
Coffee Festival: ಬೆಂಗಳೂರಿನಲ್ಲಿ ಇಂಡಿಯಾ ಅಂತರ ರಾಷ್ಟ್ರೀಯ ಕಾಫಿ ಉತ್ಸವ
ಬೆಂಗಳೂರು: ದೇಶದ ಅತಿದೊಡ್ಡ ಕಾಫಿ ಉತ್ಸವ ಎಂಬ ಹೆಗ್ಗಳಿಕೆ ಹೊಂದಿರುವ ‘ಇಂಡಿಯಾ ಅಂತರ ರಾಷ್ಟ್ರೀಯ ಕಾಫಿ ಉತ್ಸವ’ (ಐಐಸಿಎಫ್) ನಗರದಲ್ಲಿ ಫೆಬ್ರುವರಿ 26ರಿಂದ 28 ರವರೆಗೆ ನಡೆಯಲಿದೆ ಎಂದು ಕಾಫಿ ಮಂಡಳಿ ಸಿಇಒ ಕೂರ್ಮಾ ರಾವ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಉತ್ಸವವನ್ನು ಮಂಡಳಿಯು ‘ಸ್ಪೆಷಾಲಿಟಿ ಕಾಫಿ ಅಸೋಸಿಯೇಷನ್ ಆಫ್ ಇಂಡಿಯಾ’ (ಎಸ್‌ಸಿಎಐ) ಜೊತೆಗೂಡಿ ಆಯೋಜಿಸಲಿದೆ.
ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಕಾಫಿ ಬೆಳೆಗಾರರು, ಕಾಫಿ ಬ್ರ್ಯಾಂಡ್‌ಗಳು, ಅಗತ್ಯ ಉಪಕರಣಗಳ ತಯಾರಕರು, ಗ್ರಾಹಕರು ಒಂದೆಡೆ ಸೇರಲಿದ್ದಾರೆ ಎಂದು ಅವರು ತಿಳಿಸಿದರು.
ದೇಶದ ಒಟ್ಟು ಕಾಫಿ ಬಳಕೆಯಲ್ಲಿ ದಕ್ಷಿಣ ಭಾರತದ ಪಾಲು ಶೇ 75ರಿಂದ ಶೇ 80ರಷ್ಟು ಇದೆ. ಭಾರತದಲ್ಲಿ ತಲಾವಾರು ಕಾಫಿ ಬಳಕೆಯು ವರ್ಷಕ್ಕೆ 0.07 ಕೆ.ಜಿ.ಯಷ್ಟು ಇದೆ. ಜಾಗತಿಕ ಮಟ್ಟದಲ್ಲಿ ಇದು 1.3 ಕೆ.ಜಿ.ಯಷ್ಟಿದೆ. ಅಂದರೆ ಭಾರತದಲ್ಲಿ ಕಾಫಿ ಮಾರುಕಟ್ಟೆಗೆ ಬೆಳವಣಿಗೆ ಕಾಣಲು ಇನ್ನೂ ಬಹಳಷ್ಟು ಅವಕಾಶ ಇದೆ ಎಂದು ಅವರು ಹೇಳಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-4-17892256