
ಸೈಕಲ್ ಓಡಿಸಿ–ಆರೋಗ್ಯ ಗಳಿಸಿ: ಶಾಸಕ ಜಗದೀಶ ಗುಡಗುಂಟಿ ನೇತೃತ್ವದಲ್ಲಿ ಹೊಸ ಪ್ರಯತ್ನ
ಜಮಖಂಡಿ: ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸೈಕಲ್ ಸವಾರಿ ಸರಳ ಹಾಗೂ ಪರಿಣಾಮಕಾರಿ ವ್ಯಾಯಾಮವಾಗಿದೆ ಜೊತೆಗೆ ಇಂಧನ ಉಳಿತಾಯ, ಟ್ರಾಫಿಕ್ ಕಿರಿಕಿರಿ ಸೇರಿದಂತೆ ಹಲವಾರು ತೊಂದರೆಗಳಿಂದ ಮುಕ್ತಿ ಕಂಡುಕೊಳ್ಳಲು ಸೈಕಲ್ ಸವಾರಿ ಪ್ರಾರಂಭಿಸುತ್ತಿರುವುದು ವಿಶೇಷವಾಗಿದೆ.
ಜಮಖಂಡಿ ತಾಲ್ಲೂಕಿನಲ್ಲಿ 78 ಸಾವಿರ ಬೈಕ್‌ಗಳಿದ್ದು ಪ್ರತಿನಿತ್ಯ ಒಂದು ಬೈಕ್‌ಗೆ ಒಂದು ಲೀಟರ್ ಪೆಟ್ರೋಲ್ ಉಳಿಸಿದರೆ ಅಂದಾಜು ಪ್ರತಿದಿನ 78 ಸಾವಿರ ಲೀಟರ್ ಪೆಟ್ರೋಲ್ ಉಳಿಸಿದಂತಾಗುತ್ತದೆ, ಅಂದಾಜು 80 ಲಕ್ಷ ಹಣದ ವಹಿವಾಟು ಉಳಿಸಿದಂತಾಗುತ್ತದೆ, ಒಂದು ತಿಂಗಳಿಗೆ ಕೋಟಿಗಟ್ಟಲೆ ಹಣ ಉಳಿಸಬಹುದಾಗಿದೆ.
12 ಸಾವಿರ ನಾಲ್ಕು ಚಕ್ರದ ವಾಹನಗಳಿದ್ದು ಪ್ರತಿದಿನ ಅಂದಾಜು ಒಂದು ವಾಹನಕ್ಕೆ ಒಂದು ಸಾವಿರ ಪೆಟ್ರೋಲ್- ಡೀಸೆಲ್ ಹಿಡಿದರೂ ₹ 1.20 ಕೋಟಿ, ಒಂದು ತಿಂಗಳಿಗೆ ₹ 438 ಕೋಟಿ ಖರ್ಚಾಗುತ್ತಿದ್ದು ಇದರಲ್ಲಿ ಅರ್ಧದಷ್ಟು ಉಳಿತಾಯ ಮಾಡಿದರೆ ₹ 200ಕೋಟಿ ಉಳಿಸಬಹುದು ಜನರು ಈ ಬಗ್ಗೆ ವಿಚಾರಿಸಿ ಜಾಗೃತರಾಗಬೇಕು.
ಜನರು ಮುಜುಗರ ಪಡಬಾರದು ಎಂಬ ಕಾರಣಕ್ಕೆ ಶಾಸಕ ಜಗದೀಶ ಗುಡಗುಂಟಿ ಪರಿವಾರದಿಂದ ಸ್ವಂತ ಖರ್ಚಿನಲ್ಲಿ 100 ಸೈಕಲ್‌ಗಳನ್ನು ಖರೀದಿ ಮಾಡಿ ಅಧಿಕಾರಿಗಳು ಹಾಗೂ ಮುಖಂಡರಿಗೆ ಹಂಚಿಕೆ ಮಾಡುತ್ತಿದ್ದಾರೆ.
ಶಾಸಕ ಜಗದೀಶ ಗುಡಗುಂಟಿ ಇದೇ 15 ರಂದು ಧ್ವಜಾರೋಹಣ ಕಾರ್ಯಕ್ರಮಕ್ಕೆ ಸೈಕಲ್ ಮೇಲೆ ಬಂದು, ನಂತರದ ದಿನಗಳಲ್ಲಿ ನಗರದ ಸರ್ಕಾರಿ ಸಭೆ, ವಿವಿಧ ಕಾರ್ಯಕ್ರಮಗಳಿಗೆ ತೆರಳಲು ಸೈಕಲ್ ಮೇಲೆ ಹೋಗುವುದಾಗಿ ತಿಳಿಸಿದ್ದು ಅಧಿಕಾರಿಗಳು ತಮ್ಮ ಕಚೇರಿಗೆ ಬರುವಾಗ ಹಾಗೂ ವಿವಿಧ ಮುಖಂಡರು, ನಗರದ ಪ್ರಮುಖ ಗಣ್ಯರು ಸೈಕಲ್ ಬಳಸಿ ಆರೋಗ್ಯ ಕಾಪಾಡಿ ಪರಿಸರ ಉಳಿಸಿಕೊಳ್ಳಲು ಮುಂದಾಗಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-19-1714253877