ಕೊಪ್ಪಳ: ಕಾವಲುಗೋಪುರಕ್ಕೆ ಬೇಕಿದೆ ಕಾಯಕಲ್ಪ

ಕೊಪ್ಪಳ: ಕಾವಲುಗೋಪುರಕ್ಕೆ ಬೇಕಿದೆ ಕಾಯಕಲ್ಪ

ಕೊಪ್ಪಳ: ಕಾವಲುಗೋಪುರಕ್ಕೆ ಬೇಕಿದೆ ಕಾಯಕಲ್ಪ

ಕೊಪ್ಪಳ: ಜಿಲ್ಲಾ ಕೇಂದ್ರದಿಂದ 18 ಕಿ.ಮೀ. ಅಂತರದಲ್ಲಿರುವ ಕಲ್ಲತಾವರಗೇರಿ ಗ್ರಾಮದಲ್ಲಿರುವ ಪುರಾತನ ಕಾವಲು ಗೋಪುರ ಸೂಕ್ತ ನಿರ್ವಹಣೆಯಿಲ್ಲದೆ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ.

ಹೈದರಾಬಾದ್ ನಿಜಾಮರ, ಡಕಾಯಿತರ ಹಾಗೂ ರಜಾಕಾರರ ಕಿರುಕುಳ ಈ ಭಾಗದಲ್ಲಿ ತೀವ್ರವಾಗಿತ್ತು. ಸಾಮಾನ್ಯ ಜನರನ್ನು ಹಿಂಸಿಸುವುದು, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕೊಲೆಗಳಂತಹ ಅನಾಚಾರಗಳು ನಡೆಯುತ್ತಿದ್ದ ಆ ಕಠಿಣ ದಿನಗಳಲ್ಲಿ, ವೈರಿಗಳ ದಾಳಿಯಿಂದ ಗ್ರಾಮಸ್ಥರನ್ನು ರಕ್ಷಿಸಲು ಮತ್ತು ಮುನ್ನೆಚ್ಚರಿಕೆ ವಹಿಸಲು ಈ ಗೋಪುರವನ್ನು ನಿರ್ಮಿಸಿರಬಹುದು ಎಂದು ಗ್ರಾಮದ ಕೆಲ ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಕಾವಲು ಗೋಪುರದ ವಾಸ್ತುಶಿಲ್ಪ ಕುತೂಹಲಕಾರಿಯಾಗಿದೆ. ಎತ್ತರದ ಬಂಡೆ ಹಾಗೂ ದಾಳಿಕೋರರ ಸುಲಭ ಪ್ರವೇಶ ತಡೆಯಲು ಸುಮಾರು 15 ಅಡಿಗಿಂತಲೂ ಎತ್ತರದ ತಂಗಾಳಿ ಗುಂಡಿನ ಮೇಲೆ ಸುಮಾರು 15 ಅಡಿಯಷ್ಟು ವೃತ್ತಾಕಾರದ ಗೋಪುರವನ್ನು ಕಟ್ಟಲಾಗಿದೆ. ಸ್ಥಳೀಯವಾಗಿ ಇದನ್ನು 'ಹುಡೇವು' ಅಥವಾ 'ಬುರುಜು' ಎಂದೂ ಕರೆಯಲಾಗುತ್ತದೆ. ಗೋಪುರದ ಕೆಳಭಾಗದಲ್ಲಿರುವ ದೊಡ್ಡ ಕಲ್ಲು ಬಂಡೆಯನ್ನು ಏರಿದ ಮೇಲೆಯೇ ಒಳಪ್ರವೇಶಿಸಲು ಸಾಧ್ಯ. ಪೂರ್ವ ಮತ್ತು ಉತ್ತರ ದಿಕ್ಕಿನಿಂದ ಬರುವ ಶತ್ರುಗಳ ಮೇಲೆ ನಿಗಾವಹಿಸಲು ಈಶಾನ್ಯ ದಿಕ್ಕಿನಲ್ಲಿ ಒಂದು ಸಣ್ಣ ಚೌಕಾಕಾರದ ದ್ವಾರವಿದ್ದರೆ, ಪೂರ್ವ ಮತ್ತು ದಕ್ಷಿಣ ದಿಕ್ಕಿನ ನಡುವೆ ಮೇಲ್ಭಾಗದಲ್ಲಿ ಮತ್ತೊಂದು ಚಿಕ್ಕ ಕಮಾನಿನಾಕಾರದ ದ್ವಾರವಿದೆ.

ಗೋಪುರದ ಪಶ್ಚಿಮ ಭಾಗದಲ್ಲಿರುವ ಹೊಲ-ಗದ್ದೆಗಳನ್ನು ಇಂದಿಗೂ 'ಚಿಕ್ಕೇರಿ ಗದ್ದೆ' ಎಂದು ಕರೆಯಲಾಗುತ್ತದೆ. ಬಹುಶಃ ಹಿಂದೆ ಇಲ್ಲೊಂದು ಚಿಕ್ಕ ಕೆರೆ ಇದ್ದಿರಬಹುದೆಂದು, ಅದು ಅಲ್ಲಿನ ದನಕರುಗಳ ದಾಹವನ್ನು ನೀಗಿಸುವುದರ ಜೊತೆಗೆ ಕೃಷಿಗೂ ಬಳಕೆಯಾಗುತ್ತಿತ್ತು ಎಂಬ ಅಭಿಪ್ರಾಯವಿದೆ.

ಈ ಗೋಪುರದ ಸಮೀಪದಲ್ಲೇ ಭರಮದೇವರ ಗುಡಿ ಹಾಗೂ 'ಮೂಕ (ಮೌನ) ಹನುಮಪ್ಪನ ಗುಡಿ'ಗಳಿವೆ. ಇತ್ತೀಚೆಗೆ ಗ್ರಾಮದ ಈಶಪ್ಪ ತಂಬ್ರಳ್ಳಿ ಅವರ ಜಮೀನಿನಲ್ಲಿ ದೊರೆತ ದಾನಶಿಲಾ ಶಾಸನವು ಈ ಊರಿನ ಐತಿಹಾಸಿಕ ಶ್ರೀಮಂತಿಕೆಗೆ ಹೊಸ ಮೆರುಗು ನೀಡಿದೆ.

ವರ್ಷಗಳು ಕಳೆದಂತೆ, ಗಾಳಿ ಮತ್ತು ಮಳೆಯ ಹೊಡೆತಕ್ಕೆ ಸಿಲುಕಿ ಗೋಪುರದ ಮೇಲ್ಭಾಗವು ಸ್ವಲ್ಪ ಮಟ್ಟಿಗೆ ಕುಸಿದಿದೆ. ಒಳಭಾಗದ ಮೆಟ್ಟಿಲುಗಳು ಶಿಥಿಲಗೊಂಡಿದ್ದು, ಗಿಡ-ಗಂಟಿಗಳು ಬೆಳೆದುಕೊಂಡಿವೆ. ಇದನ್ನು ಉಳಿಸುವ ಕೆಲಸವಾಗಬೇಕಾಗಿದೆ ಎಂದು ಗ್ರಾಮದ ಯುವಕ ಶ್ರೀಧರ ಎಸ್. ವಾಣಿ ಆಗ್ರಹಿಸುತ್ತಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ