ತಮಿಳುನಾಡಿಗೆ ‘ಕಾವೇರಿ’: ಆದೇಶ ಪಾಲಿಸುವ ಅನಿವಾರ್ಯತೆ ರಾಜ್ಯದ ಮೇಲಿದೆ ಎಂದ HDK

ತಮಿಳುನಾಡಿಗೆ ‘ಕಾವೇರಿ’: ಆದೇಶ ಪಾಲಿಸುವ ಅನಿವಾರ್ಯತೆ ರಾಜ್ಯದ ಮೇಲಿದೆ ಎಂದ HDK

ತಮಿಳುನಾಡಿಗೆ ‘ಕಾವೇರಿ’: ಆದೇಶ ಪಾಲಿಸುವ ಅನಿವಾರ್ಯತೆ ರಾಜ್ಯದ ಮೇಲಿದೆ ಎಂದ HDK

ನವದೆಹಲಿ: ತಮಿಳುನಾಡಿಗೆ ಹದಿನೈದು ದಿನಗಳವರೆಗೆ ನಿತ್ಯ 12,000 ಕ್ಯುಸೆಕ್‌ (1.03 ಟಿಎಂಸಿ ಅಡಿ) ಕಾವೇರಿ ನೀರನ್ನು ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕರ್ನಾಟಕಕ್ಕೆ ನಿರ್ದೇಶನ ನೀಡಿರುವ ಬಗ್ಗೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಮಾತನಾಡಿದ್ದಾರೆ.

ದೆಹಲಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿರುವ ಅವರು, ಸುಪ್ರೀಂಕೋರ್ಟ್ ಆದೇಶ ಪಾಲಿಸುವ ಅನಿವಾರ್ಯತೆ ರಾಜ್ಯದ ಮೇಲಿದೆ ಎಂದು ಹೇಳಿದ್ದಾರೆ.

ಈ ವರ್ಷ ಮಳೆ ಕೊರತೆಯಾಗಲಿದೆ ಎನ್ನುವ ಮಾಹಿತಿ ಮೊದಲೇ ಇತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಬಾರಿ ಈ ವಿಷಯ ಪ್ರಸ್ತಾಪಿಸಿದ್ದರು. ಆದಾಗ್ಯೂ, ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವ ವಿಚಾರದಲ್ಲಿ ತಮಿಳುನಾಡಿಗೆ ಹೋಲಿಸಿದರೆ, ರಾಜ್ಯದಲ್ಲಿ ಸರಿಯಾದ ತಯಾರಿ ಆಗಿಲ್ಲ ಎಂದು ಹೇಳಿದ್ದಾರೆ.

ತಮಿಳುನಾಡು ಒತ್ತಡ ಹಾಕುವ ಪ್ರಯತ್ನ ಮಾಡಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು, ಕಾವೇರಿ ನೀರು ನಿಯಂತ್ರಣ ಸಮಿತಿಯ ಮೇಲೆ ಮೇ ತಿಂಗಳಲ್ಲೇ ಒತ್ತಡ ಹೇರಿತ್ತು ಎಂದಿದ್ದಾರೆ.

ರಾಜ್ಯ ಸರ್ಕಾರ ನೀರಿನ ಆಧಾರದ ಬೆಳೆ ಹಾಕಬೇಡಿ ಎಂದು ಹೇಳಿತು. ಆದರೆ, ತಮಿಳುನಾಡು ಒತ್ತಡ ಹಾಕಿ ನೀರು ಬಿಡಿಸಿಕೊಂಡಿದೆ. ಮೊದಲು 3500 ಕ್ಯೂಸೆಕ್ ನೀರು ಬಿಡಿಸಿಕೊಂಡಿತು. ಅದಾದ ನಂತರ ಮುಖ್ಯಮಂತ್ರಿ ಅವರು ಸರ್ವ ಪಕ್ಷಗಳ ಸಭೆ ಕರೆದಿದ್ದರು. ಸಭೆಯಲ್ಲಿ ಕಾನೂನು ಮತ್ತು ತಾಂತ್ರಿಕ ವಿಷಯಗಳ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ, ಯಾವ ವಕೀಲರೂ ಭಾಗಿಯಾಗಿರಲಿಲ್ಲ. ಎಲ್ಲವನ್ನೂ ಮುಖ್ಯಮಂತ್ರಿಗಳೇ ಹೇಳೀ, ಅವರೇ ಎಲ್ಲರಿಗೂ ಪ್ರಮಾಣಪತ್ರ ನೀಡಿದ್ದರು ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ದೆಹಲಿಯಲ್ಲಿ ಸಂಸತ್‌ ಸದಸ್ಯರ ಸಭೆ ಕರೆದಿದ್ದನ್ನು ಉಲ್ಲೇಖಿಸಿ, ಆ ಸಭೆಯಲ್ಲೇ ವಕೀಲರಿಗೆ ಅವಮಾನ ಮಾಡಿದ್ದಾರೆ. ಸಭೆಯ ಉದ್ದೇಶ ಏನು? ಎಂಬುದನ್ನು ವಕೀಲರು ವಿವರಿಸಬೇಕಿತ್ತು ಎಂದು ಹೇಳಿದ್ದಾರೆ.

ತಮಿಳುನಾಡು ಸರ್ಕಾರ ಕಾವೇರಿ ನೀರು ನಿಯಂತ್ರಣ ಸಮಿತಿಯ ಎದುರು ಮೇ 26ಕ್ಕೆ ಅರ್ಜಿ ಸಲ್ಲಿಸುತ್ತೆ. ಅದರಂತೆ ಒತ್ತಡಕ್ಕೆ ಮಣಿದು ಜೂನ್, ಜುಲೈ ತಿಂಗಳಲ್ಲಿ ನೀರು ಹರಿಸುವ ಬಗ್ಗೆ ಚರ್ಚೆ ನಡೆಯುತ್ತದೆ.

ನೀರು ಹರಿಸಲು ತಮಿಳುನಾಡು ನಿರಂತರವಾಗಿ ಒತ್ತಡ ಹಾಕಿದೆ. ಅಗಸ್ಟ್ 2ರ ಸಭೆಯಲ್ಲಿ ನಾನು ಎಚ್ಚರಿಕೆ ನೀಡಿದ್ದೆ. ಈಗ ನೀರು ಹರಿದು ಬರ್ತಿದೆ, ಕಬಿನಿಯಿಂದ 25000 ಕ್ಯೂಸೆಕ್ ನೀರು ಬಿಡುತ್ತಿದ್ದೀರಿ. ಈಗ ನೀರಿದೆ ಎಂದು ಬಿಟ್ಟರೆ, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತೆ ಎಂದು ಎಚ್ಚರಿಕೆ ನೀಡಿದ್ದೆ. ಈಗ ಅಗಸ್ಟ್ ನೀರು ಕೇಳುತ್ತಿದ್ದಾರೆ. ಮಳೆಯ ಅನಿಶ್ಚಿತತೆ ಇದೆ. ಮುಂದೆ ಏನು ಮಾಡಬೇಕು ಚಿಂತಿಸಿ ಎಂದು ಸಲಹೆ ನೀಡಿದ್ದೆ.

ಮುಖ್ಯಮಂತ್ರಿ ಅವರು ಜುಲೈ 15, 21, 27 ಹಾಗೂ ಅಗಸ್ಟ್ 9ರಂದು ದೆಹಲಿಗೆ ಬಂದಿದ್ದಾರೆ. ಆದರೆ, ಮಾಡಿದ್ದೇನು? ಕಾವೇರಿ ಬಗ್ಗೆ ವಕೀಲರ ಜೊತೆಗೆ ಚರ್ಚಿಸಿದ್ದಾರಾ? ಕಾಂಗ್ರೆಸ್ ನಾಯಕರಾದ ವೇಣುಗೋಪಾಲ್, ಸುರ್ಜೆವಾಲ ಅವರನ್ನು ಭೇಟಿ ಮಾಡಿ ಹೋಗಿದ್ದಾರೆ. ಅವರಿಗೂ, ಕರ್ನಾಟಕಕ್ಕೂ ಏನು ಸಂಬಂಧ? ಅವರ ಮನೆ ಕಾಂಪೌಂಡ್ ಕಾಯೋಕೆ ಬರುತ್ತೀರಿ. ಬಾಗಿಲು ತೆರೆಯದಿದ್ದರೆ ಮಲ್ಲಿಕಾರ್ಜುನ ಖರ್ಗೆ ಮನೆ ಬಾಗಿಲಿಗೆ ಬರುತ್ತೀರಿ. ಡಿಕೆಶಿಗೆ ಜನರ ಹಿತಾಸಕ್ತಿಗಿಂತ ಕುರ್ಚಿ ಉಳಿಸಿಕೊಳ್ಳುವುದು ಹೆಚ್ಚಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಡದಿ ಬಗ್ಗೆ ಅದ್ದೂರಿ ಜಾಹೀರಾತು ನೀಡುತ್ತಿದ್ದಾರೆ. ಜಾಹೀರಾತು ಕೊಟ್ಟುಕೊಂಡು ಕೂರಲು ಸಮಯ ಇದೆ. ಅದಕ್ಕೆ ಹಣ ಯಾರ ಆಪ್ಪನ ಮನೆಯದ್ದು. ಭಾರತ ಜೋಡೊ ಸಂಘವಂತೆ. ಇದು ಯಾರ ದುಡ್ಡು? ಇದಕ್ಕೆ ಅರ್ಥವಿದೆಯಾ? ಇಂತಹ ಕೆಲಸ ಮಾಡಿಕೊಂಡು ಕುಳಿತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕಾವೇರಿ ಪ್ರದೇಶದಲ್ಲಿ ರೈತರು ಬೆಳೆ ಬೆಳೆದಿಲ್ಲ, ಕಬ್ಬು ನಾಶವಾಗಿದೆ. ಮುಖ್ಯಮಂತ್ರಿಯವರು ಇಷ್ಟು ಬಾರಿ ದೆಹಲಿಗೆ ಬಂದು ಮಾಡಿದ್ದೇನು? ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಸರಿ. ಆದರೆ ಸರ್ಕಾರ ನಡೆದುಕೊಳ್ಳುವ ರೀತಿ ಹೇಗಿದೆ? 3.5 ವರ್ಷದಿಂದ ಸಂಕಷ್ಟ ಸೂತ್ರ ರಚನೆಗೆ ರಾಜ್ಯ ಸರ್ಕಾರ ಏನು ಮಾಡಿದೆ? ಎಂದು ಕೇಳಿದ್ದಾರೆ.

ಸಾಮಾನ್ಯ ವರ್ಷದಲ್ಲಿ 300 ಟಿಎಂಸಿ ನೀರು ಸಮುದ್ರಕ್ಕೆ ಹೋಗಿದೆ. ಸರ್ಕಾರವು ಕೋರ್ಟ್ ಮುಂದೆ ಹೇಗೆ ಒತ್ತಡ ತಂದಿದೆ? ಮೇಕೆದಾಟಿಗೆ ಅನುಮತಿ ಸಿಕ್ಕಿದರೂ ಎಷ್ಟು ವರ್ಷ ಬೇಕು ಕಟ್ಟಲು? ಅಲ್ಲಿರುವ ಪ್ರಾಣಿಗಳನ್ನು ಎಲ್ಲಿಗೆ ಕಳುಹಿಸುವಿರಿ, ಬೆಂಗಳೂರು ನಗರಕ್ಕೆ ತಂದು ಬಿಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ