
ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಸುಬುಧ್ ಸೇರಿ 18 ಆಟಗಾರರ ಮುನ್ನಡೆ
ಧಾರವಾಡ: ಅಗ್ರ ಶ್ರೇಯಾಂಕಿತ ಸುಬುಧ್ ಸೇತಿ ಸೇರಿದಂತೆ 18 ಆಟಗಾರರು ಇಲ್ಲಿ ನಡೆಯುತ್ತಿರುವ ಯಾನೆಕ್ಸ್–ಸನ್ ರೈಸ್ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಸೀನಿಯರ್ ಪುರುಷರ ಸಿಂಗಲ್ಸ್ ಕ್ವಾಲಿಫಯರ್ಸ್‌ನ ನಾಲ್ಕನೇ ಸುತ್ತಿಗೆ ಮುನ್ನಡೆದರು.
ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ವತಿಯಿಂದ ನಗರದ ಆರ್.ಎನ್.ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸುಬುಧ್ 15–3, 15–3ರಿಂದ ಹರ್ಷುಲ್ ಶರ್ಮ ವಿರುದ್ಧ ನಿರಾಯಾಸದ ಗೆಲುವು ದಾಖಲಿಸಿದರು. ಎರಡನೇ ಶ್ರೇಯಾಂಕದ ವಿಶಾಲ್ ಪಿ.ವಿ. ಮುಂದಿನ ಸುತ್ತಿಗೆ ವಾಕ್ ಓವರ್ ಪಡೆದರು.
ಮೂರನೇ ಶ್ರೇಯಾಂಕದ ಪ್ರತೀಶ್ ಪದ್ಮರಾಜು 15–4, 15–9ರಿಂದ ಆಕಾಶ್ ಬಿ.ವಿರುದ್ಧ; ನಾಲ್ಕನೇ ಶ್ರೇಯಾಂಕದ ಭಾವೇಶ್ ಕುಂಚೆ 15–11, 15–10ರಿಂದ ಸೌಮ್ಯ್ ಪಟೇಲ್ ವಿರುದ್ಧ ಜಯಗಳಿಸಿದರು.
ಫಲಿತಾಂಶಗಳು: ಸೀನಿಯರ್ ಪುರುಷರ ಸಿಂಗಲ್ಸ್: ನಾಲ್ಕನೇ ಸುತ್ತು ಪ್ರವೇಶಿಸಿದವರು: ಸುಬುಧ್ ಸೇತಿ, ಅಖಿಲ್ ವಿ.ನಾಟೇಕರ್, ಕನಿಷ್ಕ್ ಬೆಂಗ್ರೆ, ಋಗ್ವೇದ್ ರೊತೆ, ವಿಶಾಲ್ ಪಿ.ವಿ, ಲಕ್ಷ್ಮಿಕಾಂತ್ ಎಂ.ಗೌಡ, ಸಿದ್ದಾರ್ಥ ಗುಂಟೂರಿ, ಪ್ರೀತಮ್ ಕುಮಾರ್ ಬಿ, ಭಾವೇಶ್ ಕುಂಚೆ, ಇಂದ್ರಜ್ ವಿನೋದ್, ಪಾರ್ಥಿಕ್ ಸಿಂಗ್, ಪ್ರತೀಶ್ ಪದ್ಮರಾಜು, ಧ್ರುವ ಬಿಂದಹಳ್ಳಿ, ಕರಂಶ್ ನಾಯ್ಡು, ಶ್ರೀಕರ್ ರಾಜೇಶ್, ಗೋವಿಂದ್ ವಿನಾಯಕ್ ಕತ್ವೆ, ಧೀರ್ ಬೆಂಗೇರಿ ಹಾಗೂ ತೋಶನ್ ನಾಯಕ್ ಅವರು ಮೂರನೇ ಸುತ್ತಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದರು.
ಸೀನಿಯರ್ ಮಹಿಳಾ ಸಿಂಗಲ್ಸ್: ಕ್ವಾಲಿಫಯರ್ಸ್ ಎರಡನೇ ಸುತ್ತು ಪ್ರವೇಶಿಸಿದವರು: ಝೈನಾ ಸಿದ್ಧಿಕಿ, ಕೀರ್ತಿ ಬಾಲಾಜಿ, ಆರ್ನಾ ಅಸುಂಡಿ, ಬಿಂದುಶ್ರೀ ಎಸ್, ಊರ್ವಿ ಹುರಕಡ್ಲಿ, ಪವಿತ್ರಾ ಬಸವರಾಜ್, ವೃದ್ಧಿ ಅಗರವಾಲ್, ಕಂಡಿಬಿಲ್ಲ ಶ್ರೇಯಾ, ಗ್ಲೊರಿಯಾ ಅತವಾಲೆ, ತಸ್ವಿ ಎಸ್.ಕೆ, ಐಶ್ವರ್ಯಾ ತಲ್ವಾಲ್ಕರ್, ಚಂದನಾ ಸಿ, ಸನಿಹಾ ಚೇತನ್, ಗೀತ್ ಬಂಬ್ರ, ವಿ.ಅಕ್ಷರಾ, ಖುಷಿ ಎ.ಎಂ, ರುತಿ ಎಂ.ಪಿ, ಇಶಿಕಾ ದತ್, ಸಾನಿಕಾ ದವಾಲೆ, ಅವನಿ ಕೆ.ಮೂರ್ತಿ, ರಿಯಾ ಪಟೇಲ್, ಗಮ್ಯ ದಿವ್ಯಾನಂದ, ಅಕ್ಷತಾಂಜಲಿ ವಿ.ರಾವ್, ನೀತಿ ಎಂ ಹಾಗೂ ಯುಕ್ತಾ ಅವರು ಎರಡನೇ ಸುತ್ತು ಪ್ರವೇಶಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260812-51-300352168