ಮಂಗಳೂರು | ರಾಯರ ಆರಾಧನೆ: ಕಾರ್ಯಕ್ರಮ ವೈವಿಧ್ಯ

ಮಂಗಳೂರು | ರಾಯರ ಆರಾಧನೆ: ಕಾರ್ಯಕ್ರಮ ವೈವಿಧ್ಯ

ಮಂಗಳೂರು | ರಾಯರ ಆರಾಧನೆ: ಕಾರ್ಯಕ್ರಮ ವೈವಿಧ್ಯ

ಮಂಗಳೂರು: ನಗರದ ಜೋಡುಮಠ ರಸ್ತೆಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಬೃಂದಾವನ ಟ್ರಸ್ಟ್ ಆಯೋಜಿಸಿರುವ ರಾಘವೇಂದ್ರಗುರು ಸಾರ್ವಭೌಮರ 3 ದಿನಗಳ ಆರಾಧನಾ ಮಹೋತ್ಸವ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಶನಿವಾರ ಆರಂಭಗೊಂಡಿತು. 

ಬೆಳಿಗ್ಗೆ ಕೂಟಮಹಾಜಗತ್ತು ಶ್ರೀ ಗುರು ಭಜನಾ ಬಳಗ, ಸಮತಾ ಬಳಗ, ಸಂಜೆ ಶ್ರೀ ದೇವಿ ಭಜನಾ ಮಂಡಳಿ, ಶ್ರೀ ಹಯಗ್ರೀವ ಭಜನಾ ಮಂಡಳಿ ಪ್ರಸ್ತುತಪಡಿಸಿದ ಭಜನೆ ಭಕ್ತಿಭಾವ ಹಬ್ಬಿತು. ಬೆಳಿಗ್ಗೆ ತಡಂಬೈಲು ದುರ್ಗಾಂಬ ಯಕ್ಷಗಾನ ಮಂಡಳಿಯವರು ವಾಲಿ ಮೋಕ್ಷ ತಾಳಮದ್ದಳೆ ನಡೆಸಿಕೊಟ್ಟರು. ಸಂಜೆ ಕದ್ರಿ ಮಹಿಳಾ ಯಕ್ಷಕೂಟದವರ ತಾಳಮದ್ದಳೆ ‘ಧ್ರುವ ಚರಿತ್ರೆ’ಯು ಧ್ರುವನ ಹರಿಭಕ್ತಿಯ ವೈಭವ ಸಾರಿತು. 

ಶ್ರೀನಿವಾಸ ಐಗಳ್ ತಂಡದ ಭಕ್ತಿಗೀತೆ, ಗೋಪಾಲಕೃಷ್ಣ ಬಳಗದ ಸುಗಮ ಸಂಗೀತ ಕಾರ್ಯಕ್ರಮಗಳೂ ಮನಮುದಗೊಳಿಸಿದವು. 

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ