CWRC ಆದೇಶಕ್ಕೆ ಖಂಡನೆ: ರೈತ ಸಂಘ ಕರೆ ನೀಡಿದ್ದ ಪಾಂಡವಪುರ ಬಂದ್ ಭಾಗಶಃ ಯಶಸ್ವಿ

CWRC ಆದೇಶಕ್ಕೆ ಖಂಡನೆ: ರೈತ ಸಂಘ ಕರೆ ನೀಡಿದ್ದ ಪಾಂಡವಪುರ ಬಂದ್ ಭಾಗಶಃ ಯಶಸ್ವಿ

CWRC ಆದೇಶಕ್ಕೆ ಖಂಡನೆ: ರೈತ ಸಂಘ ಕರೆ ನೀಡಿದ್ದ ಪಾಂಡವಪುರ ಬಂದ್ ಭಾಗಶಃ ಯಶಸ್ವಿ

ಪಾಂಡವಪುರ: ರೈತ ಸಂಘ ಕರೆ ನೀಡಿದ್ದ ಪಾಂಡವಪುರ ಬಂದ್ ಭಾಗಶಃ ಯಶಸ್ವಿಯಾಯಿತು.

ಬೆಳಿಗ್ಗೆ 10 ಗಂಟೆಗೆ ರಸ್ತೆಗಿಳಿದ ಪ್ರತಿಭಟನಕಾರರು ಬಾಗಿಲು ತೆರೆದಿದ್ದ ಹೊಟೇಲ್ ಅಂಗಡಿ ಮಳಿಗೆಗಳನ್ನು ಮುಚ್ಚಿಸಿದರು.

ಕೆಲವರು ಸ್ವಯಂ ಪ್ರೇರಿತರಾಗಿ ಬಾಗಿಲು ಮುಚ್ಚಿ ಬಂದ್ ಗೆ ಬೆಂಬಲ ನೀಡಿದರು. ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಬಂದ್ ಗೆ ಸಹಕರಿಸುವಂತೆ ಪ್ರತಿಭಟನಕಾರರು ಮನವೊಲಿಸಿದರು.

ನಂತರ ಪ್ರತಿಭಟನೆ ಯು ಐದು ದೀಪ ವೃತ್ತದಲ್ಲಿ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಎಲ್.ಕೆಂಪೂಗೌಡ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಕೆಆರ್ ಎಸ್, ಕಾಂಗ್ರೆಸ್, ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಹಾಗೂ ಸಂಘಟನೆಗಳು ಒಂದು ತಾಸಿಗೂ ಹೆಚ್ಚುಕಾಲ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

ಮತ್ತೊಂದೆಡೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್. ಇಂದ್ರೇಶ್ ನೇತೃತ್ವದಲ್ಲಿ ಸುಮಾರು ಅರ್ಧತಾಸು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ