ವಿವಾದಗಳ ಬಗ್ಗೆ ತಲೆಕೊಡಿಸಿಕೊಳ್ಳಬೇಡಿ: ಕಿಯಾರಾಗೆ ಯಶ್‌ ಸಲಹೆ

ವಿವಾದಗಳ ಬಗ್ಗೆ ತಲೆಕೊಡಿಸಿಕೊಳ್ಳಬೇಡಿ: ಕಿಯಾರಾಗೆ ಯಶ್‌ ಸಲಹೆ

ವಿವಾದಗಳ ಬಗ್ಗೆ ತಲೆಕೊಡಿಸಿಕೊಳ್ಳಬೇಡಿ: ಕಿಯಾರಾಗೆ ಯಶ್‌ ಸಲಹೆ

ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ಚೆಂದುಳ್ಳಿ ಚೆಲುವೆ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿರುವ ತಬಾಹಿ ಹಾಡು, ಸಿನಿ ಜಗತ್ತಿನಾದ್ಯಂತ ಸುದ್ದಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿಯೂ, ಇವರಿಬ್ಬರ ಬೋಲ್ಡ್‌ ದೃಶ್ಯಗಳು, ಕೆಮಿಸ್ಟ್ರಿಯದ್ದೇ ಮಾತು.

ಜುಲೈ 8ರಂದೇ ಬಿಡುಗಡೆಯಾಗಿರುವ ಈ ಹಾಡು, ಬಹುನಿರೀಕ್ಷಿತ ‘ಟಾಕ್ಸಿಕ್‌: ಎ ಫೇರಿಟೇಲ್‌ ಫಾರ್‌ ಗ್ರೋನ್‌ ಅಪ್ಸ್‌’ ಸಿನಿಮಾದ್ದು. ಇದೇ ತಿಂಗಳು 26ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿರುವ ಚಿತ್ರದ ಟ್ರೇಲರ್‌ ನಿನ್ನೆಯಷ್ಟೇ (ಆಗಸ್ಟ್ 8) ಬಿಡುಗಡೆಯಾಗಿದೆ.

ʼತಬಾಹಿʼ ಹಾಡಿನಲ್ಲಿ ಯಶ್‌ ಹಾಗೂ ಕಿಯಾರಾ ಹಾಟ್‌ ಅವತಾರ ಕಂಡು ನೆಟ್ಟಿಗರು ಹುಬ್ಬೇರಿಸಿದ್ದಾರೆ. ಕೆಲವರು, ಮದುವೆಯ ನೆಪ ಮಾಡಿಕೊಂಡು ಕಿಯಾರಾ ಅವರನ್ನು ಟ್ರೋಲ್‌ ಮಾಡಿದ್ದಾರೆ.

ಈ ಬಗ್ಗೆ, ಟ್ರೇಲರ್‌ ಬಿಡುಗಡೆ ವೇದಿಕೆಯಲ್ಲಿ ಮಾತನಾಡಿರುವ ಯಶ್‌, ನಟಿ ಕಿಯಾರಾ ಅಭಿನಯವನ್ನು ʼತಬಾಹಿʼ ಎಂದಿದ್ದಾರೆ. ವಿವಾದ ಅಥವಾ ಜನರು ಏನು ಹೇಳುತ್ತಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದಿರುವಂತೆ ಸಲಹೆ ನೀಡಿದ್ದಾರೆ. ಉರ್ದು/ಹಿಂದಿ ಮೂಲದ ʼತಬಾಹಿʼ ಪದಕ್ಕೆ ʼಸರ್ವನಾಶʼ ಎಂಬ ಅರ್ಥವಿದೆ.

ʼಈ ಸಿನಿಮಾದಲ್ಲಿ ನಿಮ್ಮ ಅಭಿನಯದ ಝಲಕ್‌ ಅನ್ನು ಮಾತ್ರವೇ ಟ್ರೇಲರ್‌ನಲ್ಲಿ ನೋಡಿದ್ದೇವೆ. ತುಂಬಾ ಸಮರ್ಪಣಾ ಭಾವ ಹೊಂದಿದ್ದೀರಿ. ನೀವು ಕಷ್ಟಪಟ್ಟು ಕೆಲಸ ಮಾಡುವುದನ್ನು ನೋಡಿದ್ದೇನೆʼ ಎಂದು ಹೇಳಿದ್ದಾರೆ.

ಹಾಡು ಬಿಡುಗಡೆ ಬಳಿಕ ಎದುರಾದ ವಿವಾದ ಹಾಗೂ ಟೀಕೆಗಳಿಗೆ ಚಿಂತಿಸಬೇಕಾಗಿಲ್ಲ. ನೀವು ಯಾವುದನ್ನು ನಂಬುತ್ತೀರೋ ಅದನ್ನು ಮಾಡಿ. ಜನರು ಇಷ್ಟಪಡುತ್ತಾರೆ. ಸಂಭ್ರಮಿಸುತ್ತಾರೆ ಎಂದಿದ್ದಾರೆ.‌

ʼಕಾಲಕ್ಕೆ ತಕ್ಕಂತೆ ನಡೀಬೇಕುʼ

ಕಿಯಾರಾ ಕುರಿತು ಮಾತನಾಡುವ ಮುನ್ನ ಕನ್ನಡದಲ್ಲೇ ಮಾತು ಆರಂಭಿಸಿದ ಯಶ್‌, ʼಟಾಕ್ಸಿಕ್‌ ಕಾರಣಕ್ಕೆ ನಾವು ಇಂದು ಸೇರಿರುವುದಕ್ಕೆ ಕಾರಣ ಕರ್ನಾಟಕದ ಜನ. ಅವರು ನನಗೆ ಪ್ರತಿ ಗೆಲುವು ನೀಡಿದಾಗಲೂ, ಅದು ನನ್ನ ಸಾಧನೆಯಲ್ಲ; ಮತ್ತೊಂದು ಕೆಲಸ ಮಾಡುವುದಕ್ಕೆ ವಹಿಸಿದ ಜವಾಬ್ದಾರಿ ಎಂದೇ ಭಾವಿಸಿ ಹೆಜ್ಜೆ ಇಟ್ಟಿದ್ದೀನಿ’ ಎಂದು ಹೇಳಿದ್ದಾರೆ.

‘ಟಾಕ್ಸಿಕ್‌ ನೀವು ಕೊಟ್ಟಿರುವ ಹಳೇ ಗೆಲುವಿನ ಪ್ರತೀಕ. ಈಗ ಮುಂದಿನ ಹೆಜ್ಜೆ ಇಡುತ್ತಿದ್ದೇವೆ. ನಿಮ್ಮ ಆಶೀರ್ವಾದ ಇರಲಿ. ಯಶ್‌ ಮೇಲೆ ನಂಬಿಕೆ ಇರಲಿ. ದಾರಿ ಯಾವುದೇ ಇರಲಿ. ಗುರಿ ಮುಟ್ಟಬೇಕು. ಆ ದಾರಿಯಲ್ಲಿ ಕೆಲವು ಹೋರಾಟ ಇರುತ್ತೆ. ಹೋರಾಡುತ್ತಾ ಮುಟ್ಟಬೇಕು. ಕೆಲವೊಮ್ಮ ಕಾಲಕ್ಕೆ ತಕ್ಕಂತೆ ನಡೆಯಬೇಕು. ತಾಳಕ್ಕೆ ತಕ್ಕಂತೆ ಕುಣಿಯಬೇಕು’ ಎಂದಿದ್ದಾರೆ.

‘ಇದು ಯಶ್‌ ಸಿನಿಮಾ ಅಲ್ಲ; ಭಾರತೀಯ ಸಿನಿಮಾ. ಎಲ್ಲ ದೊಡ್ಡ ದೊಡ್ಡ ನಟರು, ಎಲ್ಲ ಯಶಸ್ವಿ ವ್ಯಕ್ತಿಗಳು, ಪ್ರತಿಭಾವಂತರು ತಮ್ಮ ಅಹಂ, ತಮ್ಮದೇ ಗುರಿಯನ್ನು ಪಕ್ಕಕ್ಕಿಟ್ಟು ಈ ಸಿನಿಮಾದಲ್ಲಿ ನಟಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ