
Chandragrahana 2026: ವರ್ಷದ ಕೊನೆಯ ಚಂದ್ರಗಹಣ ಈ ರಾಶಿಯವರಿಗೆ ಅಶುಭ: ಪರಿಹಾರ ಕಾರ್ಯಗಳು ಹೀಗಿರಲಿ
Chandragrahana 2026: ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಆಗಸ್ಟ್ 28ರಂದು ಸಂಭವಿಸಲಿದೆ. ವಿಶೇಷವೆಂದರೆ ಅಂದೇ ರಕ್ಷಾ ಬಂಧನ ಕೂಡಾ ಇದೆ.ರಕ್ಷಾ ಬಂಧನದ ದಿನವೇ ಚಂದ್ರಗ್ರಹಣ ಬಂದಿರುವುದು ಶುಭವೋ, ಅಶುಭವೋ ಎಂಬ ಚರ್ಚೆ ಕೂಡಾ ಈಗಾಗಲೇ ಆರಂಭವಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಳಿಗ್ಗೆ 8:04ಕ್ಕೆ ಗ್ರಹಣ ಆರಂಭವಾಗಲಿದೆ. ಬೆಳಗ್ಗೆ 11:22ಕ್ಕೆ ಗ್ರಹಣ ಕೊನೆಗೊಳ್ಳಲಿದೆ. ಗ್ರಹಣದ ಮಧ್ಯದ ಅವಧಿ ಬೆಳಗ್ಗೆ 9:43. ಗ್ರಹಣದ ಒಟ್ಟು ಅವಧಿ 3 ಗಂಟೆ 18 ನಿಮಿಷ ಆಗಿರಲಿದೆ.
ಗ್ರಹಣ ಗೋಚರ ಎಲ್ಲಿ ಆಗಲಿದೆ ?
ಭಾರತದಲ್ಲಿ ಚಂದ್ರಗ್ರಹಣ ಕಾಣಿಸುವುದಿಲ್ಲ. ನೈರುತ್ಯ ಏಷ್ಯಾ ಅಂದರೆ ಪಾಕಿಸ್ತಾನ, ಇರಾನ್, ಸೌದಿ ಆರೇಬಿಯಾ, ಅಮೆರಿಕ, ಯುರೋಪ್, ಆಫ್ರಿಕಾ ಮತ್ತು ಪೆಸಿಫಿಕ್ ಮಹಾಸಾಗರ ಪ್ರದೇಶದಲ್ಲಿ ಚಂದ್ರಗ್ರಹಣ ಕಾಣಿಸಲಿದೆ. ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ, ಭಾರತದಲ್ಲಿ ಗ್ರಹಣದ ಸೂತಕದ ವಿಚಾರ ಇರುವುದಿಲ್ಲ. ದೇವಸ್ಥಾನಗಳಲ್ಲಿ ಪೂಜೆ, ಆರತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ದೇವಸ್ಥಾನಗಳು ಎಂದಿನಂತೆ ತೆರೆದಿರಲಿವೆ. ಆದರೂ ಜ್ಯೋತಿಷ್ಯದಲ್ಲಿ ಇದರ ಪ್ರಭಾವವನ್ನು ವಿಶೇಷವಾಗಿ ಪರಿಗಣಿಸಲಾಗುತ್ತದೆ.
ಯಾವ ರಾಶಿಯ ಮೇಲೆ ಗ್ರಹಣ ಪ್ರಭಾವ ?
ಈ ಚಂದ್ರಗ್ರಹಣವು ಶನಿಯ ಅಧಿಪತ್ಯದ ಕುಂಭ ರಾಶಿ ಹಾಗೂ ರಾಹುವಿನ ಅಧಿಪತ್ಯದ ಶತಭಿಷ ನಕ್ಷತ್ರದಲ್ಲಿ ಸಂಭವಿಸಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಣದಲ್ಲಿ ಶನಿ ಹಾಗೂ ರಾಹುವಿನ ಪ್ರಭಾವ ಇದೆ. ಹಾಗಾಗಿ ಇದು ಕೆಲವು ರಾಶಿಯವರಿಗೆ ಸವಾಲಿನ ಸನ್ನಿವೇಶ ಸೃಷ್ಟಿಸಬಹುದು ಎಂದು ಜ್ಯೋತಿಷ್ಯದಲ್ಲಿ ಹೇಳಲಾಗಿದೆ. ಈ ಸಲದ ಚಂದ್ರಗ್ರಹಣವು ಕೆಲವು ರಾಶಿಯವರ ಮೇಲೆ ಪರಿಣಾಮ ಬೀರಲಿದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಆ ರಾಶಿಗಳು ಯಾವುವು ನೋಡೋಣ.
ಚಂದ್ರಗ್ರಹಣದ ಪರಿಣಾಮ ವೃಷಭ ರಾಶಿಗೆ ಬೀಳಲಿದೆ. ಈ ರಾಶಿಯವರು ವಿಶೇಷವಾಗಿ ಮಾತುಕತೆ ಮತ್ತು ಹಣಕಾಸು ವಿಷಯದಲ್ಲಿ ಜಾಗರೂಕರಾಗಿರಬೇಕು. ಜಗಳ, ವಿವಾದಗಳಿಗೆ ಹೋಗಲೇಬಾರದು. ಸಿಟ್ಟು, ಕೋಪ, ತಾಪಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಹಣ ಸಾಲ ನೀಡುವ ಮೊದಲು ಹತ್ತು ಸಲ ಯೋಚನೆ ಮಾಡಿ. ಆತುರಕ್ಕೆ ಬಿದ್ದು ಮಾತಾಡುವ ಅನಾಹುತ ಮಾಡಿಕೊಳ್ಳಲೇ ಬೇಡಿ. ಹಣಕಾಸು ವಿಷಯದಲ್ಲಿನ ನಿಮ್ಮ ನಿರ್ಧಾರದಿಂದಾಗಿ ಸಂಬಂಧಗಳಲ್ಲಿ ಬಿರುಕು ಸೃಷ್ಟಿಸಬಹುದು. ನಿಮ್ಮನ್ನು ಹಣಕಾಸು ಸಂಕಷ್ಟಕ್ಕೂ ತಳ್ಳಬಹುದು.
ಚಂದ್ರ ಕರ್ಕ ರಾಶಿಯ ಒಡೆಯ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕ ರಾಶಿಯವರ ಮೇಲೆ ಗ್ರಹಣ ಪರಿಣಾಮ ಬೀರಲಿದೆ. ಚಂದ್ರಗ್ರಹಣದ ಅವಧಿಯಲ್ಲಿ ಅನಗತ್ಯ ಆತಂಕಕ್ಕೆ ಅವಕಾಶ ಕೊಡಬೇಡಿ. ಒತ್ತಡ ಬೇಡವೇ ಬೇಡ. ಕುಟುಂಬ, ಪರಿವಾರದ ಜೊತೆ ನಿಯಮಿತವಾಗಿ ಮಾತನಾಡುತ್ತಿರಿ. ಸಾಕಷ್ಟು ವಿಶ್ರಾಂತಿಗೆ ಮೊದಲ ಆದ್ಯತೆ ನೀಡಿ.
ಸೂರ್ಯದೇವ ಸಿಂಹ ರಾಶಿಗೆ ಒಡೆಯ. ಸೂರ್ಯ ಮತ್ತು ಚಂದ್ರನಿಗೆ ಪರಿಸ್ಪರ ಸಂಬಂಧ ಇದೆ. ಸಿಂಹ ರಾಶಿಯವರು ಗ್ರಹಣ ಸಂದರ್ಭದಲ್ಲಿ ಆಕ್ರಮಣ ಪ್ರವೃತ್ತಿ ತೋರಿಸಬಾರದು. ಹಿರಿಯರ ಜೊತೆ ಅನಗತ್ಯ ವಾದ ಬೇಡ. ಎಲ್ಲರ ಜೊತೆ ಶಾಂತಿಚಿತ್ತದಿಂದ ವ್ಯವಹರಿಸಿ. ಯಾವುದೇ ಹೇಳಿಕೆ ನೀಡುವ ಮೊದಲು ಹತ್ತು ಸಲ ಯೋಚನೆ ಮಾಡಿ.
ವೃಶ್ಚಿಕ ರಾಶಿ (Scorpio)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಶ್ಚಿಕ ರಾಶಿಯು ದುರ್ಬಲ ಚಂದ್ರನೊಂದಿಗೆ ಸಂಬಂಧ ಹೊಂದಿದೆ. ಹಾಗಾಗಿ, ಗ್ರಹಣ ಸಂದರ್ಭದಲ್ಲಿ ವೃಶ್ಚಿಕ ರಾಶಿಯವರು ವಿಶೇಷ ಎಚ್ಚರಿಕೆವಹಿಸಬೇಕು. ಹಣಕಾಸು, ಕೌಟುಂಬಿಕ ವಿಚಾರಗಳಲ್ಲಿ ಮತ್ತು ವಿಶ್ವಾಸದ ವಿಚಾರಗಳಲ್ಲಿ ವಿಶೇಷ ಎಚ್ಚರಿಕೆ ವಹಿಸಲೇಬೇಕು. ಪ್ರಮುಖ ಹಣಕಾಸು ನಿರ್ಧಾರ ಕೈಗೊಳ್ಳಬೇಡಿ. ಸುಖಾಸುಮ್ಮನೆ ಯಾರನ್ನೂ ನಂಬಬೇಡಿ.
ಗ್ರಹಣ ಗ್ರಹಚಾರ ಕಡಿಮೆಯಾಗಬೇಕಾದರೆ, ಗ್ರಹಣ ಸಂದರ್ಭದಲ್ಲಿ ಶಿವನ ಆರಾಧನೆ ಮುಖ್ಯ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ತಾಯಿಯ ಮಾತು ಕೇಳಿ, ಅವರಿಗೆ ಹೆಚ್ಚಿನ ಗೌರವ ನೀಡಿ ಎನ್ನುತ್ತದೆ ಶಾಸ್ತ್ರ. ನಿಮ್ಮ ಜಾತಕದಲ್ಲಿ ಚಂದ್ರ ದುರ್ಬಲವಾಗಿದ್ದರೆ, ಬಿಳಿ ವಸ್ತುವನ್ನು ದಾನವಾಗಿ ನೀಡಬಹದು. ಚಂದ್ರನ ಕುರಿತ ಮಂತ್ರ ಪಠಿಸಿ. ಸಾಧ್ಯವಾದಷ್ಟು ಶಾಂತವಾಗಿರುವಂತೆ ಜ್ಯೋತಿಷ್ಯ ಶಾಸ್ತ್ರ ಸಲಹೆ ಮಾಡುತ್ತದೆ.