ಸಿನಿಮಾದಲ್ಲಿ ನಟಿಸಲು ಸಲ್ಮಾನ್ ಆಫರ್ ನೀಡಿದ್ದರು: ಪಾಕ್ ಕ್ರಿಕೆಟಿಗ ಶೋಯಬ್ ಅಖ್ತರ್

ಸಿನಿಮಾದಲ್ಲಿ ನಟಿಸಲು ಸಲ್ಮಾನ್ ಆಫರ್ ನೀಡಿದ್ದರು: ಪಾಕ್ ಕ್ರಿಕೆಟಿಗ ಶೋಯಬ್ ಅಖ್ತರ್

ಸಿನಿಮಾದಲ್ಲಿ ನಟಿಸಲು ಸಲ್ಮಾನ್ ಆಫರ್ ನೀಡಿದ್ದರು: ಪಾಕ್ ಕ್ರಿಕೆಟಿಗ ಶೋಯಬ್ ಅಖ್ತರ್

ಬಾಲಿವುಡ್‌ನ ‘ಗ್ಯಾಂಗ್‌ಸ್ಟರ್’ ಸಿನಿಮಾ ಸೇರಿ, ಹಲವು ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಒದಗಿ ಬಂದಿದ್ದವು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಶೋಯಬ್ ಅಖ್ತರ್ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಹಲವು ವರ್ಷಗಳ ಹಿಂದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉತ್ತಮ ಸಂಬಂಧವಿತ್ತು. ಒಮ್ಮೆ ಸ್ವತಃ ಬಾಲಿವುಡ್‌ ನಟ ಸಲ್ಮಾನ್ ಖಾನ್ ಅವರು ಕರೆ ಮಾಡಿ ಸಿನಿಮಾವೊಂದರಲ್ಲಿ ನಟಿಸುವಂತೆ ಕೋರಿದ್ದರು’ ಎಂದು ಹೇಳಿಕೊಂಡಿದ್ದಾರೆ.

‘ಸಲ್ಮಾನ್ ಮಾತ್ರವಲ್ಲದೆ, ಸಿನಿಮಾದಲ್ಲಿ ನಟಿಸುವಂತೆ ಹಲವರು ಒತ್ತಾಯ ಮಾಡುತ್ತಿದ್ದರು. ಕೆಲ ನಿರ್ದೇಶಕರು ಕೂಡ ಖಳನಾಯಕನ ಪಾತ್ರಕ್ಕೆ ನೀವು ಬೆಸ್ಟ್ ಎನ್ನುತ್ತಿದ್ದರು. ಆದರೆ, ನನ್ನ ಆಸಕ್ತಿ ಕ್ರಿಕೆಟ್‌ನ ಮೇಲಿತ್ತು. ಸಿನಿಮಾ ಮತ್ತು ಕ್ರಿಕೆಟ್ ಎರಡಕ್ಕೂ ಸಮಯ ಕೊಡಲು ಸಾಧ್ಯವಿರಲಿಲ್ಲ’ ಎಂದು ಹೇಳಿದ್ದಾರೆ.

’ನಾನು ಏಕಕಾಲದಲ್ಲಿ ಕ್ರಿಕೆಟ್ ಮತ್ತು ಸಿನಿಮಾ ಎರಡನ್ನೂ ನಿರ್ವಹಿಸಲು ಸಾಧ್ಯವಿರಲಿಲ್ಲ. ವರ್ಷದಲ್ಲಿ 6 ರಿಂದ 7 ತಿಂಗಳು ಕ್ರಿಕೆಟ್ ಆಡಿ, ಉಳಿದ ಸಮಯ ಶೂಟಿಂಗ್‌ನಲ್ಲಿ ಕಳೆಯುವುದು ಅಸಾಧ್ಯವಾಗಿತ್ತು. ಒಂದು ವೇಳೆ ಸಿನಿಮಾಗೆ ಒಪ್ಪಿ ಚಿತ್ರೀಕರಣದಲ್ಲಿ ಕಾಣಿಸಿಕೊಂಡಿದ್ದರೆ, ಭಾರತೀಯ ಮಾಧ್ಯಮಗಳು ಗಾಸಿಪ್ ಸೃಷ್ಟಿಸುತ್ತಿದ್ದವು’ ಎಂದು ಹಾಸ್ಯವಾಗಿ ಹೇಳಿದ್ದಾರೆ.

ಸಲ್ಮಾನ್ ಖಾನ್ ಅವರ ಬಗ್ಗೆ ಮಾತನಾಡಿದ ಶೋಯಬ್ ಅಖ್ತರ್, ‘ನಾನು ನೋಡಲು ಸ್ವಲ್ಪ ಸಲ್ಮಾನ್ ಖಾನ್ ಅವರಂತೆಯೇ ಕಾಣುತ್ತೇನೆ. ಆದರೆ ಅವರ ಮುಂದೆ ನಾನು ಏನೂ ಅಲ್ಲ. ಅವರು ಒಳ್ಳೆಯ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿದ್ದಾರೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಅವರಿಗಿದೆ’ ಎಂದು ಹೊಗಳಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ