
ಸ್ವಾತಂತ್ರ್ಯ ದಿನಾಚರಣೆ: ರಾಜ್ಯದ 18 ಪೊಲೀಸ್ ಅಧಿಕಾರಿಗಳಿಗೆ ಸೇವಾ ಪದಕ
ಬೆಂಗಳೂರು: 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಕೊಡಮಾಡುವ ರಾಷ್ಟ್ರಪತಿಗಳ ವಿಶಿಷ್ಟ ಪದಕ ಹಾಗೂ ಶ್ಲಾಘನೀಯ ಸೇವಾ ಪದಕಕ್ಕೆ ರಾಜ್ಯದ 18 ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ.
ಸಿಸಿಬಿ (ಬೆಂಗಳೂರು)ಯ ಎಸಿಪಿ ಧರ್ಮೇಂದ್ರ ಅವರು ಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ ಭಾಜನರಾಗಿದ್ದಾರೆ. ಉಳಿದಂತೆ 17 ಪೊಲೀಸ್ ಅಧಿಕಾರಿಗಳಿಗೆ ಶ್ಲಾಘನೀಯ ಸೇವಾ ಪದಕಗಳನ್ನು ಪ್ರಕಟಿಸಲಾಗಿದೆ.
ಶ್ಲಾಘನೀಯ ಸೇವಾ ಪದಕ: ಸಾರಾ ಫಾತಿಮಾ (ಎಸ್‌ಪಿ), ಥಾಮಸ್ ಮ್ಯಾಥ್ಯೂ (ಕಮಾಂಡೆಂಟ್), ಟಿ. ಮಹಾದೇವ (ಎಸಿಪಿ), ಪ್ರಮಾನಂದ್ ಪಿ. ಘೋಡಕೆ (ಡಿವೈಎಸ್‌ಪಿ), ನಯೀಮ್ ಎಂ. (ಆರ್‌ಪಿಐ), ಷಣ್ಮುಖ ವರ್ಮ ಕೆ. (ಪಿಐ), ಬಾವುತ್ತೀನ್ ರುಕ್ಮುದ್ದೀನ್ ಗಡ್ಡೆಕರ್ (ಪಿಐ), ಗುರುಪ್ರಸಾದ್ ಗೋಪಾಲನಾಯಕ್ (ಪಿಐ), ಶ್ರೀನಿವಾಸ ಎಂ. (ಪಿಎಸ್‌ಐ), ಜ್ಞಾನದೇವ ನಾವಲ ತಾರಾಸೆ (ಸ್ಪೆಷಲ್ ಎಆರ್‌ಎಸ್‌ಐ), ಮರಿಯಾ ಜೋಸೆಫ್ ದಿನೇಶ್ ಕುಮಾರ್ ಎಫ್. (ಸಿಹೆಚ್‌ಸಿ-25), ನಾಗೇಶ್ ಮಂಚಯ್ಯ (ಎಹೆಚ್‌ಸಿ), ಅಬ್ದುಲ್ ಕಮಾಲ್ ಅಬ್ದುಲ್ ಹಮೀದ್ (ಸಿಹೆಚ್‌ಸಿ 62), ಮಹಾದೇವಸ್ವಾಮಿ (ಹೆಚ್‌ಸಿ: 8586)
ಚಂದ್ರಶೇಖರ್ ಜಿ. ಚಿಕ್ಕಣ್ಣನವರ್ (ಸ್ಪೆಷಲ್ ಆರ್‌ಹೆಚ್‌ಸಿ), ಎಸ್ . ಎ. ಮನೋಹರ (ಸಿಪಿಸಿ 340), ಅಬ್ದುಲ್ ರಬ್ಬಾನಿ (ಎಪಿಸಿ-233) ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.