ಚಿತ್ರಕಲೆ,ಕಲಾವಿದನಿಗೆ ಕೃತಕ ಬುದ್ಧಿಮತ್ತೆ ಸರಿಸಾಟಿಯಲ್ಲ: ಎಂ.ಎಸ್. ಮೂರ್ತಿ

ಚಿತ್ರಕಲೆ,ಕಲಾವಿದನಿಗೆ ಕೃತಕ ಬುದ್ಧಿಮತ್ತೆ ಸರಿಸಾಟಿಯಲ್ಲ: ಎಂ.ಎಸ್. ಮೂರ್ತಿ

ಚಿತ್ರಕಲೆ,ಕಲಾವಿದನಿಗೆ ಕೃತಕ ಬುದ್ಧಿಮತ್ತೆ ಸರಿಸಾಟಿಯಲ್ಲ: ಎಂ.ಎಸ್. ಮೂರ್ತಿ

ಬೆಂಗಳೂರು: ಸೃಜನಶೀಲತೆ, ಭಾವನಾತ್ಮಕ ಅನನ್ಯತೆ ಹಾಗೂ ಸಹೃದಯಿ ಪ್ರೇಕ್ಷಕರನ್ನು ತಲುಪುವ ಸಾಮರ್ಥ್ಯ ಇದ್ದರೆ ಕೃತಕ ಬುದ್ಧಿಮತ್ತೆ (ಎ.ಐ) ಅಥವಾ ಯಾವುದೇ ತಂತ್ರಜ್ಞಾನವಿರಲಿ ಚಿತ್ರಕಲೆ ಮತ್ತು ಕಲಾವಿದನಿಗೆ ಸರಿಸಾಟಿ ಆಗುವುದಿಲ್ಲ ಎಂಬ ಅಭಿಪ್ರಾಯ ಬುಕ್‌ ಬ್ರಹ್ಮ ಸಾಹಿತ್ಯ ಉತ್ಸವದ ‘ಚಿತ್ರಕಲೆ ಮತ್ತು ಎ.ಐ’ ಗೋಷ್ಠಿಯಲ್ಲಿ ವ್ಯಕ್ತವಾಯಿತು.

​ಲೇಖಕ ರಾಜಾರಾಂ ತಲ್ಲೂರು ಅವರು ಎತ್ತಿದ ಪ್ರಶ್ನೆಗಳಿಗೆ ಉತ್ತರ ನೀಡಿದ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ, ಪ.ಸ.ಕುಮಾರ್ ಮತ್ತು ಹಿರಿಯ ಚಿತ್ರಕಲಾವಿದ ಎಂ.ಎಸ್. ಮೂರ್ತಿ, ‘ಮಾನವನ ಚೇತನ ಮತ್ತು ಅನುಭವದಿಂದ ಹುಟ್ಟುವ ಕಲೆ ಜೀವಂತಿಕಯಿಂದ ಕೂಡಿರುತ್ತದೆ. ತನ್ನ ವ್ಯಾಪ್ತಿಯಲ್ಲಿ ಲಭ್ಯ ಇರುವ ಎಲ್ಲ ಕಲಾಶೈಲಿಗಳನ್ನು ಕೇವಲ ನಕಲು ಮಾಡುವ ಎ.ಐ ತಂತ್ರಜ್ಞಾನವು, ಮಾನವನ ನೈಜ ಸೃಜನಶೀಲತೆಗೆ ಸಮವಾಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಇದನ್ನು ಸಮರ್ಥಿಸಲು ಅವರು ವಾಸ್ತುಶಿಲ್ಪದ ನೈಜ ಸೌಂದರ್ಯ ಹಾಗೂ ಪ್ರಸಿದ್ಧ ಕಲಾವಿದರ ಚಿತ್ರಕಲೆಯ ಜೀವಂತಿಕೆಯನ್ನು ಉದಾಹರಣೆಯಾಗಿ ನೀಡಿದರು. ಎ.ಐ ಎದುರು ಚಿತ್ರಕಲೆ ಮತ್ತು ಕಲಾವಿದ ಗಟ್ಟಿಯಾಗಿ ನಿಲ್ಲಬೇಕಾದರೆ ಸೃಜನಶೀಲತೆ ಉಳಿಸಿಕೊಂಡು, ಪ್ರೇಕ್ಷಕ ವರ್ಗವನ್ನು ವಿಸ್ತರಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಆತಂಕ ಬೇಡ: ಲಾಭಗಳಿಕೆ ಮತ್ತು ಹಣ ಮಾಡಲು ತಂತ್ರಜ್ಞಾನ ಸೀಮಿತವಾಗಿರುವುದರಿಂದ ಸೃಜನಶೀಲತೆ ಇರುವ ಕಲಾವಿದರು ಆತಂಕ ಪಡುವ ಅಗತ್ಯವಿಲ್ಲ. ನಕಲು ಮಾಡುವ ಸಂಸ್ಕೃತಿಯನ್ನೂ ಎ.ಐ ಮುಂದುವರಿಸುತ್ತಿದೆ. ಅನನ್ಯವಾಗಿರುವ ಮತ್ತು ಸೃಜನಶೀಲತೆ ಇರುವ ಕಲಾವಿದನನ್ನು ಯಾವ ತಂತ್ರಜ್ಞಾನವೂ ಅಲುಗಾಡಿಸಲಾಗದು ಎಂದು ಹಿರಿಯ ಕಲಾವಿದ ಎಂ.ಎಸ್‌. ಮೂರ್ತಿ ಹೇಳಿದರು.

‘ಚಿತ್ರಕಲೆ ಲೋಕ ಸಹೃದಯಿ ಪ್ರೇಕ್ಷಕರನ್ನು ಸೃಷ್ಟಿಮಾಡಿಕೊಳ್ಳಬೇಕು. ಸಾಹಿತ್ಯ ಲೋಕವು ತನ್ನ ವಿವಿಧ ಪ್ರಕಾರಗಳಿಂದ ತನ್ನದೆ ಆದ ದೊಡ್ಡಮಟ್ಟದ ಓದುವ ಬಳಗವನ್ನು ಹಿಡಿದಿಟ್ಟುಕೊಂಡಿದೆ. ಆದರೆ ಈ ಕೆಲಸ ನಮ್ಮ ಕ್ಷೇತ್ರದಲ್ಲಿ ಆಗಿಲ್ಲ. ಕಲಾವಿದರೂ ಕಡಿಮೆ ಆಗಿದ್ದಾರೆ. ಚಿತ್ರಕಲೆ ಆಸಕ್ತರ ಕೊರತೆಯಿಂದ ಬಳಲುತ್ತಿದೆಯೇ ಹೊರತು ಎ.ಐಯಿಂದ ಯಾವ ಧಕ್ಕೆಯೂ ಇಲ್ಲ’ ಎಂದು ಅಭಿಪ್ರಾಯಪಟ್ಟರು.

ಎ.ಐ ರಚಿಸಿದ ಕಲಾಕೃತಿಯಲ್ಲಿ ಜೀವ ಇರುವುದಿಲ್ಲ. ಅದು ಪ್ರತಿರೂಪ ಆಗುತ್ತದೆ ಸೃಜನಶೀಲತೆ ಕಾಪಾಡಿಕೊಂಡಿರುವ ಕಲಾವಿದರಿಗೆ ಎ.ಐ ಸ್ಪರ್ಧಿ ಅಲ್ಲ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ.ಸ.ಕುಮಾರ್‌ ಹೇಳಿದರು.

‘ಎ.ಐ ನಿಯಂತ್ರಣಕ್ಕೆ ಆರ್ಥಿಕ ಶಕ್ತಿ ಇಲ್ಲ’

‘ಬಿಲಿಯನ್‌ಗಟ್ಟಲೆ ಬಂಡವಾಳ ಹೂಡಿಕೆ ಮಾಡಿ ದೊಡ್ಡ ಕಂಪನಿಗಳು ಎ.ಐ ರೂಪಿಸಿವೆ. ಇದನ್ನು ನಿಯಂತ್ರಿಸುವುದು ಅಸಾಧ್ಯ, ನಕಲು ಮಾಡುವುದರ ವಿರುದ್ಧ ಹಾಗೂ ಕಲಾವಿದನಿಗೆ ಆದ ಅನ್ಯಾಯದ ವಿರುದ್ಧ ದನಿ ಎತ್ತಿ ಪ್ರತಿಭಟಿಸಬಹುದಷ್ಟೇ, ಇದನ್ನು ನಿಯಂತ್ರಿಸುವ ಆರ್ಥಿಕ ಶಕ್ತಿ ಅಕಾಡೆಮಿಗೆ ಇಲ್ಲ’ ಎಂದು ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ.ಕುಮಾರ್‌ ಹೇಳಿದರು.

‘ಎ.ಐಗೆ ಕಡಿವಾಣ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಬೇರೆ ಮಾಧ್ಯಮದ ಕಲೆಯನ್ನು ಕದಿಯಬಹುದು. ಆದರೆ ಕಲಾವಿದನ ನೆಲದ ಸೊಗಡು ಕದಿಯಲು ಆಗುವುದಿಲ್ಲ ’ ಎಂದು ಹಿರಿಯ ಕಲಾವಿದ ಎಂ.ಎಸ್‌. ಮೂರ್ತಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-4-292112677

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ