ಬಾಲಿವುಡ್‌ ನಟರಿಗಿಂತ ಕಟೆಂಟ್‌ ಕ್ರಿಯೇಟರ್‌ ಆದಾಯವೇ ಹೆಚ್ಚು: ಸ್ಫೋಟಕ ಮಾಹಿತಿ ಶೇರ್‌ ಮಾಡಿದ ರಣವೀರ್‌ ಅಲ್ಲಾಬಾಡಿಯಾ

ಬಾಲಿವುಡ್‌ ನಟರಿಗಿಂತ ಕಟೆಂಟ್‌ ಕ್ರಿಯೇಟರ್‌ ಆದಾಯವೇ ಹೆಚ್ಚು: ಸ್ಫೋಟಕ ಮಾಹಿತಿ ಶೇರ್‌ ಮಾಡಿದ ರಣವೀರ್‌ ಅಲ್ಲಾಬಾಡಿಯಾ

ಬಾಲಿವುಡ್‌ ನಟರಿಗಿಂತ ಕಟೆಂಟ್‌ ಕ್ರಿಯೇಟರ್‌ ಆದಾಯವೇ ಹೆಚ್ಚು: ಸ್ಫೋಟಕ ಮಾಹಿತಿ ಶೇರ್‌ ಮಾಡಿದ ರಣವೀರ್‌ ಅಲ್ಲಾಬಾಡಿಯಾ

ಇಂದು ಎಲ್ಲರಿಗೂ ಹಣ ಬೇಕು. ಕೆಲಸಕ್ಕೆ ಸೇರುವಾಗ ಪ್ರತಿಯೊಬ್ಬರೂ ನೋಡುವುದು ಪ್ಯಾಕೇಜ್‌ ಎಷ್ಟು ಎನ್ನುವುದನ್ನೇ. ಇದೇ ಕಾರಣಕ್ಕೆ ಕೆಲಸವನ್ನು ಬದಲಾಯಿಸುತ್ತಾ ಇರುವವರೂ ಇದ್ದಾರೆ. ಸ್ವಂತ ವ್ಯವಹಾರ ಆರಂಭಿಸಿದರೆ ಲಾಭ ಹೆಚ್ಚು, ಆದಾಯ ಹೆಚ್ಚು ಎನ್ನುವ ಲೆಕ್ಕಾಚಾರ ಹಾಕುವವರೂ ಇದ್ದಾರೆ. ಇನ್ನು, ಸಿನಿಮಾ ರಂಗದಲ್ಲಿ ಇರುವವರು ತುಂಬಾ ಹಣ ಗಳಿಸುತ್ತಾರೆ ಎನ್ನುವ ನಂಬಿಕೆಯೂ ಬಹಳಷ್ಟು ಮಂದಿಯಲ್ಲಿದೆ. ಆದರೆ ಇದು ಸುಳ್ಳು ಎನ್ನುತ್ತಾರೆ ರಣವೀರ್ ಅಲ್ಲಾಬಾಡಿಯಾ.

ರಣವೀರ್ ಅಲ್ಲಾಬಾಡಿಯಾ ಕಟೆಂಟ್‌ ಕ್ರಿಯೇಟರ್.‌ ಇವರು ಇತ್ತೀಚೆಗೆ ಸೋಶಿಯಲ್‌ ಮಿಡಿಯಾದಲ್ಲಿ ಒಂದು ಪೋಸ್ಟ್‌ ಹಾಕಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಬಾಲಿವುಡ್ ಮತ್ತು ಕಟೆಂಟ್‌ ಕ್ರಿಯೇಟರ್‌ ಆದಾಯವನ್ನು ಹೋಲಿಸಿ ಮಾತನಾಡಿದ್ದಾರೆ. ಇವರ ಪ್ರಕಾರ, ಸಿನಿಮಾರಂಗದಲ್ಲಿರುವವರಿಗೆ ಹೆಚ್ಚು ಆದಾಯ ಬರುತ್ತದೆ ಎನ್ನುವುದು ತಪ್ಪು. ಚಲನಚಿತ್ರೋದ್ಯಮಕ್ಕಿಂತ ಡಿಜಿಟಲ್ ಪ್ಲಾಟ್‌ಫಾರಂನಲ್ಲಿ ಉತ್ತಮ ಸಂಬಳ ಸಿಗುವ ವೃತ್ತಿಜೀವನವನ್ನು ಕಟ್ಟಿಕೊಳ್ಳಬಹುದು. ಇದು ಹೆಚ್ಚು ಆದಾಯ ಗಳಿಸಲು ಅವಕಾಶ ನೀಡುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾತನಾಡಿದ ರಣವೀರ್, ಬಾಲಿವುಡ್‌ನಲ್ಲಿ ದೊಡ್ಡ ಸ್ಥಾನ ಗಳಿಸುವುದು ಅಷ್ಟು ಸುಲಭ ಅಲ್ಲ ಎಂದಿದ್ದಾರೆ. ಉನ್ನತ ಸ್ಥಾನದಲ್ಲಿರುವ ಕೆಲವೇ ಕೆಲವು ನಟರು ಮಾತ್ರ ದೊಡ್ಡ ಮೊತ್ತದ ಹಣವನ್ನು ಗಳಿಸುತ್ತಾರೆ ಎಂದು ಹೇಳಿದ್ದಾರೆ. ರಣವೀರ್ ಪ್ರಕಾರ, ಚಿತ್ರೋದ್ಯಮದಲ್ಲಿ ಕೆಲಸ ಮಾಡುವವರಿಗಿಂತ ಕಟೆಂಟ್‌ ಕ್ರಿಯೇಟರ್‌ಗಳು ಹೆಚ್ಚಿನ ಹಣ ಗಳಿಸುತ್ತಾರೆ. ಕಟೆಂಟ್‌ ಕ್ರಿಯೇಶನ್‌ನಲ್ಲಿ ಅವರಿಗೆ ಹೆಚ್ಚಿನ ಅವಕಾಶಗಳು ಇರುತ್ತದೆ.

ಸಾಮಾನುವಾಗಿ ಜನರು ಚಲನಚಿತ್ರೋದ್ಯಮದಲ್ಲಿರುವವರು ಕಟೆಂಟ್‌ ಕ್ರಿಯೇಟರ್‌ಗಿಂತ ಹೆಚ್ಚು ಗಣ ಗಳಿಸುತ್ತಾರೆ ಎನ್ನುವ ಭಾವನೆಯನ್ನೇ ಇಟ್ಟುಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಹಾಗಿಲ್ಲ. ಬಾಲಿವುಡ್‌ನ ಅತ್ಯಂತ ಉನ್ನತ ಸ್ಥಾನದಲ್ಲಿರುವ ಸುಮಾರು ಮೂವತ್ತು ಜನರು ಮಾತ್ರ ಹೆಚ್ಚು ಹಣ ಗಳಿಸುತ್ತಿರಬಹುದು. ಆದರೆ ಕಟೆಂಟ್‌ ಕ್ರಿಯೇಶನ್‌ ಮೂಲಕ ಸಾವಿರಾರು ಮಂದಿ ಸುಸ್ಥಿರವಾದ ಆದಾಯವನ್ನು ಪಡೆದುಕೊಳ್ಳಬಹುದು. ಇಲ್ಲಿ ಹೆಚ್ಚಿನ ಹಣ ಗಳಿಸುವುದಕ್ಕೆ ಅವಕಾಶ ಸಿಗುತ್ತದೆ ಎಂದು ಹೇಳಿದ್ದಾರೆ.

ಕಟೆಂಟ್‌ ಕ್ರಿಯೇಟರ್‌ ಮನರಂಜನೆ ಮತ್ತು ಮಾಧ್ಯಮ ಕ್ಷೇತ್ರದ ಪ್ರಮುಖ ಭಾಗವಾಗುತ್ತಿರುವ ಹೊತ್ತಿನಲ್ಲಿಯೇ ರಣವೀರ್‌ ಸೋಶಿಯಲ್‌ ಮಿಡಿಯಾ ಪೋಸ್ಟ್‌ ವೈರಲ್‌ ಆಗುತ್ತಿದೆ. YouTube, ಪಾಡ್‌ಕ್ಯಾಸ್ಟ್‌ಗಳು, Instagram ಮತ್ತು ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಕಟೆಂಟ್‌ ಕ್ರಿಯೇಟರ್‌ಗಳಿಗೆ ನೇರವಾಗಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯಲು ಮತ್ತು ಹಲವಾರು ಮೂಲಗಳ ಮೂಲಕ ಗಳಿಸಲು ಅವಕಾಶ ಮಾಡಿಕೊಟ್ಟಿವೆ.

ಬೀರ್‌ಬೈಸೆಪ್ಸ್ ಎಂದೇ ಜನಪ್ರಿಯರಾಗಿರುವ ರಣವೀರ್, ಕಟೆಂಟ್‌ ಕ್ರಿಯೇಟರ್‌ ಆರ್ಥಿಕತೆಯು ದೊಡ್ಡ ವೃತ್ತಿಜೀವನವಾಗಿ ಹೇಗೆ ಬೆಳೆಯಬಹುದು ಎಂಬುದಕ್ಕೆ ಸ್ವತಃ ಉದಾಹರಣೆಯಾಗಿದೆ. ಇವರು, ಮೊದಲು ಫಿಟ್‌ನೆಸ್ ಮತ್ತು ಜೀವನಶೈಲಿ ವೀಡಿಯೊಗಳಿಂದ ಗಮನ ಸೆಳೆದರು. ನಂತರ ನಿಧಾನವಾಗಿ ಸೆಲ್ಫ್‌ ಇಂಪ್ರುವ್ಮೆಂಟ್‌, ಫೈನಾನ್ಸ್‌, ಉದ್ಯಮಶೀಲತೆ ಮತ್ತು ಆಧ್ಯಾತ್ಮಿಕತೆಯಂತಹ ಕಟೆಂಟ್‌ಗಳತ್ತ ಗಮನ ಹರಿಸಿದ್ದಾರೆ.

ನಂತರ ಅವರು ದಿ ರಣವೀರ್ ಶೋ ಮೂಲಕ ಹೆಸರುವಾಸಿಯಾದರು. ಅಲ್ಲಿ ಅವರು ಬಾಲಿವುಡ್, ವ್ಯವಹಾರ, ಕ್ರೀಡೆ ಮತ್ತು ಇತರ ಕ್ಷೇತ್ರಗಳ ಸೆಲೆಬ್ರಿಟಿಗಳನ್ನು ಸಂದರ್ಶಿಸಿದ್ದಾರೆ. ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ಮತ್ತು ಡಿಜಿಟಲ್ ಮಿಡಿಯಾ ಕಂಪನಿಯಾದ ಮಾಂಕ್ ಎಂಟರ್ಟೈನ್ಮೆಂಟ್ ಅನ್ನು ಸಹ-ಸ್ಥಾಪಿಸಿದರು.

ಅವರ ಈ ಜರ್ನಿಯಲ್ಲಿ ಸವಾಲುಗಳಿರಲಿಲ್ಲ ಎಂದಲ್ಲ. ಫೆಬ್ರವರಿ 2025ರಲ್ಲಿ, ಹಾಸ್ಯನಟ ಸಮಯ್ ರೈನಾ ಅವರ ಯೂಟ್ಯೂಬ್ ಶೋ ಇಂಡಿಯಾಸ್ ಗಾಟ್ ಲ್ಯಾಟೆಂಟ್‌ನಲ್ಲಿ ಕಾಣಿಸಿಕೊಂಡ ನಂತರ ಅವರು ಭಾರೀ ಟೀಕೆಗಳನ್ನು ಎದುರಿಸಬೇಕಾಯಿತು. ಅವರು ಸ್ಪರ್ಧಿಯೊಬ್ಬರಿಗೆ ಕೇಳಿದ ಪ್ರಶ್ನೆಯು ವೈರಲ್ ಆಗಿ, ಕ್ಷಮೆಯಾಚನೆ ಕೇಳಬೇಕಾಯಿತು. ಪೊಲೀಸ್ ದೂರುಗಳು ಮತ್ತು ಕಾನೂನು ಕ್ರಮಗಳವರೆಗೂ ಹೋಗಿತ್ತು.

ನಂತರ ಸುಪ್ರೀಂ ಕೋರ್ಟ್ ಮಾರ್ಚ್ 2025 ರಲ್ಲಿ ಅವರ ಪಾಡ್‌ಕ್ಯಾಸ್ಟ್ ಅನ್ನು ಪುನರಾರಂಭಿಸಲು ಅನುಮತಿ ನೀಡಿತು. ಸಭ್ಯತೆಯನ್ನು ಕಾಪಾಡಿಕೊಳ್ಳಲು ಸಂಬಂಧಿಸಿದ ಷರತ್ತುಗಳೊಂದಿಗೆ ಈ ಅನುಮತಿ ನೀಡಿತ್ತು.

social media viral money

social media viral money

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ