
ಉಡುಪಿ ಜಿಲ್ಲೆಯಾದ್ಯಂತ ನಾಗರ ಪಂಚಮಿ ಸಂಭ್ರಮ
ಉಡುಪಿ: ಜಿಲ್ಲೆಯಾದ್ಯಂತ ನಾಗರ ಪಂಚಮಿ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆಯಿಂದಲೇ ನಾಗರಕಟ್ಟೆ, ನಾಗಬನಗಳಿಗೆ ತೆರಳಿ ಜನರು ನಾಗರ ಮೂರ್ತಿಗಳಿಗೆ ತನು ಅರ್ಪಿಸಿದರು.
ಭಕ್ತರು ಸಮರ್ಪಿಸಿದ್ದ ಎಳನೀರು, ಹಾಲನ್ನು ಅರ್ಚಕರು ನಾಗರ ಮೂರ್ತಿಗಳಿಗೆ ಅಭಿಷೇಕ ಮಾಡಿದರು. ನಾಗರ ಮೂರ್ತಿಗಳಿಗೆ ಅರಶಿನ, ಕುಂಕುಮ ಹಚ್ಚಿ ಹೂಗಳಿಂದ ಅಲಂಕರಿಸಲಾಗಿತ್ತು.
ಜಿಲ್ಲೆಯ ಸುಬ್ರಹ್ಮಣ್ಯ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನಡೆದವು.