ಮಳವಳ್ಳಿ, ಕನಕಪುರ ತಾಲ್ಲೂಕಿನಲ್ಲಿ ಉತ್ತಮ ಮಳೆ, ಯಾವ ಭಾಗದಲ್ಲಿ ಎಷ್ಟು?

ಮಳವಳ್ಳಿ, ಕನಕಪುರ ತಾಲ್ಲೂಕಿನಲ್ಲಿ ಉತ್ತಮ ಮಳೆ, ಯಾವ ಭಾಗದಲ್ಲಿ ಎಷ್ಟು?

ಮಳವಳ್ಳಿ, ಕನಕಪುರ ತಾಲ್ಲೂಕಿನಲ್ಲಿ ಉತ್ತಮ ಮಳೆ, ಯಾವ ಭಾಗದಲ್ಲಿ ಎಷ್ಟು?

ಬೆಂಗಳೂರು: ಕರ್ನಾಟಕದ ಕರಾವಳಿ, ಮಲೆನಾಡು ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಪ್ರಮಾಣದಲ್ಲಿ ಕುಸಿತವಾಗಿದೆ. ಕಳೆದ ವಾರ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗಿತ್ತಾದರೂ ಈ ವಾರದ ಆರಂಭದಲ್ಲಿ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ ಸೇರಿದಂತೆ ಕೆಲವು ಕಡೆ ಮಳೆಯಾಗಿದ್ದರೂ ಪ್ರಮಾಣ ತಗ್ಗಿದೆ.

ಆದರೆ, ಮಂಡ್ಯ ಜಿಲ್ಲೆ ಮಳವಳ್ಳಿ, ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲ್ಲೂಕಿನ ಹಲವು ಕಡೆಗಳಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಕಳೆದ 24 ಗಂಟೆ ಅವಧಿಯ ಮಳೆ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಐತೂರಿನಲ್ಲಿ 55 ಮಿ.ಮೀ ಮಳೆಯಾಗಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಎಚ್ ಬಸವಾಪುರ, ದಳವಾಯಿ ಕೋಡಿಹಳ್ಳಿಯಲ್ಲಿ ತಲಾ 52.5 ಮಿ.ಮೀ, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿ ಬಿಳಿನೆಲೆಯಲ್ಲಿ 48.5 ಮಿ.ಮೀ, ಮಳವಳ್ಳಿ ತಾಲ್ಲೂಕು ತೊರೆ ಕಾಡನಹಳ್ಳಿಯಲ್ಲಿ 47.5 ಮಿ.ಮೀ, ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ 47 ಮಿ.ಮೀ ಮಳೆಯಾಗಿದೆ.

ಮದ್ದೂರು ತಾಲ್ಲೂಕಿನ ಎಸ್ಐ ಹೊನ್ನಲಗೆರೆಯಲ್ಲಿ 45.5 ಮಿ.ಮೀ, ಬಂಟ್ವಾಳ ತಾಲ್ಲೂಕಿನ ಕೇಪುವಿನಲ್ಲಿ 42 ಮಿ.ಮೀ, ಮದ್ದೂರು ತಾಲ್ಲೂಕು ಬಿದರಹಳ್ಳಿಯಲ್ಲಿ 40.5 ಮಿ.ಮೀ, ತುಮಕೂರು ಜಿಲ್ಲೆ ತುರುವೆಕರೆ ತಾಲ್ಲೂಕಿನ ವಡವನಘಟ್ಟದಲ್ಲಿ 40 ಮಿ.ಮೀ ಮಳೆಯಾಗಿದೆ.

ಉಡುಪಿ ಜಿಲ್ಲೆ ಕೋಟಾದಲ್ಲಿ 39.5 ಮಿ.ಮೀ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಬಿದರಗೋಡು ಹಾಗೂ ನಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ಬೇಗಾರಿನಲ್ಲಿ 38 ಮಿ.ಮೀ, ಶೃಂಗೇರಿ ತಾಲ್ಲೂಕಿನ ಕೆರೆಯಲ್ಲಿ 37.5 ಮಿ.ಮೀ ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲ್ಲೂಕಿನ ಕ್ಯಾದಗಿಯಲ್ಲಿ 37 ಮಿ.ಮೀ ಮಳೆಯಾಗಿದೆ.

ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ, ಮರಳೆ ಬೇಕುಪ್ಪೆ, ಉಡುಪು ಜಿಲ್ಲೆ ಕುಂದಾಪುರ ತಾಲ್ಲೂಕಿನ ಬಸ್ರೂರಿನಲ್ಲಿ ತಲಾ 36 ಮಿ.ಮೀ, ಪುತ್ತೂರು ತಾಲ್ಲೂಕಿನ ಬೈಕಂಪಾಡಿಯಲ್ಲಿ 35 ಮಿ.ಮೀ, ಕನಕಪುರ ತಾಲ್ಲೂಕಿನ ಕಡಹಳ್ಳಿ, ಸಿದ್ದಾಪುರ ತಾಲ್ಲೂಕಿನ ದೊಡ್ಮನೆ, ಮಳವಳ್ಳಿ ತಾಲ್ಲೂಕು ಯತ್ತಂಬಾಡಿ, ಕೊಡಗು ಜಿಲ್ಲೆಯ ಪೆರಾಜೆಯಲ್ಲಿ ತಲಾ 34.5 ಮಿ.ಮೀ, ಕನಕಪುರ ತಾಲ್ಲೂಕು ನೆಲ್ಲಹಳ್ಳಿಯಲ್ಲಿ 33.5 ಮಿ.ಮೀ. ಮಳವಳ್ಳಿ ತಾಲ್ಲೂಕು ಹುಸ್ಕೂರು ಹಾಗೂ ಕೊಡಗಿನ ಮದೆಯಲ್ಲಿ ತಲಾ 33 ಮಿ.ಮೀ ಮಳೆಯಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ