
ಬೆಳಗಾವಿಯಲ್ಲಿ ‘ಕರುನಾಡ ಸವಿಯೂಟ’ ಆರಂಭ: ಬಗೆಬಗೆಯ ಖಾದ್ಯಗಳು ಸಿದ್ಧ
ಬೆಳಗಾವಿ: ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಫ್ರೀಡಂ ಕುಕ್ಕಿಂಗ್ ಆಯಿಲ್’ ಸಹಯೋಗದಲ್ಲಿ ಬೆಳಗಾವಿಯ ದಿ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಭಾಂಗಣದಲ್ಲಿ ಶನಿವಾರ (ಆಗಸ್ಟ್ 22) ಬೆಳಿಗ್ಗೆ ‘ಕರುನಾಡ ಸವಿಯೂಟ’ ಸ್ಪರ್ಧೆ ಆರಂಭವಾಯಿತು.
ಬೆಳಗಾವಿ ಮಾತ್ರವಲ್ಲದೇ ಬೈಲಹೊಂಗಲ, ಖಾನಾಪುರ, ಚನ್ನಮ್ಮನ ಕಿತ್ತೂರು ಮುಂತಾದ ಕಡೆಯಿಂದ ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. ಸಸ್ಯಾಹಾರ, ಮಾಂಸಾಹಾರದ ಜೊತೆಗೆ ಬಗೆಬಗೆಯ ಖಾದ್ಯಗಳನ್ನು ಸಿದ್ಧಪಡಿಸಿಕೊಂಡು ಸಭಾಂಗಣಕ್ಕೆ ತಂದಿದ್ದಾರೆ.
ಈ ಸ್ಪರ್ಧೆಯಲ್ಲಿ ವಿಜೇತರಾದವರು ₹50 ಸಾವಿರ ಮೌಲ್ಯದ ಬಹುಮಾನ ಗೆಲ್ಲಬಹುದು. ಅಡುಗೆ ಕೌಶಲದಿಂದ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿ, ಆಕರ್ಷಕ ಬಹುಮಾನಗಳನ್ನು ಪಡೆಯಬಹುದು. ಇದೆಲ್ಲದರ ಜೊತೆಯಲ್ಲೇ ‘ಸುಧಾ’ ವಾರಪತ್ರಿಕೆಯಲ್ಲೂ ಕಾಣಿಸಿಕೊಳ್ಳಬಹುದು.
ಈ ಕಾರ್ಯಕ್ರಮವನ್ನು ‘ಎಲ್‌ಜಿ ಸಂಯೋಜಿತ ಹಿಂಗು’ ಪ್ರಸ್ತುತಪಡಿಸುತ್ತಿದೆ. ಇದಕ್ಕೆ ‘ನಂದಿನಿ’ ಡೈರಿ ಪಾರ್ಟನರ್ ಆಗಿದ್ದರೆ, ‘ಗೇಲ್ ಗ್ಯಾಸ್’ ಕುಕ್ಕಿಂಗ್ ಗ್ಯಾಸ್ ಪಾರ್ಟನರ್ ಆಗಿದೆ. ‘ದಿ ಚೆನ್ನೈ ಸಿಲ್ಕ್ಸ್’ ಮತ್ತು ‘ಶ್ರೀ ಕುಮಾರನ್ ಜುವೆಲರ್ಸ್’, ‘ಪೂರ್ವಿಕಾ ಮೊಬೈಲ್ಸ್’, ‘ವೆನ್‌ಕಾಬ್ ಚಿಕನ್’ ಹಾಗೂ ‘ಯುಕೆ ಪ್ರಾಪರ್ಟಿಸ್ ಮತ್ತು ಡೆವಲಪರ್ಸ್’ ಅವರ ಸಹಯೋಗವಿದೆ.
‘ಒಗ್ಗರಣೆ ಡಬ್ಬಿ’ ಕಾರ್ಯಕ್ರಮ ಖ್ಯಾತಿಯ ಮುರಳಿ ಮತ್ತು ಸುಚಿತ್ರಾ ಅವರು ತೀರ್ಪುಗಾರರಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರುಚಿ ಸವಿಯುವರು.
ಹೊಸ ಬಗೆಯ ತಿಂಡಿ, ತಿನಿಸುಗಳ ಬಗ್ಗೆ ತಿಳಿಯಬಹುದು. ಅವರೇ ತೀರ್ಪುಗಾರರಾಗಿ ಫಲಿತಾಂಶ ಪ್ರಕಟಿಸುವರು.