
ರೈತಪರ ಪಾದಯಾತ್ರೆಯಲ್ಲ, ನಿಖಿಲ್ ಪಟ್ಟಾಭಿಷೇಕದ ಯಾತ್ರೆ: ಸಚಿವ ಬಾಲಕೃಷ್ಣ ವ್ಯಂಗ್ಯ
ಚನ್ನಪಟ್ಟಣ (ರಾಮನಗರ): ಬಿಡದಿ ಟೌನ್ ಶಿಪ್ ಕುರಿತು ಜೆಡಿಎಸ್ ನವರು ಮಾಡುತ್ತಿರುವುದು ರೈತಪರ ಪಾದಯಾತ್ರೆಯಲ್ಲ. ಬದಲಿಗೆ, ನಿಖಿಲ್ ಕುಮಾರಸ್ವಾಮಿ ಅವರಿಗೆ ಪಟ್ಟಾಭಿಷೇಕ ಮಾಡುವ ಯಾತ್ರೆಯಾಗಿದೆ ಎಂದು ಸಚಿವ ಎಚ್.ಸಿ. ಬಾಲಕೃಷ್ಣ ವ್ಯಂಗ್ಯವಾಡಿದರು.
ತಾಲ್ಲೂಕಿನ ಕೆಂಗಲ್ ನಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಸೋಮವಾರ ಬೆಳಿಗ್ಗೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಗನ ಪಟ್ಟಾಭಿಷೇಕ ಯಾತ್ರೆಗೆ ನಿನ್ನೆ ಅಪ್ಪ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ. ಇಂದು ತಾತ ಎಚ್.ಡಿ. ದೇವೇಗೌಡ ಬಂದಿದ್ದಾರೆ ಎಂದರು.
ಪಾದಯಾತ್ರೆಯಲ್ಲಿ ಭಾಗವಹಿಸಿರುವ ನಾಯಕರು ಹಾಗೂ ಕಾರ್ಯಕರ್ತರಲ್ಲೂ ರೈತಪರವಾದ ಕಾಳಜಿ ಕಾಣುತ್ತಿಲ್ಲ. ಯಾಕೆಂದರೆ ಅವರು ಮಾಡುತ್ತಿರುವುದು ನಿಖಿಲ್ ಪಟ್ಟಾಭಿಷೇಕ ಯಾತ್ರೆಯನ್ನು. ಹೀಗಿರುವಾಗ ಅವರಿಗೆ ರೈತಪರ ಕಾಳಜಿ ಎಲ್ಲಿಂದ ಬರಬೇಕು ಎಂದು ಹೇಳಿದರು.
ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬರ ವೀಕ್ಷಣೆಗಾಗಿ ಚನ್ನಪಟ್ಟಣ ತಾಲ್ಲೂಕಿನ ಕಡಗೆ ಹೊರಟರು.