ಲಕ್ಷ ಲಕ್ಷ ಖರ್ಚಾದರೂ ‘ಯಕ್ತಾಪುರ’ದಲ್ಲಿಲ್ಲ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ

ಲಕ್ಷ ಲಕ್ಷ ಖರ್ಚಾದರೂ ‘ಯಕ್ತಾಪುರ’ದಲ್ಲಿಲ್ಲ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ

ಲಕ್ಷ ಲಕ್ಷ ಖರ್ಚಾದರೂ ‘ಯಕ್ತಾಪುರ’ದಲ್ಲಿಲ್ಲ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ

ಕೆಂಭಾವಿ: ಇಲ್ಲಿಗೆ ಸಮೀಪದ ಯಕ್ತಾಪುರ ಗ್ರಾಮದಲ್ಲಿ ಕಳೆದ 10 ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯದೆ ನಿತ್ಯವೂ ಪರದಾಡುವ ಪರಿಸ್ಥಿತಿ ಮುಂದುವರಿದಿದೆ. ಗ್ರಾಮಕ್ಕೆ ಸರಬರಾಜು ಆಗುವು ಏಕೈಕ ಬಾವಿಯ ನೀರು ಕ್ರಮೇಣ ಕಡಿಮೆಯಾಗುತ್ತಿದ್ದು, ಇದರಿಂದ ಆತಂಕ ಉಂಟಾಗಿದೆ.

‘ಗ್ರಾಮದಲ್ಲಿದ್ದ ಒಂದು ಬಾವಿಯೂ ಬತ್ತಿಹೋಗುವ ಸ್ಥಿತಿ ತಲುಪಿದ್ದು, ಸಮಸ್ಯೆ ಶಾಶ್ವತವಾಗಿ ಮುಂದುವರಿಯುವಂತಿದೆ. ಗ್ರಾಮ ಪಂಚಾಯಿ ತಿಯಾಗಿರುವ ಯಕ್ತಾಪುರ ಮೂವರು ಸದಸ್ಯರು ಹೊಂದಿದೆ. 1 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಇಲ್ಲಿ ಒಂದು ಸೇದು ಬಾವಿಯಿದ್ದು ಅದರ ನೀರು ದಿನಬಳಕೆಗೆ ಮಾತ್ರ ಉಪಯೋಗಿಸಬಹುದಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ’ ಎನ್ನುತ್ತಾರೆ ಶಿವಶಂಕರ ಹೊಸಮನಿ.

‘ಕಳೆದ ಕೆಲ ತಿಂಗಳ ಹಿಂದಷ್ಟೆ ಶಾಸಕರ ಅನುದಾನದಲ್ಲಿ ಸುಮಾರು ₹ 60 ಲಕ್ಷ ವೆಚ್ಚದಲ್ಲಿ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆಯಡಿ ಚಿಂಚೋಳಿ ಗ್ರಾಮದಿಂದ ಪೈಪ್‌ಲೈನ್ ಮಾಡಲಾಗಿತ್ತು. ಬಹುತೇಕ ಕಾಮಗಾರಿ ಮುಗಿದೆ ಎಂದು ಹೇಳಲಾಗುತ್ತಿದ್ದರು ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆಹರಿದಿಲ್ಲ’ ಎನ್ನುತ್ತಾರೆ ಸಿದ್ದು ಅಸ್ಕಿ.

ಕಳೆದ 4 ವರ್ಷದಿಂದ ಶುದ್ಧ ಕುಡಿಯುವ ನೀರಿನ ಘಟಕದ ಮೋಟಾರ್ ದುರಸ್ತಿ ಮಾಡದಿರುವುದರಿಂದ ಘಟಕ ಹಾಳುಬಿದ್ದಿದೆ. ಇದನ್ನಾದರೂ ದುರಸ್ತಿ ಮಾಡಿದರೆ ಜನರು ಶುದ್ಧ ನೀರು ಕುಡಿಯಬಹುದು. ಆದರೆ, ಗ್ರಾಮ ಪಂಚಾಯಿತಿ ಅಧಿಕಾರಿ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಗ್ರಾಮಸ್ಥರು ಅನೇಕ ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.

‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕುಡಿಯುವ ನೀರು, ರಸ್ತೆ, ಚಂರಡಿ, ಶೌಚಾಲಯ ಸೇರಿದಂತೆ ಗ್ರಾಮೀಣ ಭಾಗದ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಗ್ರಾ.ಪಂ.ಗೆ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡುತ್ತಿದ್ದು, ಹಣ ಸರಿಯಾಗಿ ಬಳಕೆಯಾಗದಿರುವುದೇ ನೀರಿನ ಸಮಸ್ಯೆ ಈ ಮಟ್ಟಕ್ಕೆ ತಲು‍ಪಲು ಕಾರಣವಾಗಿದೆ. ಕ್ಷೇತ್ರದ ಶಾಸಕರು ಮತ್ತು ಜಿಲ್ಲಾಧಿಕಾರಿಯವರು ಇತ್ತಗಮನ ಹರಿಸಬೇಕು’ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ವರ್ಷಪೂರ್ತಿ ನೀರಿನ ಸಮಸ್ಯೆ ಕಾಡುತ್ತಿದೆ. ಕಳೆದ ಕೆಲ ತಿಂಗಳ ಹಿಂದೆ ಮಾಡಿದ ಕುಡಿಯುವ ನೀರಿನ ಯೋಜನೆ ಹಳ್ಳ ಹಿಡಿದಿದೆ.

-ಸಿದ್ದು ಅಸ್ಕಿ, ಕೋಲಿ ಸಮಾಜದ ಅಧ್ಯಕ್ಷ

ಗ್ರಾಮದಲ್ಲಿ ನಲ್ಲಿ ನೀರು ಬರದೆ ಸೇದು ಬಾವಿಯಿಂದ ನಿತ್ಯ ನೀರು ತರಬೇಕಾಗಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳು ನೀರಿನ ಸಮಸ್ಯೆ ಬಗೆಹರಿಸಬೇಕು.

-ಶಿವಶಂಕರ ಹೊಸಮನಿ, ಗ್ರಾಮಸ್ಥ

ಕುಡಿಯುವ ನೀರಿನ ಸಮಸ್ಯೆ ಗಮನಕ್ಕೆ ಬಂದಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮಾತನಾಡಿ ಶೀಘ್ರದಲ್ಲಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು.

-ಬಸವರಾಜ ಸಜ್ಜನ್, ಇಒ ತಾಲ್ಲೂಕು ಪಂಚಾಯಿತಿ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260820-30-1715993522

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ