
Dr Bro: ಕನ್ನಡಿಗರಿಗೆ ಸಿಹಿ ಸುದ್ದಿ ಕೊಟ್ಟ ಡಾ.ಬ್ರೋ: ಕರ್ನಾಟಕದ ಉತ್ತರ ದಿಕ್ಕಿನ ಜಿಲ್ಲೆಗಳ ಬಗ್ಗೆ ಹೊಸ ವಿಶೇಷ ವಿಡಿಯೋ ವೈರಲ್
Dr Bro: ಕರ್ನಾಟಕದ ಪ್ರಸಿದ್ಧ ಯೂಟ್ಯೂಬರ್ ಡಾ.ಬ್ರೋ (Dr.Bro) ಅವರು ಮತ್ತೆ ಯೂಟ್ಯೂಬ್‌ನಲ್ಲಿ ವಿಡಿಯೋ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ. ಇದೇ ಸಂದರ್ಭದಲ್ಲಿ ಕನ್ನಡಿಗರೊಂದಿಗೆ ವಿಶೇಷ ಸಂದೇಶವನ್ನೂ ಹಂಚಿಕೊಂಡಿದ್ದಾರೆ. ಹೌದು ವರ್ಷಗಳ ನಂತರ ನನ್ನ ಕರುನಾಡಲ್ಲಿ ಎಂದು ಡಾ ಬ್ರೋ ಅವರು ವಿಶೇಷ ವಿಡಿಯೊವೊಂದನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ. ನಮಸ್ಕಾರ ದೇವ್ರು.. ಎಲ್ರು ಹೆಂಗಿದ್ದಿರಾ ನಾನಂತೂ ಸಖತ್ ಆಗಿದ್ದೀನಿ.. ನೀವು ಎಲ್ಲ ಚೆನ್ನಾಗಿದ್ದೀರಿ ಅಂದುಕೊಳ್ತೀನಿ ಅಂತ ತಮ್ಮ ಮಾತು ಪ್ರಾರಂಭಿಸಿದ್ದಾರೆ. ಇಷ್ಟು ದಿನಗಳ ಕಾಲ ವಿದೇಶಗಳನ್ನು ಸುತ್ತಿ ಜೀವನ ಬೇಸರವಾಗಿದೆ. ಇದೀಗ ನಮ್ಮದೇ ಕರ್ನಾಟಕದ ಉತ್ತರ ದಿಕ್ಕಿನ ಕಡೆ ಪ್ರಯಾಣ ಮಾಡೋಣ ಅಂತ ಡಾ.ಬ್ರೋ ತಮ್ಮ ಹೊಸ ವಿಡಿಯೋದಲ್ಲಿ ಹೇಳಿದ್ದಾರೆ. ಎಂದಿನಂತೆ ನಮಸ್ಕಾರ ದೇವ್ರು ಎನ್ನುವ ಅವರ ಹಳೆಯ ಶೈಲಿಯೊಂದಿಗೆ ಹೊಸ ಪ್ರವಾಸದ ಅಪ್ಡೇಟ್ಸ್ ಹಂಚಿಕೊಂಡಿದ್ದಾರೆ. ಅದರ ವಿವರ ಈ ಲೇಖನದಲ್ಲಿ ನೋಡೋಣ.
ಡಾ. ಬ್ರೋ ಅವರು ತಮ್ಮ ವಿಡಿಯೋವನ್ನು ವಿಜಯಪುರದಿಂದ ಪ್ರಾರಂಭಿಸಿದ್ದು, ವಿಜಯಪುರದ ಗೋಲ್ ಗುಂಬಜ್ ಬಗ್ಗೆ ವಿವರಿಸಿದ್ದಾರೆ. ಹಂಪಿಯ ವಿರೂಪಾಕ್ಷ ದೇವಸ್ಥಾನ, ಗದಗದ ಶಿವಯೋಗ ಮಂದಿರದ ವಿಶೇಷತೆಯನ್ನು ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿನ ದೃಶ್ಯಗಳು ಹಾಗೂ ಹಿನ್ನೆಲೆ ಸಂಗೀತವು ಅದ್ಭುತವಾಗಿದೆ.
ಹೌದು ಇಷ್ಟು ವರ್ಷಗಳ ಕಾಲ ದೇಶ - ವಿದೇಶಗಳನ್ನು ಸುತ್ತಿ, ಯಾರೂ ನೋಡದ, ಯಾರೂ ಹೋಗದ - ಹೋಗುವುದಕ್ಕೆ ಆತಂಕ ಪಡುವ ಪ್ರದೇಶಗಳನ್ನು ಕನ್ನಡಿಗರಿಗೆ ತೋರಿಸಿದ್ದರು. ಕೆಲವು ತಿಂಗಳುಗಳಿಂದ ಅವರು ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ಅಪ್ಲೋಡ್ ಮಾಡಿರಲಿಲ್ಲ. ಇದೀಗ ಕರ್ನಾಟಕ ವಿಜಯಪುರ (ಬಿಜಾಪುರ)ದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ವಿಜಯಪುರದ ಇತಿಹಾಸವನ್ನು ಈ ವಿಡಿಯೋದಲ್ಲಿ ಪರಿಚಯಿಸಿದ್ದಾರೆ. ಇದು ಆದಿಲ್ ಶಾಹಿ ಸುಲ್ತಾನರ ರಾಜಧಾನಿಯಾಗಿತ್ತು ಅಂತ ಎಂದಿನಂತೆ ಮಾಹಿತಿ ಹಂಚಿಕೊಂಡು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಹಲವು ಕಾರಣಗಳಿಗೆ ವಿಶೇಷವಾಗಿದೆ.
9 ರಾಜರು ಈ ವಿಜಯಪುರವನ್ನು ಆಳ್ವಿಕೆ ಮಾಡಿದ್ದರು. ಆ ಒಬ್ಬತ್ತು ರಾಜರಲ್ಲಿ ಏಳನೇ ರಾಜನ ಸಮಾಧಿಯೇ ವಿಜಯಪುರದ ಗೋಲ್ ಗುಂಬಜ್ ಎಂದು ಗೋಲ್ ಗುಂಬಜ್ ಬಗ್ಗೆ ವಿವರಿಸಿದ್ದಾರೆ. ಇದನ್ನು ಕಟ್ಟುವುದಕ್ಕೆ ಬರೋಬ್ಬರಿ 30 ವರ್ಷಗಳೇ ಆಗಿವೆ ಎಂದು ಡಾ. ಬ್ರೋ ಹೇಳಿದ್ದಾರೆ. ಹಿಂದೂ ಮತ್ತು ಮುಸ್ಲಿಂ ಎರಡೂ ಶೈಲಿಯನ್ನು ಒಳಗೊಂಡಿರುವ ಗುಂಬಜ್ ಇದಾಗಿದೆ ಅಂತ ಅವರು ಹೇಳಿದ್ದಾರೆ. ಇಂಡೋ - ಇಸ್ಲಾಮಿಕ್ ಶೈಲಿಯಲ್ಲಿ ಇದು ನಿರ್ಮಾಣವಾಗಿದೆ ಎಂದು ವಿವರಿಸಿದ್ದಾರೆ. ಭಾರತದಲ್ಲೇ ಅತೀ ದೊಡ್ಡ ಗುಂಬಜ್ ಎಲ್ಲಿಯಾದರೂ ಇದೆ ಎಂದರೆ ಅದು ನಮ್ಮ ಗೋಲ್ ಗುಂಬಜ್ ಅಂತ ವಿಡಿಯೋದಲ್ಲಿ ಡಾ.ಬ್ರೋ ಹೇಳಿದ್ದಾರೆ. ಅಲ್ಲದೆ
ಇನ್ನು ಹಲವು ತಿಂಗಳುಗಳ ನಂತರ ಡಾ.ಬ್ರೋ ಅವರು ವಿಡಿಯೋ ಮಾಡುವುದಕ್ಕೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಯಾರ್ ಯಾರ್ ಕಾಯ್ತಾ ಇದ್ರಿ ಸ್ವಲ್ಪ ಹಾಜರಿ ಹಾಕ್ರಪ್ಪ ❤ love you Dr Bro ❤, ನೂರಾರು ದೇಶ ಸುತ್ತಿ ಏನೇನೋ ಕಂಡ ಮೇಲೂ ನಮ್ಮೂರೇ ನಮಗೆ ಮೇಲೂ, ಉತ್ತರ ಕರ್ನಾಟಕ ಅಲ್ಲ ನಮ್ಮ ರಾಜ್ಯದ ಉತ್ತರ ದಿಕ್ಕು 💛❤️ ಹಿಂದೆ ಮುಂದೆ ಎಂದೇ ಕರ್ನಾಟಕ ಒಂದೇ ಎಂದು ಮತ್ತೊಮ್ಮೆ ಸಾರಿದ Dr.Bro ಎಂದು ಕನ್ನಡಿಗರು ಹೇಳಿದ್ದಾರೆ.
ನಮ್ಮ ಕರ್ನಾಟಕದ ಉತ್ತರ ಭಾಗ (ಉತ್ತರ ಕರ್ನಾಟಕ) ವನ್ನು ಅತ್ಯುತ್ತಮವಾಗಿ ಮತ್ತು ಕೆಲವು ಜಿಲ್ಲೆಗಳ ವಿಶೇಷತೆಯನ್ನು ನಮಗೆ ವಿಶೇಷ ರೀತಿಯಲ್ಲಿ ತೋರಿಸಿದ ನಿಮಗೆ ಧನ್ಯವಾದಗಳು ದೇವ್ರು..... ಮುಂದೆ ಬರುವ ದಿನಗಳಲ್ಲಿ ಮತ್ತಷ್ಟು ಉತ್ತರ ಭಾಗದ ಎಲ್ಲಾ ಜಿಲ್ಲೆಗಳನ್ನು ತೋರಿಸಿ ಕೊಡಬೇಕಾಗಿ ವಿನಂತಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.