
ನಟ ಚಿಕ್ಕಣ್ಣ ಮದುವೆ ಸಡಗರ: ಅರಿಸಿನ ಶಾಸ್ತ್ರದಲ್ಲಿ ಮಿಂದೆದ್ದ ಭಾವಿ ಪತ್ನಿ ಪಾವನಾ
- ಇ-ಪೇಪರ್
- ಜಿಲ್ಲೆ
- ಸುದ್ದಿ
- ಸಿನಿಮಾ ರಂಜನೆ
- ಅಭಿಮತ
- ವಾಸ್ತು-ಜ್ಯೋತಿಷ್ಯ
- ಸಮಗ್ರ ಮಾಹಿತಿ
- ಅಂಕಣಗಳು
- ಕ್ರೀಡೆ
- ವಾಣಿಜ್ಯ
- ತಂತ್ರಜ್ಞಾನ–ಆಟೊಮೊಬೈಲ್
- ಆರೋಗ್ಯ–ಆಹಾರ
- ಶಿಕ್ಷಣ/ಉದ್ಯೋಗ
- ಸಮಾಜ
- ಕಲೆ/ ಸಾಹಿತ್ಯ
- ಕೃಷಿ (ಕೃಷಿ–ಪರಿಸರ)
- ಪ್ರಜಾ ಮತ
- ವೈವಿಧ್ಯ
- AI (ಕೃತಕ ಬುದ್ಧಿಮತ್ತೆ) (AI)
- ಟೆಸ್ಟ್ ಡ್ರೈವ್
- ಟೆಕ್ ಟಿಪ್ಸ್ (ತಂತ್ರಜ್ಞಾನ ಟಿಪ್ಸ್)
- ತಂತ್ರಜ್ಞಾನ ಸುದ್ದಿ
- ವಾಹನ ಲೋಕ
- ವಿಜ್ಞಾನ
- ಸಾದರ ಸ್ವೀಕಾರ (Books)
- ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
- ಕಥೆ
- ಕಲೆ
- ಕವಿತೆ
- ಪುಸ್ತಕ ವಿಮರ್ಶೆ
- ಲೇಖನ / ನುಡಿಚಿತ್ರ
- ಸರಸ ಸಂಧಾನ
- ಸಂಸ್ಕೃತಿ
- ಚುನಾವಣೆ ಇನ್ಫೋಗ್ರಾಫಿಕ್ಸ್ (Election Infograph)
- ಅಭ್ಯರ್ಥಿಯ ಜೊತೆ
- ಕೇಳ್ರಪ್ಪೋ ಕೇಳಿ
- ಕ್ಷೇತ್ರ ಪರಿಚಯ
- ಚುನಾವಣಾ ಕದನ ಕಣ
- ಚುನಾವಣಾ ಕರ್ನಾಟಕ
- ಚುನಾವಣಾ ಭಾರತ
- ಚುನಾವಣಾ ವಿಶೇಷ
- ಲೋಕ ಚರಿತ್ರೆ
- PR Spot
- ಉಪಯುಕ್ತ ಯೋಜನೆಗಳು (Government Schemes)
- ಗೃಹಾಲಂಕಾರ
- ಜನಸ್ಪಂದನ
- ನಿಮಗಿದು ಗೊತ್ತೆ?
- ಪ್ರಜಾವಾಣಿ ಕ್ವಿಜ್
- ಪ್ರವಾಸ
- ಭೂಮಿಕಾ
- ಯುವ
ಕನ್ನಡದ ಹಾಸ್ಯ ನಟ ಚಿಕ್ಕಣ್ಣ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆಗಸ್ಟ್ 29, 30ರಂದು ಪಾವನಾ ಗೌಡ ಅವರೊಂದಿಗೆ ಮದುವೆಯಾಗುತ್ತಿದ್ದಾರೆ.
ಈಗಾಗಲೇ ನಟ ಚಿಕ್ಕಣ್ಣ ಅವರು ತಮ್ಮ ಮದುವೆಗೆ ಚಿತ್ರರಂಗದ ಗಣ್ಯರನ್ನು, ರಾಜಕೀಯ ನಾಯಕರು ಸೇರಿದಂತೆ ಹಲವರನ್ನು ಆಹ್ವಾನಿಸಿದ್ದಾರೆ.
ನಟ ಚಿಕ್ಕಣ್ಣ ಅವರನ್ನು ಮದುವೆಯಾಗುತ್ತಿರುವ ಭಾವಿ ಪತ್ನಿ ಪಾವನಾ ಗೌಡ ಇದೀಗ ಅರಿಸಿನ ಶಾಸ್ತ್ರದಲ್ಲಿ ಮಿಂದೆದ್ದಿದ್ದಾರೆ.
ಮದುವೆ ಸಂಭ್ರಮದಲ್ಲಿರುವ ನಟ ಚಿಕ್ಕಣ್ಣ ಭಾವಿ ಪತ್ನಿ ಅವರು ಅರಿಸಿನ ಶಾಸ್ತ್ರದಲ್ಲಿ ಬಿಳಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ.
ಅರಿಸಿನ ಶಾಸ್ತ್ರದ ಫೋಟೊಗಳನ್ನು ಪಾವನಾ ಗೌಡ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದೇ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಇತ್ತೀಚೆಗೆ ನಡೆದಿದ್ದ ಸಂದರ್ಶನದಲ್ಲಿ ಚಿಕ್ಕಣ್ಣ ಅವರು ಭಾವಿ ಪತ್ನಿ ಪಾವನಾ ಗೌಡ ಅವರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.
ಪಾವನಾ ಗೌಡ ಅವರು ‘ಪರಿಸರ ಸ್ನೇಹಿ ವಸ್ತುಗಳನ್ನು ತಯಾರಿಸುವ ಉದ್ಯಮ ಮಾಡುತ್ತಿದ್ದಾರೆ. ಇಂತಹ ಸಂಗಾತಿ ಸಿಕ್ಕಿರುವುದು ನನ್ನ ಅದೃಷ್ಟ’ ಎಂದು ಹೇಳಿಕೊಂಡಿದ್ದರು.
ಹಿರಿಯರು ನಿಶ್ಚಯಿಸಿದ ಮದುವೆ ಇದಾಗಿದ್ದು, ಪಾವನಾರನ್ನು ನೋಡಿದ ಮೇಲೆ ಪ್ರೀತಿಯಾಗಿದೆ ಎಂದು ಚಿಕ್ಕಣ್ಣ ಹೇಳಿದ್ದರು.
ಸದ್ಯ ಚಿಕ್ಕಣ್ಣ ಹಾಗೂ ಪಾವನಾ ಗೌಡ ಅವರ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಈ ಜೋಡಿ ಮದುವೆಗೆ ಚಂದನವನದ ತಾರೆಯರು ಬರುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.