
ಚಿಲಕಲನೇರ್ಪು ನಾಡಕಚೇರಿಗೆ ಚಪ್ಪಲಿ ನಿರ್ಬಂಧ: ಸಾರ್ವಜನಿಕರ ತೀವ್ರ ಆಕ್ರೋಶ
ಚೇಳೂರು: ತಾಲ್ಲೂಕಿನ ಚಿಲಕಲನೇರ್ಪು ನಾಡಕಚೇರಿಗೆ ವಿವಿಧ ಕೆಲಸ-ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ಹಾಗೂ ರೈತರು ಕಚೇರಿಯೊಳಗೆ ಪ್ರವೇಶಿಸುವ ಮುನ್ನ ಚಪ್ಪಲಿಗಳನ್ನು ಹೊರಗಡೆ ಬಿಡುವಂತೆ ಸೂಚಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಪಹಣಿ, ವಿವಿಧ ಪ್ರಮಾಣಪತ್ರ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗಾಗಿ ನಿತ್ಯವೂ ನೂರಾರು ಮಂದಿ ನಾಡಕಚೇರಿಗೆ ಬರುತ್ತಾರೆ. ಆದರೆ, ಕಚೇರಿ ಪ್ರವೇಶದಲ್ಲಿ ಚಪ್ಪಲಿ ಹೊರಗಡೆ ಬಿಟ್ಟು ಬರಿಗಾಲಿನಲ್ಲಿ ಒಳಗೆ ಹೋಗುವಂತೆ ಸೂಚಿಸಲಾಗುತ್ತಿದೆ. ಇದರಿಂದ ಕಚೇರಿ ಮುಂಭಾಗ ಸಾರ್ವಜನಿಕರ ಚಪ್ಪಲಿಗಳು ಸಾಲಾಗಿ ಬಿದ್ದಿರುವ ದೃಶ್ಯವೂ ಕಂಡುಬಂದಿದೆ.
ಸರ್ಕಾರಿ ಕಚೇರಿಗಳು ಸಾರ್ವಜನಿಕರ ಸೇವೆಗಾಗಿ ಇರುವುದರಿಂದ ಸಾರ್ವಜನಿಕರಿಗೆ ಅನಗತ್ಯ ತೊಂದರೆ ಕೊಡಬಾರದು. ಯಾವುದೇ ಅಧಿಕೃತ ಸರ್ಕಾರಿ ಆದೇಶ ಅಥವಾ ನಿಯಮವಿಲ್ಲದೆ ಸಾರ್ವಜನಿಕರನ್ನು ಚಪ್ಪಲಿ ಹೊರಗಡೆ ಬಿಟ್ಟು ಬರಿಗಾಲಿನಲ್ಲಿ ಕಚೇರಿಗೆ ಪ್ರವೇಶಿಸುವಂತೆ ಸೂಚಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-16-902436112