ಸೇಡಂ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಸ್ತೆ ತಡೆ

ಸೇಡಂ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಸ್ತೆ ತಡೆ

ಸೇಡಂ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಸ್ತೆ ತಡೆ

ಸೇಡಂ(ಕಲಬುರಗಿ ಜಿಲ್ಲೆ): ರೈತರ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಒತ್ತಾಯಿಸಿ ಮಾಜಿ ಶಾಸಕ ರಾಜಕುಮಾರ ಪಾಟೀಲ ನೇತೃತ್ವದಲ್ಲಿ ತಾಲ್ಲೂಕಿನ ಮುಧೋಳ ಗೇಟ್ ಬಳಿ ರಾಜ್ಯ ಹೆದ್ದಾರಿ -10ವಾಗ್ಧಾರಿ ರಿಬ್ಬನಪಲ್ಲಿ ರಸ್ತೆ ತಡೆದು ಪ್ರತಿಭಟನೆ ಗುರುವಾರ ನಡೆಯಿತು.

ರೈತರಿಗೆ ಕಾಂಗ್ರೆಸ್ ಸರ್ಕಾರ ಬೆಳೆ ವಿಮೆಯ ಪರಿಹಾರ ವಿತರಣೆಯಲ್ಲಿದ ತಾರತಮ್ಯ ನೀತಿ ಅನುಸರಿಸುತ್ತಿದೆ. ರೈತರಿಗೆ ಮೋಸ ಮಾಡುತ್ತಿದೆ. ಮುಂಗಾರು ಮಳೆ ಬಾರದಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ನೆರವಿಗೆ ಬರಬೇಕಾದ ಕಣ್ಣುಮುಚ್ಚಿ ಕುಳಿತಿದೆ.

ಬ್ಯಾಂಕ್ ಗಳಲ್ಲಿ ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ, ರೈತರನ್ನು ಹತ್ತಿಕ್ಕುವ ಕೆಲಸ ನಡೆದಿದೆ. ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂದು ಆರೋಪಿಸಿದರು.

ರಸ್ತೆ ಮೇಲೆ ಟೆಂಟ್ ಹಾಕಿ, ಟ್ರ್ಯಾಕ್ಟರ್ ನಿಲ್ಲಿಸಿ ಧರಣಿ ನಡೆಸಿದರು. ಅಲ್ಲದೆ ರಾಜ್ಯ ಹೆದ್ದಾರಿ ಮೇಲೆ ಪೊಲೀಸರು ಕೆಲವು ಕಡೆಗಳಲ್ಲಿ ನಿಂತು ವಾಹನ ಸಂಚಾರ ಮಾರ್ಗ ದಟ್ಟಣೆ ನಿಯಂತ್ರಿಸುತ್ತಿರುವುದು ಕಂಡು ಬಂತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶರಣು ಮೆಡಿಕಲ್, ವಿಜಯಕುಮಾರ ಆಡಕಿ, ಸಂತೋಷಿರಾಣಿ ಪಾಟೀಲ, ಮಹಾದೇವ ಗೋಣಿ, ಶೈಲಜಾ ಹಿತ್ತಲ್,ಶರಣು ಮೆಡಿಕಲ್, ಭೀಮಾಶಂಕರ ನಾಯಕ, ನಾಗರೆಡ್ಡಿ ಪಾಟೀಲ, ಶ್ರೀಕಾಂತರೆಡ್ಡಿ ಮುಧೋಳ, ನಾಗಪ್ಪ ಕೊಳ್ಳಿ, ತಿರುಪತಿ ಶಾಬಾದಕರ್, ರಾಮು ಕಣೇಕಲ್, ವಿನೋದ ಸಾಹುಕಾರ, ವೆಂಕಟರಾವ ಮಿಸ್ಕಿನ್, ವಿಜಯಕುಮಾರವ ಖೇವಜಿ, ಭೀಮಶಪ್ಪ ಮುನಕನಪಲ್ಲಿ, ವೆಂಕಟೇಶ ಪಾಟೀಲ, ರವಿಕುಮಾರ್ ಭಂಟನಳ್ಳಿ, ನಾಗೀಂದ್ರಪ್ಪ ಶಿಲಾರಕೋಟ, ವಿಷ್ಣುವರ್ಧನ ಊಡಗಿ, ಶ್ರೀಮಂತ ಆವಂಟಿ, ಅನಂತಪ್ಪ ಮೋತಕಪಲ್ಲಿ, ರವಿ ಹಾಬಾಳ, ವೆಂಕುನಾಯಕ, ರವಿ ಕಡತಾಲ, ಭೀಮಶಪ್ಪ ಹೂಡ್ಯಂ, ರಾಘವೇಂದ್ರ ಮೆಕ್ಯಾನಿಕ, ಸಿದ್ದು ಊಡಗಿ, ಗೋವಿಂದ ಆಡಕಿ, ಶಿಲ್ಪಾ ಪಾಟೀಲ, ವಿಜಯಲಕ್ಷ್ಮಿ ವಿಶ್ವಕರ್ಮ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ