ಮಾಯಕೊಂಡ‌: ಹೊಲದಲ್ಲೇ ಕೊಳೆಯುತ್ತಿರುವ ಟೊಮೆಟೊ ಫಸಲು...

ಮಾಯಕೊಂಡ‌: ಹೊಲದಲ್ಲೇ ಕೊಳೆಯುತ್ತಿರುವ ಟೊಮೆಟೊ ಫಸಲು...

ಮಾಯಕೊಂಡ‌: ಹೊಲದಲ್ಲೇ ಕೊಳೆಯುತ್ತಿರುವ ಟೊಮೆಟೊ ಫಸಲು...

ಮಾಯಕೊಂಡ: ಬಳ್ಳಿಯ ತುಂಬಾ ಸಮೃದ್ಧವಾದ ಬೆಳೆ, ಫಸಲಿನ ಭಾರಕ್ಕೆ ಜೋತು ಬಿದ್ದಿರುವ ಗಿಡ, ಕಣ್ಮನ ಸೆಳೆಯುವ ಟೊಮೆಟೊ ಹಣ್ಣುಗಳು... ಆದರೆ, ದರ ಕುಸಿತದಿಂದ ಕಟಾವು ಮಾಡದೆ ಬಳ್ಳಿಯಲ್ಲಿಯೇ ಕೊಳೆಯಲು ಬಿಡುವ ಸ್ಥಿತಿ ರೈತರದ್ದು.

ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಬೆಳೆದ ಟೊಮೆಟೊ 25 ಕೆ.ಜಿ.ಯ ಒಂದು ಬಾಕ್ಸ್‌ಗೆ ಕೇವಲ ₹ 100 ದರ ಇದೆ. ಕೊಯ್ಲಿನ ಹಣವೂ ವಾಪಸ್ ಬರುತ್ತಿಲ್ಲ. ಇದರಿಂದ ರೈತರು ಕಟಾವು ಮಾಡದೆ ತೋಟದಲ್ಲಿ ಹಾಗೆಯೇ ಬಿಟ್ಟಿದ್ದಾರೆ.

ಸಸಿ, ಉಳುಮೆ, ನಾಟಿ, ಕೊಟ್ಟಿಗೆ ಗೊಬ್ಬರ, ರಸಗೊಬ್ಬರ, ಕೀಟನಾಶಕ, ಗೂಟ, ತಂತಿ, ಬಳ್ಳಿ‌ಕಟ್ಟುವ ದಾರ, ಕೂಲಿ ಸೇರಿ ಎಕರೆಗೆ ಸರಿಸುಮಾರು ₹ 1 ಲಕ್ಷ ವೆಚ್ಚ ತಗುಲುತ್ತದೆ. ಕಟಾವು ಮುಗಿಸಿ ಮಾರುಕಟ್ಟೆಗೆ ಸಾಗಿಸುವ ವೇಳೆಗೆ ಖರ್ಚು ₹ 1.5 ಲಕ್ಷದ ಗಡಿ ದಾಟುತ್ತಿದೆ. ಈಗಿನ ದರ ಲೆಕ್ಕ ಹಾಕಿದರೆ ಒಂದು ರೂಪಾಯಿಯೂ ಬಾರದ ಸ್ಥಿತಿ ಇದೆ.

ಪ್ರತಿ ಎಕರೆಗೆ 8,000ದಿಂದ 10,000 ಸಸಿಗಳು ಬೇಕು. ಪ್ರತೀ ಸಸಿಗೆ 80 ಪೈಸೆಯಿಂದ ₹ 1 ದರ ಇದೆ. ಒಂದು ಬಿದಿರಿನ ಗೂಟಕ್ಕೆ ₹ 18ರಿಂದ ₹ 20 ಇದ್ದು, ಎಕರೆಗೆ 2,000 ಗೂಟ ಬೇಕಾಗುತ್ತವೆ. ವೈರ್‌ ಕೆ.ಜಿ.ಗೆ ₹ 100 ಇದ್ದು, 20 ಕೆ.ಜಿ. ಅಗತ್ಯವಿದೆ. ಬಳ್ಳಿ ಕಟ್ಟುವ ದಾರದ ದರ ಕೇಳುವಂತಿಲ್ಲ. ₹ 80ರಿಂದ ₹ 100 ಇದ್ದ ಬೆಲೆ ಈಗ ₹ 250 ಗಡಿ ದಾಟಿದೆ. ಎಕರೆಗೆ ಬಳ್ಳಿ ಕಟ್ಟಲು 100 ಕೆ.ಜಿ. ದಾರದ ಅವಶ್ಯಕತೆ ಇದೆ ಎನ್ನುತ್ತಾರೆ ರೈತರು.

ಭೂಮಿಯ ಸಿದ್ಧತೆ, ಸಸಿ ನಾಟಿ, ಗೂಟ ನೆಡಲು, ಬಳ್ಳಿ ಕಟ್ಟಲು, ರಸಗೊಬ್ಬರ, ಕೀಟನಾಶಕ ಸಿಂಪಡಣೆ, ನೀರು ನಿರ್ವಹಣೆ ಸೇರಿದಂತೆ ₹ 1 ಲಕ್ಷಕ್ಕೂ ಹೆಚ್ಚು ಖರ್ಚು ಬರುತ್ತಿದೆ. ಆದರೆ ಮಾರುಕಟ್ಟೆಯಲ್ಲಿ 25 ಕೆ.ಜಿ. ಒಂದು ಬಾಕ್ಸ್ ಟೊಮಾಟೊ ದರ ₹ 80ರಿಂದ ₹ 100 ಇದ್ದು, ಮಾರುಕಟ್ಟೆಗೆ ಸಾಗಿಸುವ ಖರ್ಚೇ ₹ 30 ಆಗುತ್ತದೆ. ರೈತನಿಗೆ ಏನೂ ಸಿಗದಂತಾಗಿದೆ ಎಂಬುದು ಬೆಳಗಾರರ ಅಳಲು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-43-1577826634

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ