ಟರ್ಬುಲೆನ್ಸ್: ಏರ್ ಇಂಡಿಯಾ ವಿಮಾನದ ಪೈಲಟ್ ಡೋಪ್ ಪರೀಕ್ಷೆಯಲ್ಲಿ ವಿಫಲ
ನವದೆಹಲಿ: ಕಳೆದ ವಾರ ಫುಕೆಟ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ತೀವ್ರ ಟರ್ಬುಲೆನ್ಸ್‌ಗೆ (ಗಾಳಿಯ ಒತ್ತಡದಲ್ಲಿ ದಿಢೀರ್ ಬದಲಾವಣೆ) ಸಿಲುಕಿತ್ತು. ಇದರ ಪೈಲಟ್, ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿರುವ ಸಾಧ್ಯತೆಯಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಆದಾಗ್ಯೂ, ಮತ್ತೊಂದು ಪರೀಕ್ಷೆಯ ಫಲಿತಾಂಶ ಬರುವುದು ಬಾಕಿ ಇರುವುದರಿಂದ ಇದು ಅಂತಿಮವಲ್ಲ ಎನ್ನಲಾಗಿದ್ದು ಇದನ್ನು ಏರ್ ಇಂಡಿಯಾ ಧೃಢಪಡಿಸಿಲ್ಲ.
ತನಿಖೆ ವೇಳೆ ಈ ಅಂಶ ಬಯಲಾಗಿದೆ. ಪರೀಕ್ಷೆಯ ಫಲಿತಾಂಶಗಳನ್ನು ತಮ್ಮೊಂದಿಗೆ ಹಂಚಿಕೊಂಡಿಲ್ಲವಾದ್ದರಿಂದ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ವಿಮಾನಯಾನ ಇಲಾಖೆ ತಿಳಿಸಿದೆ.
ಅಂದಿನ ಘಟನೆಯಲ್ಲಿ ವಿಮಾನಕ್ಕೂ ಸ್ವಲ್ಪ ಹಾನಿಯಾಗಿತ್ತು. ವಿಮಾನದಲ್ಲಿದ್ದ 134 ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ದೆಹಲಿಯಲ್ಲಿ ಇಳಿದಿದ್ದರು.
Tags
Nation