
ಸರಿಗಮಪ ಲಿಟಲ್ ಚಾಂಪ್ಸ್ ವಿಜೇತ ಮಂಗಳೂರಿನ ಅಶ್ಮಿತ್ ಟ್ರೋಪಿ ಜತೆ ಗೆದ್ದ ಹಣವೆಷ್ಟು?
ಕನ್ನಡದ ಜನಪ್ರಿಯ ಸಂಗೀತ ರಿಯಾಲಿಟಿ ಶೋ 'ಸರಿಗಮಪ ಲಿಟಲ್ ಚಾಂಪ್ಸ್' ಅದ್ದೂರಿ ಗ್ರ್ಯಾಂಡ್ ಫಿನಾಲೆಯಲ್ಲಿ ಮಂಗಳೂರಿನ ಅಶ್ಮಿತ್ ಗೆದ್ದು ಬೀಗಿದ್ದಾರೆ.
ಇಂದು ನಾಗರಾಜ್ ಅವರ ತಂಡದಲ್ಲಿದ್ದ ಅಶ್ಮಿತ್ ಈ ಬಾರಿಯ ಲಿಟಲ್ ಚಾಂಪ್ ಆಗಿದ್ದು, ಟ್ರೋಫಿ, ಜತೆಗೆ ₹20 ಲಕ್ಷ ನಗದು ಬಹುಮಾನ ಗೆದ್ದಿದ್ದಾರೆ.
ಗಾಯನದ ಜತೆಗೆ ವಯೋಲಿನ್ ನುಡಿಸುತ್ತಿದ್ದ ಅಶ್ಮಿತ್, ರಾಜ್ಯದಾದ್ಯಂತ ಅಭಿಮಾನಿಗಳನ್ನೂ ಗಳಿಸಿದ್ದಾರೆ.
ಫಿನಾಲೆಯಲ್ಲಿ ಅಶ್ಮಿತ್ ಅವರು, ಎರಡನೇ ಸುತ್ತಿನಲ್ಲಿ 'ಶಿವಶಂಕರಿ...ಶಿವಾನಂದ ಲಹರಿ' ಹಾಡನ್ನು ಹಾಡಿದ್ದರು.
ಮಂಗಳೂರಿನ ಅಚಿಂತ್ಯ ಮೊದಲ ರನ್ನರ್‌ಅಪ್ ಆಗಿ ಹೊರಹೊಮ್ಮಿದ್ದಾರೆ. ಇವರು ₹15 ಲಕ್ಷ ನಗದು ಬಹುಮಾನ ಹಾಗೂ ಟ್ರೋಫಿಯನ್ನು ಪಡೆದಿದ್ದಾರೆ.
ಫಿನಾಲೆಯಲ್ಲಿ ಅಶ್ಮಿತ್, ಅಚಿಂತ್ಯ, ಮಹನ್ಯಾ, ಹರುಷ್, ಜಯಲಕ್ಷ್ಮಿ ಮತ್ತು ಅವ್ಯುಕ್ತ್ ಅವರು ಚಾಂಪಿಯನ್ ಪಟ್ಟಕ್ಕಾಗಿ ಅಂತಿಮ ಸುತ್ತಿನಲ್ಲಿ ಮುಖಾಮುಖಿಯಾಗಿದ್ದರು. ಎರಡು ಹಂತಗಳಲ್ಲಿ ನಡೆದ ಸಂಗೀತ ಸ್ಪರ್ಧೆಯಲ್ಲಿ ಅಂತಿಮವಾಗಿ ಅಶ್ಮಿತ್ ಗೆದ್ದಿದ್ದಾರೆ.
ಕರ್ನಾಟಕದ ವಿವಿಧ ಭಾಗಗಳಿಂದ ಬಂದಿದ್ದ ಪುಟ್ಟ ಮಕ್ಕಳು ಕಳೆದ ಹಲವು ತಿಂಗಳುಗಳಿಂದ ತಮ್ಮ ಕಂಠ ಸಿರಿಯಿಂದ ಜನರನ್ನು ರಂಜಿಸುತ್ತಿದ್ದರು.