
ಚಾಕಿ ಕೇಂದ್ರ ಸ್ಥಾಪನೆಗೆ ಅರ್ಜಿ
ರಾಮನಗರ: 2026-27ನೇ ಸಾಲಿನ ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯ ರೇಷ್ಮೆ ಇಲಾಖೆಯ ಕೆ.ಪಿ. ದೊಡ್ಡಿಯ ಸರ್ಕಾರಿ ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಲಭ್ಯವಿರುವ ಜಮೀನು ಹಾಗೂ ಕಟ್ಟಡಗಳಲ್ಲಿ ರೇಷ್ಮೆ ಉದ್ಯಮ ಹಾಗೂ ರೇಷ್ಮೆ ಉತ್ಪಾದಕ ಸಂಸ್ಥೆಗಳ ಸಹಯೋಗದೊಂದಿಗೆ ಚಾಕಿ ಸಾಕಾಣಿಕಾ ಕೇಂದ್ರ ಸ್ಥಾಪಿಸಲು ಅರ್ಹತೆಗೊಳಪಟ್ಟು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ರೇಷ್ಮೆ ಜಂಟಿ ನಿರ್ದೇಶಕರ ಕಚೇರಿ ಅಥವಾ ರೇಷ್ಮೆ ಉಪನಿರ್ದೇಶಕರ ಕಚೇರಿಯಿಂದ ಪಡೆದು ಆ. 24ರೊಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ರೈತ ಉದ್ಯಮಿ ಕರ್ನಾಟಕ ನಿವಾಸಿಯಾಗಿಯಾಗಿದ್ದು, ನಿವಾಸ ದೃಢೀಕರಣ ಪತ್ರ ಹೊಂದಿರಬೇಕು. ರೈತ ಉತ್ಪಾದಕ ಸಂಸ್ಥೆಯು ನೋಂದಣೆಯಾಗಿರಬೇಕು. ಸಂಸ್ಥೆಯು ಚಟುವಟಿಕೆ ನಡೆಸುತ್ತಿರಬೇಕು. ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಚಾಕಿ ಸಾಕಾಣಿಕೆ ಕೇಂದ್ರ ನಡೆಸಲು ವೈಯಕ್ತಿಕವಾಗಲೀ ಸಂಸ್ಥೆಯಾಗಲೀ ನೋಂದಣಿ ಹೊಂದಿರಬೇಕು. ಜೊತೆಗೆ ರಹದಾರಿ ಹೊಂದಿರಬೇಕು. ಚಾಕಿ ಸಾಕಾಣಿಕೆ ಮಾಡುವ ಬಗ್ಗೆ ಕನಿಷ್ಠ ಒಂದು ವರ್ಷದ ಅನುಭವ ಹೊಂದಿರಬೇಕು. ಸ್ಪರ್ಧಾತ್ಮಕ ಪದ್ಧತಿ ಮೂಲಕ ದರವನ್ನು ನಿಯಮಾನುಸಾರ ನಿಗದಿಪಡಿಸಿ ಆಯ್ಕೆ ಮಾಡಿಕೊಳ್ಳಲಾಗುವುದು.
ರೈತ ಉದ್ಯಮಿ ಹಾಗೂ ರೈತ ಉತ್ಪಾದಕ ಸಂಸ್ಥೆಗಳು ಪಾಲಿಸಬೇಕಾದ ನಿಯಮ/ ಷರತ್ತುಗಳಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ರೇಷ್ಮೆ ಜಂಟಿ ನಿರ್ದೇಶಕರ ಕಚೇರಿ ಅಥವಾ ರೇಷ್ಮೆ ಉಪ ನಿರ್ದೇಶಕರ ಕಚೇರಿಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಬೆಂಗಳೂರು ದಕ್ಷಿಣ ಜಿಲ್ಲೆಯ ರೇಷ್ಮೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260809-14-442960759