲ್ಲಿ ಈ ತಪ್ಪು ಮಾಡಬೇಡಿ: ಪ್ರಿಯಾಂಕ್ ಖರ್ಗೆ ಎಚ್ಚರಿಕೆ

Illegal Immigrants: ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಟ್ರೆಂಡ್‌ವೊಂದಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ರಿಯಾಕ್ಟ್‌ ಮಾಡಿದ್ದಾರೆ. ರಾಜ್ಯದಲ್ಲಿ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹೆಸರು ಮಾಡುವುದಕ್ಕಾಗಿ, ಲೈಕ್, ಶೇರ್‌ಗಾಗಿ, ವಿವಿಧ ಸ್ಥಳಗಳಿಗೆ ತೆರಳಿ ಅಲ್ಲಿನ ವ್ಯಕ್ತಿಗಳ ಗುರುತು, ಊರು, ರಾಜ್ಯ ಸೇರಿದಂತೆ ಹಲವು ಮಾಹಿತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ಪೊಲೀಸ್ ತನಿಖೆಯನ್ನು ದಿಕ್ಕು ತಪ್ಪಿಸುತ್ತಿರುವುದು ಕಂಡುಬಂದಿದೆ ಎಂದಿದ್ದಾರೆ.

ಮುಂದುವರಿದು ಈ ರೀತಿ ಸೋಶಿಯಲ್ ಮೀಡಿಯಾದಲ್ಲಿ ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಪಡೆಯುವುದಕ್ಕಾಗಿ ಇಂತಹ ಕೆಲಸಗಳಿಗೆ ಆಸ್ಪದ ನೀಡಲು ಸಾಧ್ಯವಿಲ್ಲ. ಇದರಿಂದ ರಾಜ್ಯದ ಭದ್ರತೆ ಹಾಗೂ ಸಾಮಾಜಿಕ ಸೌಹಾರ್ದತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅಕ್ರಮ ವಲಸಿಗರ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಳ್ಳುವುದರಿಂದ ಅಂತಹ ಜಾಲಕ್ಕೆ ಇನ್ನಷ್ಟು ಅನುಕೂಲವಾಗುತ್ತದೆ.

ಯಾರಿಗಾದರೂ ಅಕ್ರಮ ವಲಸೆ, ನಕಲಿ ದಾಖಲೆಗಳು, ಅಕ್ರಮ ಉದ್ಯೋಗ ಅಥವಾ ಇಂತಹ ಯಾವುದೇ ಚಟುವಟಿಕೆಗಳ ಕುರಿತು ನಿಖರ ಮಾಹಿತಿ ಇದ್ದರೆ, ಅದನ್ನು ಪೊಲೀಸರಿಗೆ ನೀಡಿ. ಕಾನೂನುಬದ್ಧವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನೈತಿಕ ಪೊಲೀಸ್‌ಗಿರಿ, ಕಾನೂನನ್ನು ಕೈಗೆತ್ತಿಕೊಳ್ಳುವ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಸಾಮಾಜಿಕ ಮಾಧ್ಯಮ ಆಕ್ಟಿವಿಸಂಗೆ ಕಡಿವಾಣ ಹಾಕಬೇಕಾಗುತ್ತದೆ.

ಯಾರು ಎಲ್ಲಿಂದ ಬಂದಿದ್ದಾರೆ, ಅವರಿಗೆ ಆಧಾರ್ ಸೇರಿದಂತೆ ಗುರುತಿನ ದಾಖಲೆಗಳು ಹೇಗೆ ದೊರೆತಿವೆ, ಉದ್ಯೋಗವನ್ನು ಯಾರು ಒದಗಿಸಿದ್ದಾರೆ, ಅವರ ದಾಖಲೆಗಳ ಪರಿಶೀಲನೆ ಹೇಗೆ ನಡೆದಿದೆ ಎಂಬ ಮೂಲ ಜಾಲವನ್ನು ಪತ್ತೆಹಚ್ಚುವುದು ಮತ್ತು ಅದರ ವಿರುದ್ಧ ಕ್ರಮ ಕೈಗೊಳ್ಳುವುದು ಪೊಲೀಸರ ಜವಾಬ್ದಾರಿಯಾಗಿದೆ. ಅದನ್ನು ಕರ್ನಾಟಕ ಪೊಲೀಸ್ ಇಲಾಖೆ ಸಮರ್ಥವಾಗಿ ನಡೆಸುತ್ತದೆ ಹಾಗೂ ನಾವು ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ.

ಪೊಲೀಸರ ತನಿಖೆ ಮತ್ತು ಕಾರ್ಯಾಚರಣೆಗಳಲ್ಲಿ ಗೋಪ್ಯತೆ ಕಾಪಾಡಬೇಕಾಗಿರುವುದರಿಂದ ಪ್ರತಿಯೊಂದು ಕಾರ್ಯಾಚರಣೆಯನ್ನೂ ಬಹಿರಂಗಪಡಿಸಲು ಸಾಧ್ಯವಿಲ್ಲ. ರಾಜ್ಯದ ಹಿತಾಸಕ್ತಿ ಬಯಸುವ ಪ್ರತಿಯೊಬ್ಬರೂ ಪೊಲೀಸರೊಂದಿಗೆ ಕೈಜೋಡಿಸಿ, ಮಾಹಿತಿಯನ್ನು ಸರಿಯಾದ ಮಾರ್ಗದಲ್ಲಿ ಹಂಚಿಕೊಳ್ಳಬೇಕು. ಅದರ ಬದಲು ಕಾನೂನನ್ನು ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂದೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಚ್ಚರಿಸಿದ್ದಾರೆ.

Illegal Immigrants: ನೆಟ್ಟಿಗರು ಹೇಳಿದ್ದೇನು

ಇನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಮಾತಿಗೆ ಹಲವರು ಸೋಶಿಯಲ್ ಮೀಡಿಯಾದಲ್ಲಿ ಸಹಮತ ವ್ಯಕ್ತಪಡಿಸಿದ್ದಾರೆ. ಅಕ್ರಮ ವಲಸಿಗರ ವಿಚಾರದಲ್ಲಿ ಪೊಲೀಸರು ತನಿಖೆ ನಡೆಸುವುದು ಸ್ವಾಗತಾರ್ಹ. ಆದರೆ ತನಿಖೆಗೆ ಸಹಕಾರ ನೀಡುವ ನಾಗರಿಕರ ಮಾಹಿತಿಯನ್ನು "ಸಾಮಾಜಿಕ ಮಾಧ್ಯಮ ಆಕ್ಟಿವಿಸಂ" ಎಂದು ಸಾಮಾನ್ಯೀಕರಿಸದೆ, ನಿಖರ ಮಾಹಿತಿಯನ್ನು ಪೊಲೀಸರಿಗೆ ನೀಡುವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದೂ ಕೆಲವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಶೇರ್ ಮಾಡುವ ಜನಸಾಮಾನ್ಯರಿಗೆ ತಪ್ಪು ಸಂದೇಶ ಕೊಟ್ಟು ಸಮಾಜವನ್ನು ಹಾಳು ಮಾಡುವ ಸಾಮಾಜಿಕ ಜಾಲತಾಣಗಳ ಮುಖಪುಟಗಳಿಗೆ ಕಡ್ಡಾಯವಾಗಿ ಆಧಾರ್ ಕಾರ್ಡ್, ಫೋನ್ ನಂಬರ್ ಕಡ್ಡಾಯ ಮಾಡುವ ಕಾನೂನು ಜಾರಿಗೆ ತರಬೇಕಾಗಿದೆ. ಸುಳ್ಳು ಸಂದೇಶ ಕೊಟ್ಟು ಸಮಾಜವನ್ನು ದಿಕ್ಕು ತಪ್ಪಿಸುವವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 50.000 ರೂ. ದಂಡದಂತಹ ಗಂಭೀರ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದೂ ಕೆಲವರು ಆಗ್ರಹಿಸಿದ್ದಾರೆ.

bangladesh viral priyank kharge

bangladesh viral priyank kharge

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ