
Amruthadhaare Serial: ಕೇಡಿ ಜೈದೇವ್‌ಗೆ ಚಳ್ಳೆಹಣ್ಣು ತಿನ್ನಿಸಿದ ಮಲ್ಲಿ; ಸಾಕ್ಷಿ ನಾಶ ಮಾಡುವ ಪ್ಲ್ಯಾನ್‌ನಲ್ಲಿ ಶಾಕುಂತಲಾ!
Amruthadhaare Serial: ಅಮೃತಧಾರೆ ಸೀರಿಯಲ್‌ನಲ್ಲಿ ರೋಚಕ ತಿರುವು ಎದುರಾಗಿದೆ. ಮೊದ ಮೊದಲ ಈ ತಿರುವನ್ನು ಪ್ರೇಕ್ಷಕರು ಇಷ್ಟಪಡಲಿಲ್ಲವಾದರೂ ಈಗ ಬರುತ್ತಿರುವ ದೃಶ್ಯಗಳು ಪ್ರೇಕ್ಷಕರಿಗೆ ಇಷ್ಟವಾಗಲು ಪ್ರಾರಂಭವಾಗಿದೆ. ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾಗೆ ಸ್ತನ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ಇದಾದ ನಂತರ ಭೂಮಿಕಾ ತೀರ ಕುಗ್ಗಿ ಹೋಗಿರುವಂತೆ ತೋರಿಸಲಾಗಿತ್ತು. ಆದರೆ, ಇದೀಗ ಭೂಮಿಕಾಗೆ ಗೌತಮ್ ಆಸರೆಯಾಗಿದ್ದು, ಕ್ಯಾನ್ಸರ್ ವಿರುದ್ಧದ ಹೋರಾಟ ಮುಂದುವರಿದಿದೆ. ನಿಮ್ಮ ಜೀವನದಲ್ಲಿ ಏನೇ ಕಷ್ಟ ಬಂದರೂ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಭೂಮಿಕಾಗೆ ಗೌತಮ್ ಧೈರ್ಯ ತುಂಬಿದ ಮೇಲೆ ಕ್ಯಾನ್ಸರ್ ಸವಾಲು ಎದುರಿಸುವುದಕ್ಕೆ ಭೂಮಿಕಾ ಮುಂದಾಗಿದ್ದಾಳೆ.
ಅಮೃತಧಾರೆ ಸೀರಿಯಲ್‌ನಲ್ಲಿ ಮುಖ್ಯ ಪಾತ್ರಧಾರಿ ಭೂಮಿಕಾ ಪಾತ್ರದಲ್ಲಿ ಛಾಯಾ ಸಿಂಗ್ ಅವರು ನಟಿಸುತ್ತಿದ್ದು, ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬ್ರೆಸ್ಟ್ ಕ್ಯಾನ್ಸರ್ ಎದುರಿಸುವ ರೀತಿ ಈ ಸವಾಲನ್ನು ಭೂಮಿಕಾ ಮತ್ತು ಗೌತಮ್ ನಿಭಾಯಿಸುತ್ತಿರುವ ವಿಧಾನಕ್ಕೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭೂಮಿಕಾಗೆ ರೆಸ್ಟ್ ಕೊಟ್ಟಿರುವ ಗೌತಮ್ ದಿವಾನ್ ಅವರು ಭೂಮಿಕಾಗೆ ಇಷ್ಟವಾಗಿರುವ ಅಡುಗೆ ಮಾಡಿಕೊಟ್ಟಿದ್ದಾರೆ. ಈದೃಶ್ಯಗಳು ಪ್ರೇಕ್ಷಕರಲ್ಲೂ ಕಣ್ಣೀರು ತರಿಸುವಂತಿದೆ.
ಬಡ ಅಜ್ಜಿಗೆ ಅಂಗಡಿ ವ್ಯವಸ್ಥೆ ಮಾಡಿದ ಗೌತಮ್
ಇನ್ನು ಅಮೃತಧಾರೆ ಸೀರಿಯಲ್‌ನಲ್ಲಿ ಬಡ ಅಜ್ಜಿಗೆ ಗೌತಮ್ ಸಹಾಯ ಮಾಡಿದ್ದಾರೆ. ಭೂಮಿಕಾ ಹಾಗೂ ಗೌತಮ್ ಇಬ್ಬರೂ ಹಣ್ಣು ವ್ಯಾಪಾರ ಮಾಡುವುದಕ್ಕೆ ಹೋಗಿದ್ದಾರೆ. ಹಣ್ಣು ಖರೀದಿ ಮಾಡುವಾಗ ಬಡ ಅಜ್ಜಿಯೊಬ್ಬರಿಗೆ ಗೌತಮ್ ಸಹಾಯ ಹಸ್ತ ಚಾಚಿದ್ದಾರೆ. ಹಣ್ಣು ಖರೀದಿ ಮಾಡುವಾಗ ಅಜ್ಜಿಯ ಪರಿಸ್ಥಿತಿಯನ್ನು ನೋಡಿದ ಗೌತಮ್ ಕೂಡಲೇ ಅಜ್ಜಿಗೆ ಅಂಗಡಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇದನ್ನು ನೋಡಿದ ಭೂಮಿಕಾ ಗೌತಮ್ ದಿವಾನ್ ಎಲ್ಲಿದ್ದರೂ ಗೌತಮ್ ದಿವಾನೇ. ಎಲ್ಲರ ಬಳಿಯೂ ಹಣ ಇರುತ್ತದೆ. ಆದರೆ ಸಹಾಯ ಮಾಡಬೇಕು ಎನ್ನುವ ಮನಸ್ಸು ಕೆಲವರಿಗಷ್ಟೇ ಇರುತ್ತದೆ ಅಂತ ಹೇಳಿದ್ದಾರೆ.
ಕೇಡಿ ಜೈದೇವ್‌ಗೆ ಪಾಠ ಕಲಿಸಿದ ಮಲ್ಲಿ!
ಇನ್ನು ಕೇಡಿ ಜೈದೇವ್‌ಗೆ ಮಲ್ಲಿ ಪಾಠ ಕಲಿಸಿರುವುದನ್ನ ಶಾಕುಂತಲಾ ದೇವಿ ಕದ್ದು ಕೇಳಿಸಿಕೊಂಡಿದ್ದಾಳೆ. ಕೇಡಿ ಜೈದೇವ್‌ಗೆ ಹೇಗೆ ಪಾಠ ಕಲಿಸಿದೆ ಅಂತ ಮಲ್ಲಿ ಭೂಮಿಕಾಳ ಬಳಿ ಹೇಳಿಕೊಂಡಿದ್ದಾಳೆ. ನೀವು ಲೈವ್‌ನಲ್ಲಿ ನೋಡಬೇಕಾಗಿತ್ತು ಮಜವಾಗಿತ್ತು ಅಂತ ಭೂಮಿಕಾ ಬಳಿ ಮಲ್ಲಿ ಹೇಳಿದ್ದಾಳೆ. ಹಾರಾಡಿದ ತಪ್ಪಿಗೆ ಸ್ಟೇಷನ್‌ಗೆ ಕರ್ಕೊಂಡು ಹೋದ್ವಿ, ರಾತ್ರಿ ಪೂರ್ತಿ ಪೊಲೀಸ್ ಸ್ಟೇಷನ್‌ನಲ್ಲಿಯೇ ಇರುವಂತೆ ಆಯಿತು. ಅವನ ಮುಖ ನೋಡಬೇಕಾಗಿತ್ತು ಅಂತ ಮಲ್ಲಿ ಹೇಳಿದ್ದಾಳೆ.
ಮುಂದೆ ಕೋರ್ಟ್‌ಗೆ ಕರೆದುಕೊಂಡು ಹೋಗಲಿದ್ದೇವೆ, ವಿಡಿಯೋ ಇದೆ. ವಿಡಿಯೋ ಸಾಕ್ಷ್ಯದ ಮೇಲೆ ವಾರ್ನಿಂಗ್ ಕೊಡಬಹುದು ಇಲ್ಲವೇ ದಂಡ ಪಾವತಿ ಮಾಡುವಂತೆ ಹೇಳುವ ಸಾಧ್ಯತೆ ಇದೆ. ಇಲ್ಲವೇ ಜೈದೇವ್ ಅವರ ಡ್ರೈವಿಂಗ್ ಲೈಸೆನ್ಸ್ ಕ್ಯಾನ್ಸಲ್ ಆಗುವ ಸಾಧ್ಯತೆಯೂ ಇದೆ ಅಂತ ಮಲ್ಲಿ ಹೇಳಿದ್ರೆ. ಇದಕ್ಕೆ ಭೂಮಿಕಾ ಖಡಕ್ ಆಫೀಸ್ ಆಗಿಬಿಟ್ಟಿದ್ಯ ನೀನು ಅಂತ ಮೆಚ್ಚುಗೆ ಸೂಚಿಸಿದ್ದಾಳೆ.
ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ ಅನ್ನೋತರ ಆಗಿದೆ. ನಾನು ಒಂದು ಚಾನ್ಸ್ ಸಿಗಲಿ ಅಂತ ಕಾಯುತ್ತಿದ್ದೆ ಅದು ಈಗ ಆಗಿದೆ ಅಂತ ಮಲ್ಲಿ ಹೇಳಿದ್ದಾಳೆ. ಅಲ್ಲದೆ ಇದು ಟ್ರೈಲರ್ ಮಾತ್ರ ಮೂವಿ ಇನ್ನೂ ಬಾಕಿ ಇದೆ ಅಂತಲೂ ಹೇಳಿದ್ದಾಳೆ.